ಯಾವ ಬ್ರಾ ತೊಡುತ್ತೀರಿ ಎಂದು ಹೀರೋಯಿನ್ಅನ್ನು​ ಪ್ರಶ್ನಿಸಿದ ಅಭಿಮಾನಿ; ಮುಜುಗರ ಇಲ್ಲದೆ ಉತ್ತರಿಸಿದ 19 ವರ್ಷದ ನಟಿ

Anikha Surendran: ಇತ್ತೀಚೆಗೆ ಅವರು ‘ಆಸ್ಕ್​ ಮಿ ಎನಿಥಿಂಗ್​’ ಸೆಶನ್​ ಆರಂಭಿಸಿದ್ದರು. ಹಿಂಬಾಲಕರು ಪ್ರಶ್ನೆ ಕೇಳುತ್ತಾರೆ. ಖಾತೆ ಬಳಕೆದಾರರು ಈ ಪ್ರಶ್ನೆಗೆ ಉತ್ತರ ನೀಡಬೇಕು. ಅನಿಖಾ ನಾನಾ ರೀತಿಯ ಪ್ರಶ್ನೆಗಳು ಎದುರಾಗಿದ್ದವು.

ಯಾವ ಬ್ರಾ ತೊಡುತ್ತೀರಿ ಎಂದು ಹೀರೋಯಿನ್ಅನ್ನು​ ಪ್ರಶ್ನಿಸಿದ ಅಭಿಮಾನಿ; ಮುಜುಗರ ಇಲ್ಲದೆ ಉತ್ತರಿಸಿದ 19 ವರ್ಷದ ನಟಿ
ಯಾವ ಬ್ರಾ ತೊಡುತ್ತೀರಿ ಎಂದು ಹೀರೋಯಿನ್ಅನ್ನು​ ಪ್ರಶ್ನಿಸಿದ ಅಭಿಮಾನಿ; ಮುಜುಗರ ಇಲ್ಲದೆ ಉತ್ತರಿಸಿದ 19 ವರ್ಷದ ನಟಿ
Follow us
TV9 Web
| Updated By: Digi Tech Desk

Updated on:Sep 17, 2021 | 11:05 AM

ಸಾಮಾಜಿಕ ಜಾಲತಾಣದ ವ್ಯಾಪ್ತಿ ತುಂಬಾನೇ ಹಿರಿದಾಗುತ್ತಿದೆ. ದೇಶದ ಬಹುತೇಕರು ಮೊಬೈಲ್​ ಬಳಕೆ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಸೆಲೆಬ್ರಿಟಿಗಳ ಅಭಿಮಾನಿ ಬಳಗ ಹಿರಿದಾಗಿದೆ. ಅಷ್ಟೇ ಅಲ್ಲ, ದೇಶದ ಮೂಲೆಮೂಲೆಗೆ ತಲುಪೋಕೆ ಸ್ಟಾರ್​ಗಳಿಗೆ ಸುಲಭವಾಗುತ್ತಿದೆ. ಇದು ಒಂದು ರೀತಿಯಲ್ಲಿ ಪ್ಲಸ್​ ಆದರೆ, ಮತ್ತೊಂದು ಕಡೆ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿದೆ. ಈಗ ಯುವ ನಟಿಗೆ ಸೋಶಿಯಲ್​ ಮೀಡಿಯಾದಲ್ಲಿ ವಿಚಿತ್ರ ಪ್ರಶ್ನೆ ಒಂದು ಎದುರಾಗಿದೆ. ಇದಕ್ಕೆ ಅವರು ಉತ್ತರಿಸೋಕೆ ಮುಜುಗರ ಮಾಡಿಕೊಳ್ಳಲಿಲ್ಲ.

ಅನಿಖಾ ಸುರೇಂದ್ರನ್​ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಅಜಿತ್​ ನಟನೆಯ ‘ಯೆನ್ನೈ ಅರಿಂಧಾಲ್​’ ಮತ್ತು ‘ವಿಶ್ವಾಸಮ್​’ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡರು ಅವರು. 19 ವರ್ಷದ ಈ ನಟಿ ಈಗ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳ ಜತೆ ಅವರು ಹೆಚ್ಚು ಕನೆಕ್ಟ್​ ಆಗೋಕೆ ಪ್ರಯತ್ನಿಸುತ್ತಾರೆ.

ಇತ್ತೀಚೆಗೆ ಅವರು ‘ಆಸ್ಕ್​ ಮಿ ಎನಿಥಿಂಗ್​’ ಸೆಶನ್​ ಆರಂಭಿಸಿದ್ದರು. ಹಿಂಬಾಲಕರು ಪ್ರಶ್ನೆ ಕೇಳುತ್ತಾರೆ. ಖಾತೆ ಬಳಕೆದಾರರು ಈ ಪ್ರಶ್ನೆಗೆ ಉತ್ತರ ನೀಡಬೇಕು. ಅನಿಖಾಗೆ ನಾನಾ ರೀತಿಯ ಪ್ರಶ್ನೆಗಳು ಎದುರಾಗಿದ್ದವು. ಇದರಲ್ಲಿ ಒಂದು ಪ್ರಶ್ನೆ ಎಲ್ಲರ ಗಮನ ಸೆಳೆದಿತ್ತು. ‘ಇದು ಸ್ವಲ್ಪ ವಿಚಿತ್ರವಾಗಿರಬಹುದು. ಆದರೆ ನನಗೆ ಬ್ರಾಗಳ ಬಗ್ಗೆ ಸಲಹೆಗಳ ಅಗತ್ಯವಿದೆ. ನೀವು ಏನು ಬಳಸುತ್ತೀರಿ? ಧನ್ಯವಾದಗಳು’ ಎಂದು ಪ್ರಶ್ನೆ ಮಾಡಿದ್ದರು ಅಭಿಮಾನಿ.

ಈ ಪ್ರಶ್ನೆಯನ್ನು ಅನಿಖಾ ಪೋಸ್ಟ್​ ಮಾಡದೆಯೂ ಇರಬಹುದಿತ್ತು. ಆದರೆ, ಅವರು ಈ ಬಗ್ಗೆ ಯಾವುದೇ ಮುಜುಗರ ಮಾಡಿಕೊಂಡಿಲ್ಲ. ‘ಸರಿಯಾದ ಗಾತ್ರದ ಹತ್ತಿಯ ಬ್ರಾ ಬಳಸಲು ಸಲಹೆ ನೀಡುತ್ತೇನೆ. ಪ್ರಾಮಾಣಿಕವಾಗಿ ಅದು ವಿಚಿತ್ರವಾಗಿ ಕಾಣುತ್ತದೆ. ನಾನು ಈಗ ಆನ್‌ಲೈನ್‌ನಲ್ಲಿ ಬ್ರಾಗಳನ್ನು ಖರೀದಿಸುತ್ತಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಹೆಣ್ಣುಮಕ್ಕಳು ಒಳಉಡುಪಿನ ಬಗ್ಗೆ ಮಾತನಾಡೋಕೆ ಮುಜುಗರ ಮಾಡಿಕೊಳ್ಳಬಾರದು ಎನ್ನುವ ಬಗ್ಗೆ ಅನೇಕರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈ ಸಾಲಿಗೆ ಈಗ ಅನಿಖಾ ಕೂಡ ಸೇರ್ಪಡೆ ಆದಂತಾಗಿದೆ. ತೆಲುಗಿನ ‘ಬುಟ್ಟ ಬೊಮ್ಮ’ ಸಿನಿಮಾದಲ್ಲಿ ಅನಿಖಾ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಗಾರ್ಜುನ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಲಯಾಳಂ​ನ ‘ಕಪ್ಪೆಲಾ’ ಚಿತ್ರದ ರಿಮೇಕ್​ ಇದಾಗಿದೆ.

ಇದನ್ನೂ ಓದಿ: ‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು

ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್​ಗೆ ಖುಷಿಯಾಗೋ ವಿಚಾರ

Published On - 2:20 pm, Fri, 3 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ