ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರೀಕರಣದ ವೇಳೆ ಕುದುರೆ ಸಾವು; ದೂರು ನೀಡಿದ ಪೆಟಾ

ನಿರ್ಮಾಪಕ, ನಿರ್ದೇಶಕ ಮಣಿರತ್ನಂ ಅವರ ತಮಿಳು ಚಿತ್ರ ‘ಪೊನ್ನಿಯಿನ್ ಸೆಲ್ವನ್’ ಚಿತ್ರೀಕರಣದ ಸಮಯದಲ್ಲಿ ಕುದುರೆ ಸಾವನ್ನಪ್ಪಿದೆ ಎಂದು ಪೆಟಾ ದೂರು ದಾಖಲಿಸಿದೆ. ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪೆಟಾ ತಂತ್ರಜ್ಞಾನದ ಆಯ್ಕೆ ಇರುವಾಗ ನೈಜ ಪ್ರಾಣಿಯನ್ನೇಕೆ ಬಳಸುತ್ತೀರಿ ಎಂದು ಕಿಡಿಕಾರಿದೆ.

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಚಿತ್ರೀಕರಣದ ವೇಳೆ ಕುದುರೆ ಸಾವು; ದೂರು ನೀಡಿದ ಪೆಟಾ
‘ಪೊನ್ನಿಯಿನ್ ಸೆಲ್ವನ್’ ಚಿತ್ರದ ನಿರ್ದೇಶಕ ಮಣಿರತ್ನಂ
Follow us
| Updated By: shivaprasad.hs

Updated on: Sep 03, 2021 | 3:13 PM

ಹೈದರಾಬಾದ್: ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮಣಿರತ್ನಂ ಅವರ ತಮಿಳು ಚಿತ್ರ ‘ಪೊನ್ನಿಯಿನ್ ಸೆಲ್ವನ್’ ಚಿತ್ರೀಕರಣದ ವೇಳೆ ಕುದುರೆಯೊಂದು ಸಾವಿಗೀಡಾಗಿದೆ. ಇದಕ್ಕೆ ಸಂಬಂದಪಟ್ಟಂತೆ ಪೆಟಾ ನೀಡಿದ ದೂರಿನ ಆಧಾರದಲ್ಲಿ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ತನಿಖೆಗೆ ಕೋರಿದೆ. ಪೆಟಾ ಇಂಡಿಯಾದ ಸ್ವಯಂಸೇವಕರೊಬ್ಬರು ಆಗಸ್ಟ್ 11 ರಂದು ಫಿಲ್ಮ್ ಸ್ಟುಡಿಯೋ ಬಳಿಯ ಖಾಸಗಿ ಜಮೀನಿನಲ್ಲಿ ಚಿತ್ರೀಕರಣದ ಸಮಯದಲ್ಲಿ ಕುದುರೆ ಸಾವನ್ನಪ್ಪಿದೆ ಎಂದು ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ಧಾರೆ.

ದೂರಿನ ಆಧಾರದ ಮೇಲೆ, ಮದ್ರಾಸ್ ಟಾಕೀಸ್ ಪ್ರೊಡಕ್ಷನ್ ಹೌಸ್ ಮತ್ತು ಕುದುರೆಯ ಮಾಲೀಕರ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಪಿಸಿಎ) ಮತ್ತು ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅಬ್ದುಲ್ಲಪುರ್ಮೆಟ್ ಪೊಲೀಸ್ ಠಾಣೆಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ ಮಾಹಿತಿಯಂತೆ, ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿಗಾಗಿ ಇನ್ನೂ ಕಾಯಲಾಗುತ್ತಿದೆ.

ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA)- ಇಂಡಿಯಾವು ನೀಡಿದ ದೂರಿನ ನಂತರ ಈ ಘಟನೆಗೆ ಸಂಬಂಧಿಸಿದ ವರದಿಗಳನ್ನು ಆಧರಿಸಿ, AWBI ಸಾವಿನ ಕುರಿತು ತನಿಖೆ ನಡೆಸುವಂತೆ ಹೈದರಾಬಾದ್ ಜಿಲ್ಲಾಧಿಕಾರಿ ಮತ್ತು ತೆಲಂಗಾಣ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಗೆ ಪತ್ರ ಬರೆದಿದೆ ಎಂದು ಪೆಟಾ ಮಾಹಿತಿ ನೀಡಿದೆ.

ಪೆಟಾ ನೀಡಿರುವ ದೂರಿನ ಪ್ರಕಾರ, ಚಿತ್ರೀಕರಣದ ಸಂದರ್ಭದಲ್ಲಿ ಸತತವಾಗಿ ಬಳಸಿದ ಕುದುರೆಗಳನ್ನೇ ಬಳಸಲಾಗಿತ್ತು. ಇದರಿಂದಾಗಿ ಅವು ದಣಿದು, ನಿರ್ಜಲೀಕರಣಗೊಂಡಿದ್ದವು. ‘ಕಂಪ್ಯೂಟರ್- ರಚಿತ ಚಿತ್ರಣದ (CGI) ಯುಗದಲ್ಲಿ, ನೈಜ ಪ್ರಾಣಿಗಳನ್ನು ಬಳಸಿ ತೊಂದರೆ ನೀಡುವುದು ಸರಿಯಲ್ಲ’ ಎಂದು ಪೆಟಾ ಇಂಡಿಯಾ ಮುಖ್ಯ ವಕೀಲ ಅಧಿಕಾರಿ ಖುಷ್ಬೂ ಗುಪ್ತಾ ಹೇಳಿದ್ದಾರೆ. ‘ಸಹಾನುಭೂತಿಯುಳ್ಳ, ಮುಂದಾಲೋಚನೆ ಹೊಂದಿರುವ ಚಲನಚಿತ್ರ ನಿರ್ಮಾಪಕರು ಸೂಕ್ಷ್ಮ ಪ್ರಾಣಿಗಳನ್ನು ಅಸ್ತವ್ಯಸ್ತವಾಗಿರುವ ಚಲನಚಿತ್ರದ ಸೆಟ್‌ಗೆ ಕರೆದುಕೊಂಡು ಹೋಗುವಂತೆ ಮತ್ತು ಅವುಗಳನ್ನು ‘ನಟಿಸುವಂತೆ’ ಒತ್ತಾಯಿಸಬಾರದು. ಅದರ ಬದಲಾಗಿ ಮಣಿರತ್ನಂ ಅಂತಹ ಸೂಕ್ಷ್ಮ ಸಂವೇದಿ ನಿರ್ದೇಶಕರು ತಂತ್ರಜ್ಞಾನದ ವಿಪುಲ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು PETA ಹೇಳಿದೆ.

ಇದನ್ನೂ ಓದಿ:

ಯಾವ ಬ್ರಾ ತೊಡುತ್ತೀರಿ ಎಂದು ಹೀರೋಯಿನ್ಅನ್ನು​ ಪ್ರಶ್ನಿಸಿದ ಅಭಿಮಾನಿ; ಮುಜುಗರ ಇಲ್ಲದೆ ಉತ್ತರಿಸಿದ 19 ವರ್ಷದ ನಟಿ

ಪ್ರಾಣಿಗಳ ಸಾಕಲು ಬಂದ ದೇಣಿಗೆ ಹಣದಿಂದ ಐಷಾರಾಮಿ ಕಾರು ಖರೀದಿ ಆರೋಪ: ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹೇಳಿದ್ದೇನು?

(Horse dies on Mani Ratnam s Ponniyin Selvan movie set in Hyderbad and PETA files a complaint)

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ