ಪ್ರಾಣಿಗಳ ಸಾಕಲು ಬಂದ ದೇಣಿಗೆ ಹಣದಿಂದ ಐಷಾರಾಮಿ ಕಾರು ಖರೀದಿ ಆರೋಪ: ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹೇಳಿದ್ದೇನು?
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮಹದೇವಸ್ವಾಮಿ ಮೈಸೂರು ಮೃಗಾಲಯಕ್ಕೆ ಐಷಾರಾಮಿ ಹೊಸ ಕಾರಿನಲ್ಲಿ ಆಗಮಿಸಿದ್ರು. 21 ಲಕ್ಷದ 13 ಸಾವಿರ ಬೆಲೆ ಬಾಳುವ ಹೊಸ ಇನೋವಾ ಕ್ರಿಸ್ಟ ಮೂಲಕ ಆಗಮಿಸಿದ್ದಾರೆ. ಕಾರು ಖರೀದಿಗೆ 147ನೇ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂಬುವುದು ತಿಳಿದು ಬಂದಿದೆ.
ಮೈಸೂರು: ಮಹಾಮಾರಿ ಕೊರೊನಾದಿಂದ ಪ್ರಾಣಿಗಳನ್ನು ಸಾಕುವುದು ಕಷ್ಟವಾದ ಹಿನ್ನೆಲೆಯಲ್ಲಿ ಮೃಗಾಲಯಗಳಿಗೆ ಜನರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಬಂದಿತ್ತು. ಆದ್ರೆ ಈ ಹಣ ಈಗ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಇಂತಹ ಕೊವಿಡ್ ಕಷ್ಟದಲ್ಲೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರು ಐಷಾರಾಮಿ ಕಾರು ಖರೀದಿಸಿ ಹೊಸ ಕಾರಿನಲ್ಲಿ ಓಡಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮಹದೇವಸ್ವಾಮಿ ಮೈಸೂರು ಮೃಗಾಲಯಕ್ಕೆ ಐಷಾರಾಮಿ ಹೊಸ ಕಾರಿನಲ್ಲಿ ಆಗಮಿಸಿದ್ರು. 21 ಲಕ್ಷದ 13 ಸಾವಿರ ಬೆಲೆ ಬಾಳುವ ಹೊಸ ಇನೋವಾ ಕ್ರಿಸ್ಟ ಮೂಲಕ ಆಗಮಿಸಿದ್ದಾರೆ. ಕಾರು ಖರೀದಿಗೆ 147ನೇ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂಬುವುದು ತಿಳಿದು ಬಂದಿದೆ. ಇನ್ನು ಅಧ್ಯಕ್ಷರ ಹಳೇ ಕಾರನ್ನು ಮೃಗಾಲಯ ನಿರ್ದೇಶಕರಿಗೆ ನೀಡಲಾಗಿದೆ. ಮೃಗಾಲಯ ಪ್ರಾಧಿಕಾರದ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ನಾನು ಜನರ ದೇಣಿಗೆ ದುಡ್ಡಿನಿಂದ ಕಾರು ಖರೀದಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಕಾರಿಗಾಗಿ ಬೇಡಿಕೆ ಇಟ್ಟಿರಲಿಲ್ಲ. ಹಿಂದಿನ ಅಧ್ಯಕ್ಷರು ಇಟ್ಟಿದ್ದ ಬೇಡಿಕೆಯ ಕಾರು ಈಗ ಬಂದಿದೆ ಅಷ್ಟೆ. ಬಂದಿರುವ ಹೊಸ ಕಾರಿಗೆ ಜನರ ದೇಣಿಗೆ ಹಣ ಬಳಕೆ ಆಗಿಲ್ಲ. ಈಗಾಗಲೇ ಮೃಗಾಲಯ ನಿರ್ದೇಶಕರಿಗೆ ಇಟ್ಟಿದ್ದ ಹಳೆ ಕಾರು ಬಳಕೆ ಮಾಡಲಾಗುತ್ತಿತ್ತು. ಅದು 7 ವರ್ಷಗಳ ಹಳೆಯ ಕಾರು. ಅದನ್ನೇ ನಾನು ಬಳಕೆ ಮಾಡುತ್ತಿದ್ದೆ. ಅದೂ ಕೂಡ ಮಾಧ್ಯಮದಲ್ಲಿ ಸುದ್ದಿ ಆಗಿತ್ತು. ನನಗೆ ಮೃಗಾಲಯ ಅಭಿವೃದ್ಧಿ ಮಾಡಬೇಕು ಎಂಬ ಆಸೆ ಇದೆ. ಐಷಾರಾಮಿ ಕಾರಿನಲ್ಲಿ ತಿರುಗಾಡಬೇಕು ಎಂಬ ಆಸೆ ಇಲ್ಲ. ಧಾರವಾಡ, ಬಳ್ಳಾರಿ, ಶಿವಮೊಗ್ಗ ಹೋಗುವಾಗ ಮಾತ್ರ ಸರ್ಕಾರಿ ಕಾರು ಬಳಸುತ್ತೇನೆ. ಉಳಿದ ಸಮಯದಲ್ಲಿ ನನ್ನ ಖಾಸಗಿ ಕಾರಿನಲ್ಲೇ ತಿರುಗಾಡುತ್ತಿರುವೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಾಣಿಗಳ ರಕ್ಷಣೆಗೆ ಸಾರ್ವಜನಿಕರಿಂದ 1.3 ಕೋಟಿ ರೂ. ದೇಣಿಗೆ: ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ವನಶ್ರೀ ಸಿಂಗ್