‘ಉರಿ’ ಸಿನಿಮಾದ ಚೆಲುವೆ ಯಾಮಿ ಗೌತಮ್ ಫಿಟ್ನೆಸ್ ಹಿಂದಿದೆ ಎರಡು ಗುಟ್ಟುಗಳು
ನಟಿ ಯಾಮಿ ಗೌತಮ್ ಅವರು ಬಹುಭಾಷೆಯಲ್ಲಿ ಮಿಂಚಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಮಾತ್ರವಲ್ಲದೇ ಬಾಲಿವುಡ್ನಲ್ಲೂ ಅವರು ಖ್ಯಾತಿ ಗಳಿಸಿದ್ದಾರೆ.
ಇತ್ತೀಚೆಗೆಷ್ಟೇ ನಟಿ ಯಾಮಿ ಗೌತಮ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ‘ಉರಿ’ ಸಿನಿಮಾ ಮೂಲಕ ಅವರಿಗೆ ಬಾಲಿವುಡ್ನಲ್ಲಿ ಬಹುದೊಡ್ಡ ಗೆಲುವು ಸಿಕ್ಕಿತು. ಯಾಮಿ ನಟಿಸಿದ ಮೊದಲ ಸಿನಿಮಾ ಕನ್ನಡದ ‘ಉಲ್ಲಾಸ ಉತ್ಸಾಹ’. ಆ ಚಿತ್ರದಲ್ಲಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತೆರೆ ಹಂಚಿಕೊಂಡಿದ್ದರು. 32 ಪ್ರಾಯದ ಯಾಮಿ ಅವರು ಫಿಟ್ನೆಸ್ಗೆ ಹೆಚ್ಚು ಗಮನ ನೀಡುತ್ತಾರೆ. ಅವರ ಫಿಟ್ನೆಸ್ ಹಿಂದೆ ಎರಡು ಸೀಕ್ರೆಟ್ಗಳಿವೆ. ಪೋಲ್ ವರ್ಕೌಟ್ ಮತ್ತು ಸ್ವಿಮ್ಮಿಂಗ್ ಪೂಲ್ ವರ್ಕೌಟ್ ಮೂಲಕ ಅವರು ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದಾರೆ. ಈ ಕುರಿತಂತೆ ಅವರ ಹಲವು ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
‘ಉರಿ’ ಸಿನಿಮಾ ನಿರ್ದೇಶನ ಮಾಡಿದ್ದ ಆದಿತ್ಯ ಧಾರ್ ಜೊತೆ ಯಾಮಿ ಗೌತಮ್ ಅವರಿಗೆ ಪ್ರೀತಿ ಚಿಗುರಿತ್ತು. ಬಳಿಕ ಎರಡೂ ಕುಟುಂಬದ ಒಪ್ಪಿಗೆ ಪಡೆದು ಈ ಜೋಡಿ ಮದುವೆ ಮಾಡಿಕೊಂಡಿತು. ಈ ವರ್ಷ ಜೂನ್ 4ರಂದು ಆದಿತ್ಯ ಧಾರ್ ಮತ್ತು ಯಾಮಿ ಗೌತಮ್ ಹಸೆಮಣೆ ಏರಿದರು. ಕೊರೊನಾ ವೈರಸ್ ಹರಡುವ ಭೀತಿಯಿಂದ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಭೂತ್ ಪೊಲೀಸ್, ದಸ್ವಿ ಸೇರಿದಂತೆ ಅನೇಕ ಸಿನಿಮಾಗಳು ಯಾಮಿ ಗೌತಮ್ ಕೈಯಲ್ಲಿದೆ.
ಇದನ್ನೂ ಓದಿ:
ಮದುವೆ ಆದ ಕೆಲವೇ ದಿನಗಳಲ್ಲಿ ನಟಿ ಯಾಮಿ ಗೌತಮ್ಗೆ ಶಾಕ್; ಸಮನ್ಸ್ ನೀಡಿದ ಇಡಿ
ಯಾಮಿ ಗೌತಮ್ ಪೋಸ್ಟ್ನಲ್ಲಿ ಕಂಗನಾ ಕಿರಿಕ್; ಬಾಲಿವುಡ್ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ