ನಟ ಶರಣ್ ದಾಖಲೆ ಮುರಿದ ಜಿಮ್ ರವಿ
ಸಾಮಾನ್ಯವಾಗಿ ಹೀರೋ ಆಗುವುದಕ್ಕೂ ಮೊದಲು ಅನೇಕರು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ಹೀರೋ ಆಗುತ್ತಾರೆ. ಶರಣ್ ಬರೋಬ್ಬರಿ 100 ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ನಂತರ ಹೀರೋ ಆಗಿ ಬಡ್ತಿ ಪಡೆದುಕೊಂಡರು.
ಸಾಕಷ್ಟು ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸಿ ನಂತರ ಹೀರೋ ಆಗಿ ಬಡ್ತಿ ಪಡೆದುಕೊಂಡವರು ನಟ ಶರಣ್. ಸ್ಯಾಂಡಲ್ವುಡ್ನಲ್ಲಿ ಈಗಲೂ ಅವರು ಸಾಕಷ್ಟು ಬೇಡಿಕೆ ಉಳಿಸಿಕೊಂಡಿದ್ದಾರೆ. ಈಗ ಅವರ ದಾಖಲೆಯನ್ನು ಜಿಮ್ ರವಿ ಮುರಿದಿದ್ದಾರೆ. ಈ ಬಗ್ಗೆ ಸ್ವತಃ ಶರಣ್ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಏನು ಈ ದಾಖಲೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಹೀರೋ ಆಗುವುದಕ್ಕೂ ಮೊದಲು ಅನೇಕರು ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ಹೀರೋ ಆಗುತ್ತಾರೆ. ಶರಣ್ ಬರೋಬ್ಬರಿ 100 ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ನಂತರ ಹೀರೋ ಆಗಿ ಬಡ್ತಿ ಪಡೆದುಕೊಂಡರು. ಈ ಬಗ್ಗೆ ಅವರಿಗೆ ಹೆಮ್ಮೆ ಇದೆ. ಈಗ ಜಿಮ್ ರವಿ ಹೀರೋ ಆಗುತ್ತಿದ್ದಾರೆ. ಅದು ಅವರ 150ನೇ ಚಿತ್ರಕ್ಕೆ ಅನ್ನೋದು ವಿಶೇಷ. ಈ ಬಗ್ಗೆ ಶರಣ್ ಮಾತನಾಡುವಾಗ, ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಜಿಮ್ ರವಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಅವತಾರ ಪುರುಷ ಆಕ್ಷನ್ ಸೀಕ್ವೆನ್ಸ್ ವೇಳೆ ಅವಘಡ, ಆಸ್ಪತ್ರೆ ಸೇರಿದ ಶರಣ್
ಜೀವನದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ಮರುಗಿದ ಶರಣ್ ಸಿನಿಮಾದ ನಟಿ