ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಜಿಮ್ ರವಿ ತನ್ನ ದಾಖಲೆ ಮುರಿದಿದ್ದಾರೆ ಎಂದರು ನಟ ಶರಣ್!

ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಜಿಮ್ ರವಿ ತನ್ನ ದಾಖಲೆ ಮುರಿದಿದ್ದಾರೆ ಎಂದರು ನಟ ಶರಣ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 06, 2021 | 5:59 PM

ಸೋಮವಾರ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ‘ಪುರುಷೋತ್ತಮ’ ಕನ್ನಡ ಚಿತ್ರದ ಆಡಿಯೋ ರಿಲೀಸ್ನಲ್ಲಿ ಅವರು ಭಾಗವಹಿಸಿ ಮಾತಾಡಿದರು. ಇದುವರೆಗೆ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಿಮ್ ರವಿ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಬೆಂಗಳೂರು: ಕೊವಿಡ್-19 ಪಿಡುಗು ನಮ್ಮನ್ನು ಸಿನಿಮಾ ರಂಗ ಮತ್ತು ಅದಕ್ಕೆ ಸಂಬಂಧಿಸಿದ ಜನರಿಂದ ಯಾವ ಮಟ್ಟಿಗೆ ದೂರ ಮಾಡಿತ್ತೆಂದರೆ, ಕೆಲವು ಕಲಾವಿದರನ್ನು ನಾವು ಮರತೇ ಹೋಗುವಂತಾಗಿ ಬಿಟ್ಟಿತ್ತು. ಮೊದಲೆಲ್ಲ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ತನ್ನ 100 ನೇ ಚಿತ್ರಕ್ಕೆ ನಾಯಕ ನಟನಾಗಿ ಬಡ್ತಿ ಪಡೆದ ಶರಣ್ ಸಿನಿಮಾದಾಚೆಯೂ ರಸವತ್ತಾಗಿ ಮಾತಾಡುತ್ತಾರೆ. ಹಿರಿಯ ನಟಿ ಶೃತಿಯ ಸಹೋದರನೂ ಆಗಿರುವ ಶರಣ್ ಚಿತ್ರರಂಗಕ್ಕೆ ಬಂದು 25 ವರ್ಷಗಳಿಂದ ಜಾಸ್ತಿ ಸಮಯ ಆಯ್ತು ಅಂದರೆ ನಂಬ್ತೀರಾ? ಅವರ ಮೊದಲ ಚಿತ್ರ ‘ಪ್ರೇಮ ಪ್ರೆಮ ಪ್ರೇಮ’ ಬಿಡುಗಡೆಯಾಗಿದ್ದು 1996ರಲ್ಲಿ ಮಾರಾಯ್ರೇ! ಅವರು ಪೂರ್ಣ ಪ್ರಮಾಣದ ಹಿರೋ ಅಗಿ ನಟಿಸಿದ ಚಿತ್ರ ‘ರ‍್ಯಾಂಬೋ’ ಬಿಡುಗಡೆಯಾಗಿದ್ದು 2012 ರಲ್ಲಿ. ಶರಣ್ ಇದುವರೆಗೆ 7 ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿದ್ದಾರೆ ಮತ್ತು ಅವುಗಳ ಪೈಕಿ ಮೂರರಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಾಯಶಃ ಇದೊಂದು ದಾಖಲೆಯಾಗಿರಬಹುದು.

ಶರಣ್ ಬಗ್ಗೆ ಮಾತಾಡುವ ಪ್ರಸಂಗ ಯಾಕೆ ಒದಗಿ ಬಂದಿದೆಯೆಂದರೆ ಸೋಮವಾರ ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ‘ಪುರುಷೋತ್ತಮ’ ಕನ್ನಡ ಚಿತ್ರದ ಆಡಿಯೋ ರಿಲೀಸ್ನಲ್ಲಿ ಅವರು ಭಾಗವಹಿಸಿ ಮಾತಾಡಿದರು. ಇದುವರೆಗೆ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಿಮ್ ರವಿ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ರವಿ ಬಗ್ಗೆ ಮಾತಾಡಿದ ಶರಣ್, ರವಿ ಮತ್ತು ಚಿತ್ರ ತಂಡಕ್ಕೆ ಶುಭ ಕೋರಿದಲ್ಲದೆ, ರವಿ ತಮ್ಮ ದಾಖಲೆಯನ್ನು ಉತ್ತಮ ಪಡಿಸಿದ್ದಾರೆ ಎಂದು ಹೇಳಿದರು.

ಶರಣ್ ಹೇಳಿದ್ದೇನೆಂದರೆ, ತಾನು 100 ಚಿತ್ರಗಳಲ್ಲಿ ಅಭಿನಯಿಸಿದ ನಂತರ ನಾಯಕ ನಟನಾಗಿ ಕೆಲಸ ಮಾಡುವ ಆವಕಾಶ ಸಿಕ್ಕಿತ್ತು. ಆದರೆ, ಜಿಮ್ ರವಿ ಅವರಿಗೆ 150 ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ನಾಯಕನಾಗುವ ಅವಕಾಶ ಸಿಕ್ಕಿದೆ, ಹಾಗಾಗಿ ಅವರು ತನ್ನ ರೆಕಾರ್ಡ್ ಮುರಿದಂತಾಗಿದೆ, ಅಂತ ಶರಣ್ ಹೇಳಿದರು.

ಇದನ್ನೂ ಓದಿ: ಭಯಗೊಳಿಸುವ ವಿಡಿಯೋ: ಮೊಟ್ಟೆ ತೆಗೆಯಲು ಹೋದವನಿಗೆ ಕಚ್ಚಿದ ಬಹುದೊಡ್ಡ ಹೆಬ್ಬಾವು !