ಭಯಗೊಳಿಸುವ ವಿಡಿಯೋ: ಮೊಟ್ಟೆ ತೆಗೆಯಲು ಹೋದವನಿಗೆ ಕಚ್ಚಿದ ಬಹುದೊಡ್ಡ ಹೆಬ್ಬಾವು !

ಜೇ ಬ್ರೂವರ್​ ಆಗಾಗ ಹಾವುಗಳ ಕುತೂಹಲಕಾರಿ, ವಿಭಿನ್ನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಾಗೇ, ಭಾನುವಾರ ಹೆಬ್ಬಾವಿನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ

ಭಯಗೊಳಿಸುವ ವಿಡಿಯೋ: ಮೊಟ್ಟೆ ತೆಗೆಯಲು ಹೋದವನಿಗೆ ಕಚ್ಚಿದ ಬಹುದೊಡ್ಡ ಹೆಬ್ಬಾವು !
ಝೂ ಮಾಲೀಕನಿಗೆ ಕಡಿದ ಹೆಬ್ಬಾವು
Follow us
TV9 Web
| Updated By: Lakshmi Hegde

Updated on:Sep 06, 2021 | 5:30 PM

ಹಾವುಗಳೊಂದಿಗೆ ಆಟ ಆಡುವುದು ತುಂಬ ಅಪಾಯಕಾರಿ. ಹಾವು ಪಳಗಿಸುವುದರಲ್ಲಿ ಎಷ್ಟೇ ನುರಿತರಿರಲಿ ಅಥವಾ ಅದರೊಂದಿಗೆ ಒಡನಾಗಿ ಎಷ್ಟೇ ಅಭ್ಯಾಸವಿರಲಿ ಅಪಾಯ ಸದಾ ಕಟ್ಟಿಟ್ಟಬುತ್ತಿದೆ. ಹಾಗೇ, ಇದೀಗ ಬಹುದೊಡ್ಡ ಅಂದರೆ ಸುಮಾರು 20 ಅಡಿ ಉದ್ದದ ಹೆಬ್ಬಾವೊಂದು ಮೃಗಾಲಯ ರಕ್ಷಕ (Zookeeper)ನಿಗೆ ಕಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಆ ವಿಡಿಯೋ ನೋಡಿದರೆ ಎಂಥವರ ಮೈಯಾದರೂ ಒಮ್ಮೆ ಜುಂ ಎನ್ನದೆ ಇರದು.

ವಿಡಿಯೋವನ್ನು ಜೇ ಬ್ರೂವರ್​ ಎಂಬುವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದು ಕ್ಯಾಲಿಫೋರ್ನಿಯಾದ ಸರೀಸೃಪಗಳ ಝೂದಲ್ಲಿ ನಡೆದ ಘಟನೆಯಾಗಿದ್ದು, ಜೇ ಬ್ರೂವರ್​ ಅವರೇ ಈ ಝೂದ ಸಂಸ್ಥಾಪಕರು. ದೈತ್ಯಾಕಾರದ ಹೆಬ್ಬಾವು ಮೊಟ್ಟೆ ಇಟ್ಟಿತ್ತು. ಆ ಮೊಟ್ಟೆಯನ್ನು ತೆಗೆದು ಸುರಕ್ಷಿತವಾಗಿ ಇಡಲು ಪ್ರಯತ್ನಿಸಿದ ವೇಳೆ ಒಮ್ಮೆಲೇ ಹಾವು ಅವರಿಗೆ ಕಚ್ಚಿದೆ. ತನ್ನ ಬಹುದೊಡ್ಡ ಬಾಯಿಯನ್ನು ತೆರೆದು ಜೇ ಬ್ರೂವರ್​ ಕೈಯಿಗೆ ಕಚ್ಚಿದ ವಿಡಿಯೋ ನೋಡಿದ ನೆಟ್ಟಿಗರು ಕಂಗಾಲಾಗಿದ್ದಾರೆ.

ಜೇ ಬ್ರೂವರ್​ ಆಗಾಗ ಹಾವುಗಳ ಕುತೂಹಲಕಾರಿ, ವಿಭಿನ್ನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಾಗೇ, ಭಾನುವಾರ ಹೆಬ್ಬಾವಿನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನಿಜ ಹೇಳಬೇಕು ಎಂದರೆ ನನ್ನನ್ನು ಕಂಡರೆ ಆ ಹೆಣ್ಣು ಹೆಬ್ಬಾವಿಗೆ ಆಗುವುದೇ ಇಲ್ಲ. ಅದರ ಮೊಟ್ಟೆಯನ್ನು ಎತ್ತಲು ಹೋಗಿದ್ದರಿಂದ ನನ್ನನ್ನು ಕಚ್ಚಿತು. ಆದರೂ ಆ ಹಾವು ತುಂಬ ಸುಂದರವಾಗಿದೆ ಮತ್ತು ಅದರ ಮರಿಗಳು ಅಷ್ಟೇ ಮುದ್ದಾಗಿರಲಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ ನೆಟ್ಟಿಗರಂತೂ ತುಂಬ ಭಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kerala: ಕಾಂಗ್ರೆಸ್ ಅಧಿಕಾರದಲ್ಲಿರುವ ಕೇರಳದ ಎಲ್ಲ ಪಂಚಾಯತ್​ಗಳಲ್ಲಿ ಸರ್, ಮೇಡಂ ಬಳಕೆ ನಿಷೇಧ

SBI Debit Card: ಎಸ್​ಬಿಐ ಡೆಬಿಟ್​ ಕಾರ್ಡ್​ ಮೂಲಕ ಖರೀದಿಸಿದ್ದನ್ನು ಇಎಂಐ ಆಗಿ ಬದಲಿಸಿಕೊಳ್ಳೋದು ಹೇಗೆ?

Published On - 5:29 pm, Mon, 6 September 21