ಕಾಲ್ಬೆರಳುಗಳಿಂದ ಬರೆಯಲು ಕಲಿತಳು ಬಾಲಕಿ; ಶಿಕ್ಷಕಿಯಾಗುವ ಕನಸು ಹೊತ್ತು ಎಲ್ಲರಿಗೂ ಮಾದರಿಯಾದಳು ತನು ಕುಮಾರಿ
Viral News: ಚಿಕ್ಕ ವಯಸ್ಸಿನಲ್ಲಿ ಮನೆಯ ಟೆರೆಸ್ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಮುಟ್ಟಿದ ಪರಿಣಾಮ ತನ್ನ ಕೈಗಳನ್ನು ಕಳೆದುಕೊಂಡಳು. ತನು ಕುಮಾರಿ ಬುದ್ಧಿವಂತೆ, ನಿಪುಣೆ ಜತೆಗೆ ಎಲ್ಲವನ್ನೂ ಬಹುಬೇಗ ಗ್ರಹಿಸಿಕೊಳ್ಳುವ ಶಕ್ತಿ ಹೊಂದಿರುವ ಬಾಲಕಿ.
ಈಕೆಗೆ 14 ವರ್ಷ. ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಕೈಗಳೆರಡನ್ನೂ ಕಳೆದುಕೊಂಡಳು. ಬಾಲಕಿಗೆ ಶಿಕ್ಷಕಿಯಾಗುವ ಆಸೆ. ಶಾಲೆಯಲ್ಲಿ ಕಲಿತ ಅಭ್ಯಾಸವನ್ನು ಬರೆಯಲು ಕೈಗಳಿಲ್ಲ ಎಂಬ ಕೊರಗು ಅವಳಲ್ಲಿ ಕಾಡುತ್ತಿತ್ತು. ಆದರೆ, ಇವೆಲ್ಲವನ್ನೂ ಬದಿಗಿಟ್ಟು ತಾನು ಶಿಕ್ಷಕಿಯಾಗಲೇ ಬೇಕು ಎಂಬ ಆಸೆ ಹೊಂದಿರುವ ಛಲಗಾರ್ತಿ ಈಕೆ. ಕೈಗಳಿಲ್ಲದಿದ್ದರೂ ಸಹ ತನ್ನ ಆಸೆಯನ್ನು ಪೂರೈಸಿಕೊಳ್ಳಲು ಯಾರ ಹಂಗಿಲ್ಲದೇ ತನ್ನ ಕಾಲ್ಬೆರಳುಗಳಿಂದ ಬರೆಯುವ ಅಭ್ಯಾಸ ಮಾಡುತ್ತಿದ್ದಾಳೆ. ತನ್ನ ಶಾಲಾಭ್ಯಾಸವನ್ನೆಲ್ಲ ಈಕೆ ಕಾಲ್ಬೆರಳುಗಳಿಂದಲೇ ಬರೆಯುತ್ತಾಳೆ.
ಬಾಲಕಿಯ ಹೆಸರು ತನು ಕುಮಾರಿ. ಮೂಲತಃ ಬಿಹಾರದವಳು. ಚಿಕ್ಕ ವಯಸ್ಸಿನಲ್ಲಿ ಮನೆಯ ಟೆರೆಸ್ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಮುಟ್ಟಿದ ಪರಿಣಾಮ ತನ್ನ ಕೈಗಳನ್ನು ಕಳೆದುಕೊಂಡಳು. ತನು ಕುಮಾರಿ ಬುದ್ಧಿವಂತೆ, ನಿಪುಣೆ ಜತೆಗೆ ಎಲ್ಲವನ್ನೂ ಬಹುಬೇಗ ಗ್ರಹಿಸಿಕೊಳ್ಳುವ ಶಕ್ತಿ ಹೊಂದಿರುವ ಬಾಲಕಿ. ಆದರೆ, ಕೈಗಳಿಲ್ಲ ಎಂಬ ನೋವು ಆಕೆಯನ್ನು ಕುಗ್ಗುವಂತೆ ಮಾಡಿತ್ತು. ತನಗೆ ತಾನೇ ಧೈರ್ಯ ತುಂಬಿಕೊಂಡು ತನ್ನ ಕನಸನ್ನು ನನಸು ಮಾಡಲು ಪ್ರತಿನಿತ್ಯ ಶ್ರಮಿಸುತ್ತಿದ್ದಾಳೆ. ಪ್ರಸ್ತುತದಲ್ಲಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯನ್ನು ವಿದ್ಯಾಭ್ಯಾಸ ಮಾಡುತ್ತಿರುವ ತನು ಕುಮಾರಿ ತನ್ನ ಕಾಲ್ಬೆರಳುಗಳಿಂದಲೇ ಬರೆಯುತ್ತಾಳೆ. ನಿಷ್ಠೆಯಿಂದ ಕಲಿಕೆಯನ್ನು ಮುಂದುವರೆಸುತ್ತಿದ್ದು, ಎಲ್ಲರಿಗೆ ಮಾದರಿಯಾಗಿದ್ದಾಳೆ. ಈ ಕುರಿತಂತೆ ಎಎನ್ಐ ಸುದ್ದಿ ಮಾಧ್ಯಮ ವರದಿ ಮಾಡಿದೆ.
Bihar | Tanu Kumari, a Patna-based girl, who lost both her hands in an accident in 2014, gets promoted to class 10
“After the accident, I slowly learned how to write with my feet. I also like to participate in sports and painting activities. I want to become a teacher,” she says pic.twitter.com/UcGYyqTlAm
— ANI (@ANI) September 6, 2021
ನಡೆದ ಭೀಕರ ಘಟನೆಯಿಂದ ನಾನು ಅಂಗವೈಕಲ್ಯದಿಂದ ಬಳಲುತ್ತಿದ್ದೇನೆ ಎಂಬ ಕೊರಗು ನನಗಿಲ್ಲ. ಕೈಬೆರಳುಗಳಿಲ್ಲದ ಕಾರಣ ಕಾಲ್ಬೆರಳುಗಳಿಂದ ಬರೆಯಲು ಕಲಿತಿದ್ದೇನೆ. ವಿದ್ಯಾಭ್ಯಾಸದ ಜತೆಗೆ ಚಿತ್ರಕಲೆ ಮತ್ತು ಕ್ರೀಡೆಯಲ್ಲಿಯೂ ಆಸಕ್ತಿ ಇದೆ ಎಂದು ತನು ಮುಕಾರಿ ಎಎನ್ಐ ಸುದ್ದಿ ಮಾಧ್ಯಮದ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾಳೆ.
ನನ್ನ ಮಗಳು ತನು ತುಂಬಾ ಬುದ್ಧಿವಂತೆ. ಅವಳನ್ನು ನೋಡಿದರೆ ನಿಜವಾಗಿಯೂ ಹೆಮ್ಮೆಯಾಗುತ್ತದೆ. 2014ರಲ್ಲಿ ಟೆರೆಸ್ ಮೇಲೆ ವಿದ್ಯುತ್ ತಗುಲಿದ ಕಾರಣ ಆಕೆ ಕೈಗಳನ್ನು ಕಳೆದುಕೊಂಡಳು. ಬಳಿಕ ಅದೆಷ್ಟೋ ನೋವನ್ನು ಅನುಭವಿಸಿದ್ದಾಳೆ. ಆದರೆ ಅವಳು ಈಗ ಸಂತೋಷದಿಂದಿದ್ದಾಳೆ. ಪ್ರತಿನಿತ್ಯ ಓದುತ್ತಾಳೆ, ತನ್ನ ಕಾಲ್ಬೆರಳುಗಳಿಂದ ಬರೆಯುತ್ತಾಳೆ ಎಂದು ತನು ಕುಮಾರಿ ತಾಯಿ ಸುಹಾ ದೇವಿ ಹೇಳಿದ್ದಾರೆ.
ಚಿತ್ರ ಕಲೆಯಲ್ಲಿ ತನು ಕುಮಾರಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಮಗಳಿಗೆ ಶಾಲೆಗೆ ಹೋಗುವುದು ಬೇಡ ಎಂಬ ಮಾತು ಮನೆಯಲ್ಲಿ ಎದುರಾದಾಗ, ಆಕೆಯ ನಮಗೆಲ್ಲ ಧೈರ್ಯ ತುಂಬಿ, ನಾನು ಕಲಿಯುತ್ತೇನೆ, ನನಗೆ ವಿದ್ಯಾಭ್ಯಾಸದ ಕಲಿಯುವ ಒಲವಿದೆ ಎಂದು ಹೇಳಿದ್ದಳು. ಬಳಿಕ ಪ್ರತಿನಿತ್ಯ ಶಾಲೆಗೆ ಹೋಗುತ್ತಿದ್ದಾಳೆ ಎಂದು ತಾಯಿ ಸುಹಾ ದೇವಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತನು ಕುಮಾರಿ ತಂದೆ ಸುನೀಲ್ ಕುಮಾರ್ ಸಿಲಿಂಡರ್ ಮನೆಗೆ ತಲುಪಿಸಿವ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ನಾನು ತುಂಬಾ ಬಡವ. ಮೊದಲು ತನು ಖಾಸಗಿ ವಿದ್ಯಾಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿದ್ದಳು. ಬಳಿಕ ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ. ತನು ಕುಮಾರಿಗೆ ಅವಳ ಅಮ್ಮ ಪ್ರತಿನಿತ್ಯ ಅವಳಿಗೆ ಸಹಾಯ ಮಾಡುತ್ತಾಳೆ. ಊಟ ಮಾಡಿಸುವುದು, ಸಮವಸ್ತ್ರ ಧರಿಸುವುದು ಎಲ್ಲವನ್ನೂ ತಾಯಿಯೇ ನೋಡಿಕೊಳ್ಳುತ್ತಾಳೆ. ಅವಳು ಎಷ್ಟು ಬೇಕಾದರೂ ಕಲಿಯಲಿ ಅದಕ್ಕೆ ನಾವು ಸಹಾಯ ಮಾಡುತ್ತೇವೆ ಎಂದು ತನು ಕುಮಾರಿ ತಂದೆ ಸುನೀಲ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:
Viral News: ನೊಕಿಯಾ ಮೊಬೈಲ್ ಸೆಟ್ ನುಂಗಿದ ಯುವಕ; ಶಸ್ತ್ರಚಿಕಿತ್ಸೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದ ವೈದ್ಯರು
(Girl 14 years old tanu kumari from bihar learns to write with her toes she wants to become a teacher)
Published On - 9:31 am, Tue, 7 September 21