Viral News: ವಿಷಕಾರಿ ಪ್ರಾಣಿಗಳಿರುವ ಕಾಡಿನಲ್ಲಿ ಕಳೆದಹೋದ 72 ವರ್ಷದ ವೃದ್ಧ ಮರಳಿ ಮನೆಗೆ ಬಂದ ಇಂಟ್ರೆಸ್ಟಿಂಗ್​​ ಸ್ಟೋರಿ ಇಲ್ಲಿದೆ

ಲಿರೋನಾರ್ಡ್ ಬೆರ್ರಿ ವೆಲ್ಲರ್ ಎನ್ನುವವರು ಥೈಲ್ಯಾಂಡ್​ನ ಕಾಡಿನಲ್ಲಿ ಮೂರು ದಿನಗಳ ಕಾಲ ವಾಸುವಿದ್ದು ಬಳಿಕ ಹಿಂತಿರುಗಿದ್ದಾರೆ. ಕರಡಿ, ವಿಷಕಾರಿ ಹಾವುಗಳಿರುವ ಆ ಕಾಡಿನಲ್ಲಿ ರಾತ್ರಿಯಿಡೀ ಮಳೆಯಲ್ಲಿ ನೆಂದು ಬಂದಿರುವ ಇವರ ಸಾಹಸ ನಿಜವಾಗಿಯೂ ಆಶ್ಚರ್ಯವಾಗುವಂತಿದೆ.

Viral News: ವಿಷಕಾರಿ ಪ್ರಾಣಿಗಳಿರುವ ಕಾಡಿನಲ್ಲಿ ಕಳೆದಹೋದ 72 ವರ್ಷದ ವೃದ್ಧ ಮರಳಿ ಮನೆಗೆ ಬಂದ ಇಂಟ್ರೆಸ್ಟಿಂಗ್​​ ಸ್ಟೋರಿ ಇಲ್ಲಿದೆ
ಲಿರೋನಾರ್ಡ್ ಬೆರ್ರಿ ವೆಲ್ಲರ್
Follow us
TV9 Web
| Updated By: shruti hegde

Updated on:Sep 06, 2021 | 9:52 AM

ಕಾಡು ಪ್ರಾಣಿಗಳು ನೆಲೆಸಿರುವ ಕಾಡಿನಲ್ಲಿ ಮನುಷ್ಯರು ವಾಸಿಸುವುದು ಸುಲಭದ ಮಾತಲ್ಲ. ಕೇವಲ ಒಂದು ದಿನ ಕಳೆಯುವುದೇ ಕಷ್ಟವಾಗಿರುವ ಆ ಕಾಡಿನಲ್ಲಿ ಮೂರು ದಿನಗಳ ಕಾಲ ಇದ್ದು, ಕಾಡು ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಂಡು, ಘೋರಾಕಾರ ಮಳೆಯಲ್ಲಿ ನೆಂದು ಪುನಃ ವಾಸಸ್ಥಾನಕ್ಕೆ ಮರಳಿದ 72 ವರ್ಷದ ವೃದ್ಧರ ಸಾಹಸಗಾಥೆ ಇಲ್ಲಿದೆ. ನಡೆದ ಘಟನೆ ಕೇಳಿದಾಕ್ಷಣ ಬೆರಗಾಗುವುದಂತೂ ಗ್ಯಾರೆಂಟಿ!

ಲಿರೋನಾರ್ಡ್ ಬೆರ್ರಿ ವೆಲ್ಲರ್ ಎನ್ನುವವರು ಥೈಲ್ಯಾಂಡ್​ನ ಕಾಡಿನಲ್ಲಿ ಮೂರು ದಿನಗಳ ಕಾಲ ವಾಸುವಿದ್ದು ಬಳಿಕ ಹಿಂತಿರುಗಿದ್ದಾರೆ. ಕರಡಿ, ವಿಷಕಾರಿ ಹಾವುಗಳಿರುವ ಆ ಕಾಡಿನಲ್ಲಿ ರಾತ್ರಿಯಿಡೀ ಮಳೆಯಲ್ಲಿ ನೆಂದು ಬಂದಿರುವ ಇವರ ಸಾಹಸ ನಿಜವಾಗಿಯೂ ಆಶ್ಚರ್ಯವಾಗುವಂತಿದೆ. ಯುವಪೀಳಿಗೆಯೂ ಸಹ ಹುಬ್ಬೇರಿಸಿ ನೋಡುವಂತಹ ಘಟನೆ ಇದಾಗಿದೆ.

ತನ್ನ ಸ್ನೇಹಿತರನ್ನು ಭೇಟಿ ಮಾಡುವ ಉದ್ದೇಶದಿಂದ 72 ವರ್ಷದ ಲಿಯೋನಾರ್ಡ್ ಬೆರ್ರಿ ಅವರು ಬೈಕ್ ಹತ್ತಿ ಹೊರಟರು. ಆದರೆ ದಾರಿ ತಪ್ಪಿ ಈಶಾನ್ಯ ಥೈಲ್ಯಾಂಡ್​ನ ಖೋನ್ ಕೇನ್ ಪ್ರಾಂತ್ಯದಲ್ಲಿ ಕಳೆದು ಹೋದರು. ದಾರಿ ಮಧ್ಯದಲ್ಲಿ ಬೈಕ್ ಕೂಡಾ ಅವರ ಕೈ ಬಿಟ್ಟಿತು. ಮನೆಗ ಬಾರದ ಅವರನ್ನು ಪತ್ನಿ ತವ್ನಿ ಲಿಯೋನಾರ್ಡ್ ಹುಡುಕಲು ಹೊರಟರು.

ಲಿಯೋನಾರ್ಡ್ ಬೆರ್ರಿ ಅವರು ದಾರಿಯನ್ನು ಹುಡುಕಲು ಕಾಡಿನ ಮರಗಳನ್ನು ಹತ್ತಿದರು. ಆದರೆ ಘೋರಾಕಾರ ಮಳೆಯಿಂದ ಅದು ಸಾಧ್ಯವಾಗಲಿಲ್ಲ. ರಾತ್ರಿಯಿಡೀ ಕಾಡಿನಲ್ಲಿಯೇ ಕಳೆಯುವಂತಾಯಿತು. 3 ದಿನಗಳ ಕಾಲ ಹಸಿದ ಹೊಟ್ಟೆಯಲ್ಲಿ, ಮಳೆ ನೀರು ಕುಡಿಯುತ್ತಾ ದಾರಿ ಹುಡುಕುತ್ತಾ ಇದೀಗ ಜನರನ್ನು ತಲುಪಿದ್ದಾರೆ.

ಯಾವುದೋ ಊರಿಗೆ ಬಂದು ತಲುಪಿದ ಅವರು ಜನರನ್ನು ಕಂಡು ಖುಷಿಯಾದರು. ಸ್ಥಳೀಯರು ಅವರಿಗೆ ಸಹಾಯ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದರು. ಬಳಿಕ ಅವರನ್ನು ಸುಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಲಿಯೋನಾರ್ಡ್ ಬೆರ್ರಿ ಅವರ ಕಾಲುಗಳಿಗೆ ಗಾಯಗಳಾಗಿದ್ದವು. ಕಾಲಿಗೆ ಚಪ್ಪಲಿಯೂ ಸಹ ಇರಲಿಲ್ಲ. ರಾತ್ರಿ ಎಲೆಗಳನ್ನು ಹಾಸಿಕೊಂಡು ಮಲಗುತ್ತಿದ್ದೆ ಎಂಬ ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ನನಗೆ ಆಶ್ಚರ್ಯದ ಜತೆಗೆ ಸಂತೋಷವೂ ಆಗುತ್ತಿದೆ. ಹೆಚ್ಚು ಭಯವಾಗುತ್ತಲೂ ಇದೆ ಆದರೆ ಆರಾಮವಾಗಿದ್ದೇನೆ. 15 ವರ್ಷಗಳ ಕಾಲ ಥೈಲ್ಯಾಂಡ್​​ನಲ್ಲಿ ವಾಸಿಸುತ್ತಿದ್ದೇನೆ. ನನಗೆ ನನ್ನ ಊರು ಹೊಸದೇನಲ್ಲ. ಆದರೆ ಇಂತಹ ಘಟನೆ ಭೀಕರವಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ:

Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?

Viral News: ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!

(Leonard barry weller was recently rescued from a jungle in thailand)

Published On - 9:30 am, Mon, 6 September 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ