Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?

ಭಾರತದಲ್ಲಿ ಈ ಮಂಚವನ್ನು 10,000 ರೂಪಾಯಿಯ ಒಳಗೆ ಪಡೆಯಬಹುದು. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ ಎಂದು ತಿಳಿದ ನೆಟ್ಟಿಗರಿಗೆ ಆಶ್ಚರ್ಯವಾಗಿದೆ.

Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?

ಸಾಮಾನ್ಯವಾಗಿ ಎಷ್ಟು ದುಡ್ಡು ಕೊಟ್ಟು ಮಂಚವನ್ನು ಖರೀದಿಸಬಹುದು? ಗಟ್ಟುಮುಟ್ಟಾದ ಮರದಿಂದ ತಯಾರಿಸಿದ ಮಂಚಕ್ಕೆ ಗರಿಷ್ಠ ಅಂದರೂ 10,000 ರೂಪಾಯಿ ಇರಬಹುದು. ಮಂಚದ ಅಳತೆಯನ್ನು ಆಧರಿಸಿ ಬೆಲೆ ಏರಿಳಿತವಾಗುತ್ತದೆ. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ. ನ್ಯೂಜಿಲೆಂಡ್ ಬ್ರಾಂಡ್ ಮಂಚವನ್ನು ವಿಂಟೇಜ್ ಇಂಡಿಯನ್ ಡೇಬೆಡ್ ಎಂದು ಗುರುತಿಸಿದೆ.

ವಿಂಟೇಜ್ ಇಂಡಿಯನ್ ಡೇ ಬೆಡ್ಅನ್ನು ಬ್ರಾಂಡ್​ನ ವೆಬ್ಸೈಟ್​ನಲ್ಲಿ ಪಟ್ಟಿ ಮಾಡಲಾಗಿದೆ. ಮಂಚಕ್ಕೆ ರಿಯಾಯಿತಿಯ ನಂತರ 41,000 ರೂಪಾಯಿ ನಿಗದಿಯಾಗಿದೆ. ಸೆಣಬಿನಿಂದ ತಯಾರಿಸಿದ ಹಾಸಿಗೆಗೆ ಮರದ ಚೌಕಟ್ಟಿಗೆ ನಾಲ್ಕು ಮರದ ಕಾಲುಗಳನ್ನು ಅಳವಡಿಸಿ ಮಂಚವನ್ನು ತಯಾರಿಸಲಾಗಿದೆ. ಭಾರತದಲ್ಲಿ ಈ ಮಂಚವನ್ನು 10,000 ರೂಪಾಯಿಯ ಒಳಗೆ ಪಡೆಯಬಹುದು. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ ಎಂದು ತಿಳಿದ ನೆಟ್ಟಿಗರಿಗೆ ಆಶ್ಚರ್ಯವಾಗಿದೆ.

ನ್ಯೂಜಿಲೆಂಡ್​ ಬ್ರಾಂಡ್​ ಅನಾಬೆಲ್ಲೆ, ಸಾಮಾನ್ಯವಾಗಿ ಭಾರತೀಯರು ಬಳಸುವ ಮರದ ಮಂಚವನ್ನು ವಿಂಟೇಜ್ ಇಂಡಿಯನ್ ಡೇ ಬೆಡ್ ಎಂದು ಗುರುತಿಸಿದೆ. ದೈನಂದಿನ ಬಳಕೆಯ ವಸ್ತುವನ್ನು ಇಷ್ಟು ದೊಡ್ಡ ಬೆಲೆಗೆ ಮಾರಾಟ ಮಾಡುವುದು ಇದೇ ಮೊದಲಲ್ಲ. ಕಳೆದ ವಾರ ಐಷಾರಾಮಿ ಫ್ಯಾಷನ್ ಬ್ರಾಂಡ್​ ಬೆಲೆನ್ಸಿಯಾಗಾ ಶಾಪಿಂಗ್ ಬ್ಯಾಗ್ಅನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು.

ಇದನ್ನೂ ಓದಿ:

Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!

Viral News: ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!

(This charpai is being sold as vintage Indian daybed for rs 41,000 A New Zealand brand named ANNABELLE)

Read Full Article

Click on your DTH Provider to Add TV9 Kannada