Video: ಐಶ್ವರ್ಯಾ ರೈ ಜೊತೆ ರಜನಿಕಾಂತ್​ರಂತೆ ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್! ಫ್ಯಾನ್ಸ್ ಫಿದಾ

David Warner: ವಾರ್ನರ್ ಭಾರತೀಯ ಅದರಲ್ಲೂ ಬಾಲಿವುಡ್ ಹಾಡುಗಳನ್ನು ಬಳಸಿ ವಿಡಿಯೋ ಮಾಡುತ್ತಿರುತ್ತಾರೆ. ಈ ವಿಡಿಯೋದಲ್ಲಿ ವಾರ್ನರ್ ಐಶ್ವರ್ಯಾ ರೈ ಜೊತೆಗೆ ಡ್ಯಾನ್ಸ್ ಮಾಡುತ್ತಿರುವಂತೆ ಕಂಡುಬಂದಿರುವುದು ಫ್ಯಾನ್ಸ್​ಗೆ ಮನೋರಂಜನೆ ಕೊಟ್ಟಿದೆ.

Video: ಐಶ್ವರ್ಯಾ ರೈ ಜೊತೆ ರಜನಿಕಾಂತ್​ರಂತೆ ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್! ಫ್ಯಾನ್ಸ್ ಫಿದಾ
ವೈರಲ್ ವಿಡಿಯೋ
Follow us
TV9 Web
| Updated By: ganapathi bhat

Updated on:Aug 30, 2021 | 10:24 PM

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಆಗಿರುತ್ತಾರೆ. ಅದೇ ಕಾರಣಕ್ಕೆ ಡೇವಿಡ್ ವಾರ್ನರ್ ಇನ್​ಸ್ಟಾಗ್ರಾಂ ಖಾತೆಯಲ್ಲಿ 6 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಕೊರೊನಾ ಲಾಕ್​ಡೌನ್ ಬಳಿಕ ಅಂತೂ ವಾರ್ನರ್ ತನ್ನ ಅಭಿಮಾನಿಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಎಂಟರ್​ಟೈನ್ ಮಾಡುತ್ತಾ ಬಂದಿದ್ದಾರೆ. ಫಾಲೋವರ್ಸ್​ಗಳಿಗೆ ಏನಾದರೊಂದು ವಿಶೇಷ ಕೊಡುತ್ತಲೇ ಬಂದಿದ್ದಾರೆ. ಅವರಿಗೆ ಭಾರತದ ಮೇಲೆ ಎಷ್ಟು ಅಭಿಮಾನ ಇದೆ ಎಂದೂ ಹೊಸದಾಗಿ ಹೇಳಬೇಕಾಗಿಲ್ಲ.

ಭಾರತೀಯ ಭಾಷೆಯ ಹಾಡುಗಳನ್ನು ಬಳಸಿಕೊಂಡು ಇನ್​ಸ್ಟಾಗ್ರಾಂನಲ್ಲಿ ಡೇವಿಡ್ ವಾರ್ನರ್ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೆ ಅವರು ಅಂತಹದೇ ವಿಡಿಯೋ ಮೂಲಕ ಸುದ್ದಿಯಲ್ಲಿ ಇದ್ದಾರೆ. ರಜನಿಕಾಂತ್ ಹಾಡಿಗೆ ಸೂಪರ್ ಸ್ಟಾರ್ ರಜನಿ ಮುಖವನ್ನು ತಮ್ಮ ಮುಖದೊಂದಿಗೆ ಬದಲಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ರಿಫೇಸ್ ಆಪ್ ಬಳಸಿ ಮಾಡಿರುವ ಈ ಕರಾಮತ್ತು ನೆಟ್ಟಿಗರ ಮನಗೆದ್ದಿದೆ.

ವಾರ್ನರ್ ಭಾರತೀಯ ಅದರಲ್ಲೂ ಬಾಲಿವುಡ್ ಹಾಡುಗಳನ್ನು ಬಳಸಿ ವಿಡಿಯೋ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿ ಅವರು ವಿಡಿಯೋ ಹಂಚಿಕೊಂಡಿದ್ದರು. ಅದು ಬಹಳಷ್ಟು ಕನ್ನಡ ಜನರ ಮನಗೆದ್ದಿತ್ತು. ಇದೀಗ, ಈ ವಿಡಿಯೋದಲ್ಲಿ ವಾರ್ನರ್ ಐಶ್ವರ್ಯಾ ರೈ ಜೊತೆಗೆ ಡ್ಯಾನ್ಸ್ ಮಾಡುತ್ತಿರುವಂತೆ ಕಂಡುಬಂದಿರುವುದು ಫ್ಯಾನ್ಸ್​ಗೆ ಮನೋರಂಜನೆ ಕೊಟ್ಟಿದೆ.

ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಂದು ಮಿಲಿಯನ್ ವೀವ್ಸ್​ ಪಡೆದುಕೊಂಡಿದೆ. ಅಂದರೆ ಭರ್ಜರಿ 10 ಲಕ್ಷಗಳಷ್ಟು ಜನರು ಈ ವಿಡಿಯೋ ನೋಡಿದ್ದಾರೆ. ಅದೂ ಕೂಡ 24 ಗಂಟೆಗೂ ಕಡಿಮೆ ಅವಧಿಯಲ್ಲಿ!

ಅಭಿಮಾನಿಗಳು ಈ ವಿಡಿಯೋಗೆ ವಿವಿಧ ರಿಯಾಕ್ಷನ್ಸ್ ನೀಡಿದ್ದಾರೆ. ‘ಈ ಪ್ರಯತ್ನ ಬಹಳ ಚೆನ್ನಾಗಿದೆ. ಆದರೆ ರಜನಿಕಾಂತ್ ಕಾಪಿ ಮಾಡುವುದು ಅಷ್ಟು ಸುಲಭ ಅಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಕಮೆಂಟ್​ಗಳ ಸುರಿಮಳೆಯಲ್ಲಿ ವಾರ್ನರ್​ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಹೀಗೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ನಿಮಗೂ ಗೊತ್ತಿರಬಹುದು. ಇಂತಹ ಹಲವು ವಿಡಿಯೋ ಶೇರ್ ಮಾಡುವ ಮೂಲಕ ಅವರು ಹಲವರ ಹೃದಯ ಗೆದ್ದಿದ್ದಾರೆ. ಈ ಮೊದಲು, ತಮಿಳು ನಟ ಧನುಷ್ ಹಾಗೂ ವಿಜಯ್ ಸ್ಟೈಲ್​ನಲ್ಲಿ ಕೂಡ ವಿಡಿಯೋ ಮಾಡಿದ್ದರು.

ಇದನ್ನೂ ಓದಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ಡೇವಿಡ್​ ವಾರ್ನರ್​; ಕನ್ನಡಿಗರು ಫುಲ್​ ಫಿದಾ

ಇದನ್ನೂ ಓದಿ: Imran Khan: 32 ವರ್ಷಗಳ ಹಳೆಯ ಫೋಟೊ ಹಂಚಿಕೊಂಡು ಟ್ರಾಲ್ ಆದ ಪಾಕ್ ಪ್ರಧಾನಿ ಇಮ್ರಾನ್ ಖಾನ್

Published On - 10:24 pm, Mon, 30 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ