Imran Khan: 32 ವರ್ಷಗಳ ಹಳೆಯ ಫೋಟೊ ಹಂಚಿಕೊಂಡು ಟ್ರಾಲ್ ಆದ ಪಾಕ್ ಪ್ರಧಾನಿ ಇಮ್ರಾನ್ ಖಾನ್
Viral Photo: ಫೋಟೊದಲ್ಲಿ ನೀವು ನೋಡಬಹುದು. ಇಮ್ರಾನ್ ಖಾನ್ ಸ್ಕಾರ್ಡು ನದಿಯಲ್ಲಿ ಬೋಟ್ ಮೇಲೆ ಕುಳಿತುಕೊಂಡಿದ್ದಾರೆ. ಬ್ಯಾಟ್ ಮ್ಯಾನ್ ಟೋಪಿಯನ್ನು ಕೂಡ ಧರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಕುರಿತ ವಿಚಾರಗಳು ಟ್ರಾಲ್ ಆಗುವುದು ಅಥವಾ ತಮಾಷೆಗೆ ಗುರಿಯಾಗುವುದು ಹೊಸತೇನಲ್ಲ. ಅದರಲ್ಲಿಯೂ ಅಫ್ಘಾನಿಸ್ತಾನದ ತಾಲಿಬಾನ್ ಘಟನಾವಳಿಗಳ ಬಳಿಕ ಭಾರತದಲ್ಲಿ ಪಾಕಿಸ್ತಾನ ಭಾರೀ ಟೀಕೆ, ಆಕ್ರೋಶ ಹಾಗೂ ಟ್ರಾಲ್ಗೆ ಕೂಡ ಒಳಗಾಗುತ್ತಿದೆ. ಕೆಲವೊಮ್ಮೆ ಟ್ರಾಲ್ ಆರ್ಥಿಕತೆ, ರಕ್ಷಣೆ, ನಾಯಕರ ಹೇಳಿಕೆ ಇತ್ಯಾದಿಗಳಿಗೆ ಆಗಬಹುದು. ನೇರವಾಗಿ ಅಲ್ಲಿನ ನಾಯಕರೇ ಸೋಷಿಯಲ್ ಮೀಡಿಯಾಗಳಲ್ಲಿ ಟ್ರಾಲ್ ಆಗುವದು ಇದೆ. ಅದರಂತೆ ಈಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೆಟ್ಟಿಗರಿಂದ ತಮಾಷೆಗೆ ಒಳಗಾಗಿದ್ದಾರೆ.
ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ಹಳೆಯ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಆ ಫೋಟೊದ ಕ್ಯಾಪ್ಶನ್ನಲ್ಲಿ ಇಮ್ರಾನ್ ಖಾನ್ ತಿಳಿಸಿರುವಂತೆ, ಅದು 32 ವರ್ಷಗಳ ಹಳೆಯ ಫೋಟೊ ಆಗಿದೆ. ಅಂದರೆ, ಸುಮಾರು 1989 ರ ವೇಳೆಯ ಫೋಟೊ ಅದಾಗಿದೆ. ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೊ ಈಗ ವೈರಲ್ ಆಗುತ್ತಿದೆ.
ಫೋಟೊದಲ್ಲಿ ನೀವು ನೋಡಬಹುದು. ಇಮ್ರಾನ್ ಖಾನ್ ಸ್ಕಾರ್ಡು ನದಿಯಲ್ಲಿ ಬೋಟ್ ಮೇಲೆ ಕುಳಿತುಕೊಂಡಿದ್ದಾರೆ. ಬ್ಯಾಟ್ ಮ್ಯಾನ್ ಟೋಪಿಯನ್ನು ಕೂಡ ಧರಿಸಿದ್ದಾರೆ. ಈ ಫೋಟೊವನ್ನು ಇಮ್ರಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಟ್ರಾಲ್ ಮಾಡಲು ಆರಂಭಿಸಿದ್ದಾರೆ.
View this post on Instagram
ಒಬ್ಬ ಈ ಫೋಟೊ ನೋಡಿ ಜೋಕರ್ ಎಂದು ಕಮೆಂಟ್ ಮಾಡಿದ್ದಾನೆ. ಮತ್ತು ಕೆಲವರು ಇಮ್ರಾನ್ ಖಾನ್ ಧರಿಸಿರುವ ಬ್ಯಾಟ್ ಮ್ಯಾನ್ ಟೋಪಿಯನ್ನು ಹೇಳಿ ತಮಾಷೆ ಮಾಡಿದ್ದಾರೆ. ಸುಮಾರು 1.35 ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್ ಲೈಕ್ ಮಾಡಿದ್ದಾರೆ. 1,600 ಕ್ಕೂ ಅಧಿಕ ಮಂದಿ ಕಮೆಂಟ್ ಕೂಡ ಮಾಡಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ರಾಲ್ ಆಗುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. ಈ ಮೊದಲು ಕೂಡ ಪಾಕ್ ಪ್ರಧಾನಿ ಹಲವು ಬಾರಿ ಟೀಕೆಗೆ ಒಳಗಾಗಿದ್ದರು. ಟ್ವಿಟರ್, ಇನ್ಸ್ಟಾಗ್ರಾಂ ಎಂದು ಬಿಡದೆ ಎಲ್ಲಾ ಕಡೆಯು ನೆಟ್ಟಿಗರು ದಾಳಿ ಮಾಡಿ ಇಮ್ರಾನ್ ಖಾನ್ ಬಂದಾಗೆಲ್ಲಾ ಆಡಿಕೊಳ್ಳುತ್ತಾರೆ. ಈ ಫೋಟೊ ಕೂಡ ಹಳೆಯ ನೆನಪಾಗಿದ್ದರೂ ನೆಟ್ಟಿಗರು ಟ್ರಾಲ್ ಮಾಡಿ ಕಾಲೆಳೆದುಬಿಟ್ಟಿದ್ದಾರೆ.
ಇದನ್ನೂ ಓದಿ: ‘ಜೀನ್ಸ್ ಪ್ಯಾಂಟ್ ಮೇಲೆ ಪೇಂಟ್ ಇರುವುದಲ್ಲ’ ಕೇರಳದಲ್ಲಿ ಚಿನ್ನ ಸಾಗಣೆ ಮಾಡಲು ವ್ಯಕ್ತಿ ಮಾಡಿದ ತಂತ್ರ
ಇದನ್ನೂ ಓದಿ: 6,522 ಮೀಟರ್ ಎತ್ತರದಲ್ಲಿ ಎರಡು ಏರ್ ಬಲೂನ್ಗಳ ನಡುವಿನ ಹಲಗೆಯ ಮೇಲೆ ನಡೆದು ಸಾಗಿದ ವ್ಯಕ್ತಿ; ಮೈ ಜುಂ ಎನ್ನಿಸುವ ವಿಡಿಯೋ ವೈರಲ್