Viral Video: ಲೂಸಿಯಾನದಲ್ಲಿ ಇಡಾ ಚಂಡಮಾರುತದ ಅಬ್ಬರ; ಹಿಮ್ಮುಖವಾಗಿ ಹರಿಯಿತು ಮಿಸಿಸಿಪ್ಪಿ ನದಿ

Hurricane Ida | ಅಮೆರಿಕದ ನ್ಯೂ ಒರ್ಲಿಯನ್ಸ್​ ಕರಾವಳಿ ತೀರದಲ್ಲಿ ಎದ್ದಿರುವ ಇಡಾ ಚಂಡಮಾರುತದಿಂದ ಈಗಾಗಲೇ 3,02,000 ಮನೆಗಳು ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ವಿದ್ಯುತ್​ ಪೂರೈಕೆ ಕಡಿತಗೊಂಡಿದೆ. ಈ ಭಾಗದಲ್ಲಿ ಗಂಟೆಗೆ 240 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

Viral Video: ಲೂಸಿಯಾನದಲ್ಲಿ ಇಡಾ ಚಂಡಮಾರುತದ ಅಬ್ಬರ; ಹಿಮ್ಮುಖವಾಗಿ ಹರಿಯಿತು ಮಿಸಿಸಿಪ್ಪಿ ನದಿ
ಇಡಾ ಚಂಡಮಾರುತದ ಪರಿಣಾಮ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 30, 2021 | 2:27 PM

Cyclone Ida | ವಾಷಿಂಗ್ಟನ್: ಅಮೆರಿಕದಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ಇದಕ್ಕೆ ಇಡಾ (Hurricane Ida) ಎಂದು ಹೆಸರಿಡಲಾಗಿದೆ. ಚಂಡಮಾರುತ ಅಬ್ಬರದ ಜೊತೆಗೆ ಭೂಕುಸಿತವೂ ಉಂಟಾಗುತ್ತಿದೆ. ಭಾನುವಾರ ಅಪ್ಪಳಿಸಿರುವ ಇಡಾ ಚಂಡಮಾರುತದ ಪರಿಣಾಮದಿಂದ ಮಿಸಿಸಿಪ್ಪಿ ನದಿ (Mississippi River) ಹಿಮ್ಮುಖವಾಗಿ ಹರಿಯುತ್ತಿದೆ. ಈ ಬಾರಿ ಎದ್ದಿರುವ ಇಡಾ ಚಂಡಮಾರುತ ಭಾರೀ ಅಪಾಯದಿಂದ ಕೂಡಿದ್ದು, ಮಿಸಿಸಿಪ್ಪಿ ನದಿ ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹರಿಯಲಾರಂಭಿಸಿದೆ.

ಮಿಸಿಸಿಪ್ಪಿ ನದಿ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಸಮುದ್ರದಲ್ಲಿ ಭೀಕರ ಚಂಡಮಾರುತ ಎದ್ದಿರುವುದರಿಂದ ನದಿ ಹಿಮ್ಮುಖವಾಗಿ ಹರಿಯತೊಡಗಿದೆ. ಅಮೆರಿಕದ ನ್ಯೂ ಒರ್ಲಿಯನ್ಸ್​ ಕರಾವಳಿ ತೀರದಲ್ಲಿ ಎದ್ದಿರುವ ಈ ಚಂಡಮಾರುತದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಅನೇಕ ಮನೆಗಳು ನಾಶವಾಗಿವೆ. ಈ ಭಾಗದಲ್ಲಿ ಗಂಟೆಗೆ 240 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.

ನ್ಯೂ ಒರ್ಲಿಯನ್ಸ್​ ಭಾಗದಲ್ಲಿ ಉಂಟಾಗಿರುವ ಇಡಾ ಚಂಡಮಾರುತದಿಂದ ಲೂಸಿಯಾನದ ರಾಜಧಾನಿ ಬ್ರಾಟನ್​ ರೂಜ್ ಸುತ್ತಮುತ್ತ ಜನಜೀವನ ಅಸ್ತವ್ಯಸ್ತವಾಗಿದೆ. ಈ ಭಾಗದಲ್ಲಿ ಮನೆ ಮೇಲೆ ಮರ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನೊಂದು ಸಾವಿನ ಪ್ರಕರಣ ಕೂಡ ಇದೇ ಭಾಗದಲ್ಲಿ ದಾಖಲಾಗಿದೆ. ಇಡಾ ಚಂಡಮಾರುತದ ಅಬ್ಬರ ಇನ್ನೂ ಮೂರ್ನಾಲ್ಕು ದಿನ ಇರುವ ಸಾಧ್ಯತೆಯಿದೆ.

ಇಡಾ ಚಂಡಮಾರುತದಿಂದ ಈಗಾಗಲೇ 3,02,000 ಮನೆಗಳು ಹಾಗೂ ಕಾರ್ಖಾನೆ, ಕಂಪನಿಗಳಲ್ಲಿ ವಿದ್ಯುತ್​ ಪೂರೈಕೆ ಕಡಿತಗೊಂಡಿದೆ. ಈ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉಂಟಾಗಿರುವ ಅತಿ ಪ್ರಬಲ ಚಂಡಮಾರುತ ಇದಾಗಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Viral Video: ಮೊಬೈಲ್ ಕಿತ್ತುಕೊಂಡು ಹಾರಿಹೋಯ್ತು ಗಿಳಿ; ಆಮೇಲಾಗಿದ್ದು ಊಹೆಗೂ ನಿಲುಕದ್ದು!

Turkey Floods: ಟರ್ಕಿಯಲ್ಲಿ ಭೀಕರ ಪ್ರವಾಹ; ಸಾವಿನ ಸಂಖ್ಯೆ 70ಕ್ಕೆ ಏರಿಕೆ, 40 ಜನ ನಾಪತ್ತೆ

(Shocking Video: Hurricane Ida Lashes Louisiana Mississippi River To Flow in Reverse Ida Cyclone)

Published On - 2:25 pm, Mon, 30 August 21

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್