Viral Video: ಮೊಬೈಲ್ ಕಿತ್ತುಕೊಂಡು ಹಾರಿಹೋಯ್ತು ಗಿಳಿ; ಆಮೇಲಾಗಿದ್ದು ಊಹೆಗೂ ನಿಲುಕದ್ದು!
Trending Video: ಮೊಬೈಲ್ ಕಸಿದುಕೊಂಡು ಗಿಳಿ ಹಾರಿ ಹೋದಾಗ ವಿಡಿಯೋ ಕ್ಯಾಮೆರಾ ಆನ್ ಆಗಿದ್ದು, ಸುಮಾರು ಒಂದು ನಿಮಿಷಗಳ ಕಾಲ ವಿಡಿಯೋ ರೆಕಾರ್ಡ್ ಆಗಿದೆ. ಸುತ್ತಮುತ್ತಲಿನ ಮನೆಗಳು, ರಸ್ತೆಗಳು, ಟೆರೇಸ್ಗಳೆಲ್ಲವೂ ಅದರಲ್ಲಿ ಕವರ್ ಆಗಿದೆ!
ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಕೆಲವು ವಿಡಿಯೋಗಳು ವಿಚಿತ್ರವೆನಿಸಿದರೂ ನಮಗೆ ಖುಷಿ ಕೊಡುತ್ತವೆ. ಇದೀಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದರೆ ನಿಮಗೆ ಶಾಕ್ ಆಗುವುದು ಗ್ಯಾರಂಟಿ. ನಾಯಿಗಳು, ಕೋತಿಗಳು ಕಿಲಾಡಿ ಮಾಡುವುದನ್ನು ನೋಡಿದ್ದೀರಿ. ಆದರೆ, ಎಂದಾದರೂ ಗಿಳಿಗಳು ತರಲೆ ಮಾಡುವುದನ್ನು ನೋಡಿದ್ದೀರಾ? ಟೆರೇಸ್ನಲ್ಲಿ ಮೊಬೈಲ್ ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಮೊಬೈಲನ್ನು ಕಿತ್ತುಕೊಂಡ ಗಿಳಿ ಹಾರಿ ಹೋಗಿದೆ. ಇದನ್ನು ನೋಡಿದ ಆ ಮೊಬೈಲ್ ಮಾಲೀಕ ಶಾಕ್ ಆಗಿದ್ದಾನೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಟೆರೇಸ್ನಲ್ಲಿದ್ದ ವ್ಯಕ್ತಿಯ ಕೈಯಿಂದ ಗಿಳಿಯೊಂದು ಮೊಬೈಲ್ ಕಿತ್ತುಕೊಂಡು ವೇಗವಾಗಿ ಹಾರಿಹೋಗಿದೆ. ಅದರಿಂದ ಶಾಕ್ ಆದ ಮೊಬೈಲ್ ಮಾಲೀಕ ಆ ಗಿಳಿಯ ಹಿಂದೆಯೇ ಓಡಿದ್ದಾನೆ. ವಿಚಿತ್ರವೆಂಬಂತೆ ಗಿಳಿಯ ಬಳಿಯಿದ್ದ ಮೊಬೈಲ್ ಕ್ಯಾಮೆರಾದ ವಿಡಿಯೋ ಮೋಡ್ ಆನ್ ಆಗಿದ್ದು, ಅದರಲ್ಲಿ ಮೇಲಿನಿಂದ ಪನೋರಮಿಕ್ ವ್ಯೂ ಕ್ಲಿಕ್ ಆಗಿದೆ. ಸುಮಾರು ಒಂದು ನಿಮಿಷಗಳ ಕಾಲ ವಿಡಿಯೋ ರೆಕಾರ್ಡ್ ಆಗಿದ್ದು, ಸುತ್ತಮುತ್ತಲಿನ ಮನೆಗಳು, ರಸ್ತೆಗಳು, ಟೆರೇಸ್ಗಳೆಲ್ಲವೂ ಅದರಲ್ಲಿ ಕವರ್ ಆಗಿದೆ.
Parrot takes the phone on a fantastic trip. ???? pic.twitter.com/Yjt9IGc124
— Fred Schultz (@fred035schultz) August 24, 2021
ಮೊಬೈಲ್ ಹಿಡಿದು ಹಾರುತ್ತಿದ್ದ ಗಿಳಿ ಒಂದೆರಡು ಸೆಕೆಂಡ್ ಟೆರೇಸ್ನಲ್ಲಿ ಕುಳಿತಿದೆ. ಆಗ ಟೆರೇಸ್ಗೆ ಯಾರೋ ಬಂದ ಶಬ್ದ ಕೇಳಿ ಮತ್ತೆ ಅಲ್ಲಿಂದ ಹಾರಿದೆ. ಕೊನೆಗೆ ಕಾರ್ ಒಂದರ ಮೇಲೆ ಹೋಗಿ ಕುಳಿತ ಗಿಳಿ ಮೊಬೈಲನ್ನು ಅಲ್ಲೇ ಬಿಟ್ಟಿದೆ. ಅಲ್ಲಿಗೆ ಆ ಮೊಬೈಲ್ನಲ್ಲಿ ರೆಕಾರ್ಡ್ ಆಗುತ್ತಿದ್ದ ವಿಡಿಯೋ ಕೂಡ ಕ್ಲೋಸ್ ಆಗಿದೆ. ಒಂದೂವರೆ ನಿಮಿಷಗಳ ಕಾಲ ಗಿಳಿಯ ಬಳಿಯಿದ್ದ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ.
Incredible. Drones can only dream of being birds.
— Idahohoho (@VinceCorvaia) August 25, 2021
ತನ್ನ ಮೊಬೈಲ್ ಸಿಕ್ಕ ಕೂಡಲೇ ಆ ವ್ಯಕ್ತಿ ಮೊಬೈಲನ್ನು ಚೆಕ್ ಮಾಡಿದಾಗ ಈ ವಿಡಿಯೋ ರೆಕಾರ್ಡ್ ಆಗಿರುವುದನ್ನು ಕಂಡು ಶಾಕ್ ಆಗಿದ್ದಾನೆ. ಈ ವಿಡಿಯೋವನ್ನು ಆತ ಟ್ವಿಟ್ಟರ್ಗೆ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋವನ್ನು 4.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪರಿಸರ ಪ್ರೇಮಿ ಗಿಳಿಯೇ ಇರುವಾಗ ಡ್ರೋನ್ ಕ್ಯಾಮೆರಾವೆಲ್ಲ ಏಕೆ? ಎಂದು ಕೆಲವರು ಈ ವಿಡಿಯೋ ನೋಡಿ ಮೆಚ್ಚಿ ಕಮೆಂಟ್ ಮಾಡಿದ್ದಾರೆ. ಕಾಕತಾಳೀಯವಾಗಿ ರೆಕಾರ್ಡ್ ಆದ ವಿಡಿಯೋವನ್ನು ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ.
Who needs a drone when you can use an eco-friendly parrot ?♀️
— Su Ho (@SuHoDjirikartup) August 24, 2021
ಅಷ್ಟು ದೂರಕ್ಕೆ ಹಾರಿದರೂ ಮೊಬೈಲನ್ನು ಎಲ್ಲೂ ಬೀಳಿಸದೇ ಇದ್ದುದು ಅಚ್ಚರಿಯ ಸಂಗತಿ. ಡ್ರೋನ್ಗಿಂತಲೂ ವೇಗವಾಗಿ ಎಲ್ಲವನ್ನೂ ರೆಕಾರ್ಡ್ ಮಾಡಿದೆ ಎಂದು ಗಿಳಿಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್
Viral Video: ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಸ್ಥಂಭ ಹತ್ತಿ ಬಾವುಟ ಹಾರಿಸಿದ ದೇಶಪ್ರೇಮಿ ಕೋತಿ!
(Viral Video: Parrot flies away with a Mobile Phone Bird Journey Recorded on Video Camera like Drone Camera)