Heartwarming: ಬೆಂಗಳೂರು ಚಿತ್ರ ಕಲಾವಿದ ಸ್ಟೀವನ್ ಹ್ಯಾರಿಸ್ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ

PM Narendra Modi: ಕಳೆದ 15 ವರ್ಷಗಳಿಂದ ಚಿತ್ರಕಲಾವಿದರಾದ ಸ್ಟೀವನ್ ಹ್ಯಾರಿಸ್​ಗೆ ಕೇಲವ 20 ವರ್ಷ. ಮೋದಿಯವರ ಎರಡು ಭಾವಚಿತ್ರಗಳನ್ನು ಪೇಂಟಿಂಗ್ ಮಾಡಿ ಅವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು.

Heartwarming: ಬೆಂಗಳೂರು ಚಿತ್ರ ಕಲಾವಿದ ಸ್ಟೀವನ್ ಹ್ಯಾರಿಸ್ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ
ಬೆಂಗಳೂರು ಚಿತ್ರ ಕಲಾವಿದನ ಪ್ರತಿಭೆಗೆ ಪ್ರಧಾನಿ ಮೋದಿ ಮೆಚ್ಚುಗೆ
Follow us
TV9 Web
| Updated By: shruti hegde

Updated on:Aug 27, 2021 | 11:28 AM

ಬೆಂಗಳೂರಿನ ಯುವ ಚಿತ್ರ ಕಲಾವಿದ ಸ್ಟೀವನ್ ಹ್ಯಾರಿಸ್ ಪ್ರಧಾನಿ ಮೋದಿಯವರ ಎರಡು ಚಿತ್ರಗಳನ್ನು ಬಿಡಿಸಿ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದರ ಜತೆಗೆ ಸಾಮಾಜಿಕ ಬದ್ಧತೆ ಹಾಗೂ ಕಳಕಳಿ ಕುರಿತ ಪತ್ರವೊಂದನ್ನು ನೀಡಿದ್ದರು. ಇದನ್ನು ನೋಡಿದ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುರುವಾರ ಪ್ರಧಾನಿ ಬೆಂಗಳೂರಿನ ಸ್ವೀವನ್ ಹ್ಯಾರಿಸ್ ಕಲಾವಿದನ ಪ್ರತಿಭೆಗೆ ಪ್ರತಿಕ್ರಿಯಿಸಿದ್ದಾರೆ.

ಕಳೆದ 15 ವರ್ಷಗಳಿಂದ ಚಿತ್ರಕಲಾವಿದರಾದ ಸ್ಟೀವನ್ ಹ್ಯಾರಿಸ್​ಗೆ ಕೇಲವ 20 ವರ್ಷ. ಮೋದಿಯವರ ಎರಡು ಭಾವಚಿತ್ರಗಳನ್ನು ಪೇಂಟಿಂಗ್ ಮಾಡಿ ಅವರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಈ ಕುರಿತಂತೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಯುವಜನರ ಆಸಕ್ತಿ ಮತ್ತು ಪ್ರತಿಭೆಯನ್ನು ನೋಡುವುದು ತುಂಬಾ ಸಂತೋಷವಾಗುವ ವಿಷಯ ಎಂದು ಹೇಳಿದ್ದಾರೆ.

ನಿಮ್ಮ ವರ್ಣ ಚಿತ್ರವನ್ನು ನೋಡಿದಾಕ್ಷಣ ನಿಮ್ಮ ಪ್ರತಿಭೆಯು ವ್ಯಕ್ತವಾಗುತ್ತಿದೆ. ಅತ್ಯಂತ ಸೂಕ್ಷ್ಮತೆಯೊಂದಿಗೆ ಕಾರ್ಯಗತಗೊಳಿಸುವ ಕೌಶಲ್ಯ, ಸೃಜನಶೀಲ ಕ್ಷೇತ್ರಗಳಲ್ಲಿ ಯುವಜನರ ಆಸಕ್ತಿ ಮತ್ತು ಶ್ರದ್ಧೆಯನ್ನು ನೋಡುವುದೇ ಸಂತೋಷವಾಗುತ್ತಿದೆ ಎಂದು ಮೋದಿ ಪತ್ರದ ಮೂಲಕ ತಿಳಿಸಿದ್ದಾರೆ.

ಸ್ಟೀವನ್ ಹ್ಯಾರಿಸ್ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕಳಕಳಿ ಕುರಿತ ಪತ್ರವನ್ನು ಮೋದಿ ಶ್ಲಾಘಿಸಿದ್ದಾರೆ. ನಿಮ್ಮ ನಿರಂತರವಾದ ಪ್ರಯತ್ನ ಹಾಗೂ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟಕ್ಕೆ ಶಕ್ತಿ ತುಂಬಲಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಎರಡು ಪೇಂಟಿಂಗ್ ಜತೆಗೆ ಪತ್ರವೊಂದನ್ನು ಸ್ಟೀವನ್ ಹ್ಯಾರಿಸ್ ಕಳುಹಿಸಿಕೊಟ್ಟಿದ್ದರು. ಕಳೆದ 15 ವರ್ಷಗಳಿಂದ ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದೇನೆ, ಸುಮಾರು 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುವ ವಿಷಯವನ್ನು ತಿಳಿಸಿದ್ದರು. ಜತೆಗೆ ಪ್ರಧಾನಿ ಮೋದಿ ಅವರು ನನ್ನ ಸ್ಪೂರ್ತಿ, ಅವರು ಕೈಗೊಂಡ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಶ್ಲಾಘಿಸಿ 20 ವರ್ಷದ ಯುವ ಚಿತ್ರ ಕಲಾವಿದ ಸ್ವೀಟನ್ ಹ್ಯಾರಿಸ್ ಪತ್ರ ಬರೆದು ಕಳುಹಿಸಿಕೊಟ್ಟಿದ್ದರು.

ಇದನ್ನೂ ಓದಿ:

ಮರಳಿನಲ್ಲಿ ಚಿತ್ರ ಬರೆದು ಕಂಚಿನ ಪದಕ ವಿಜೇತೆ ಪಿವಿ ಸಿಂಧುಗೆ ಶುಭ ಹಾರೈಸಿದ ಕಲಾವಿದ ಸುದರ್ಶನ್ ಪಟ್ನಾಯಕ್

Puri Ratha Yatra 2021: ಪುರಿ ಬೀಚ್​ನಲ್ಲಿ ಅರಳಿದ ಮರಳು ಕಲೆ! ಜಗನ್ನಾಥ ದೇವರನ್ನು ಚಿತ್ರಿಸಿದ ಕಲಾವಿದ

Published On - 11:14 am, Fri, 27 August 21