ಈ ಮಾರ್ಕೆಟ್​ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ

ಕ್ಯಾಮಾರಾ ಹಿಡಿದು ಎಂಟ್ರಿಕೊಟ್ಟ ವರದಿಗಾರ್ತಿ ಸಂಶೋಧನಾ ವಿಷಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಘಟನೆಯನ್ನು ಬಯಲು ಮಾಡಿದ್ದಾರೆ. ಕ್ಯಾಮರಾ ಹಿಡಿದು ರಹಸ್ಯವಾಗಿ ಅಂಗಡಿಗೆ ಹೋಗಿ ಮಾಲೀಕನೊಂದಿಗೆ ಮಾತನಾಡಿದ್ದಾರೆ.

ಈ ಮಾರ್ಕೆಟ್​ನಲ್ಲಿ ಸಂಶೋಧನಾ ಪ್ರಬಂಧಗಳು ಮಾರಾಟಕ್ಕಿವೆ!; ರಹಸ್ಯ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ
ದೆಹಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ ಸಂಶೋಧನಾ ಪ್ರಬಂಧ
Follow us
TV9 Web
| Updated By: shruti hegde

Updated on: Aug 27, 2021 | 1:30 PM

ಪಿಹೆಚ್​ಡಿ ಪ್ರಥಮ ಹಾಗೂ ದ್ವಿತೀಯ ದರ್ಜೆಯ ಸಾಮಾನ್ಯ ಎಲ್ಲಾ ವಿಷಯಗಳ ಸಂಶೋಧನಾ ಪ್ರಬಂಧವು ದೆಹಲಿಯಲ್ಲಿ ಮಾರಾಟವಾಗುತ್ತಿರುವ ವಿಷಯ ಬಯಲಾಗಿದೆ. ಈ ಕುರಿತಂತೆ ಸ್ಥಳೀಯ ಪ್ರತ್ರಕರ್ತೆ ರಹಸ್ಯ ಕಾರ್ಯಾಚರಣೆ ನಡೆಸಿ ವರದಿ ಮಾಡಿದ್ದಾರೆ. ಎದುರಿಗೆ ಫೋಟೋ ಶಾಪ್​ಗಳು, ಬುಕ್ ಶಾಪ್​ಗಳಿದ್ದರೂ ಹಿಂಬದಿಯಿಂದ ಸಂಶೋಧನಾ ಪ್ರಬಂಧವನ್ನು ವಿದ್ಯಾರ್ಥಿಗಳು ಹಣ ಕೊಟ್ಟು ಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಪತ್ರಕರ್ತೆ ಬಯಲು ಮಾಡಿದ್ದಾರೆ. ಅಂದಹಾಗೆ, ಈ ಸಂಶೋಧನಾ ಪ್ರಬಂಧಗಳು ಪಕ್ಕಾ ಒರಿಜಿನಲ್ ಆಗಿದ್ದು, ಇವುಗಳನ್ನು ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಿಹೆಚ್​ಡಿ ವಿದ್ಯಾರ್ಥಿಗಳು, ಪ್ರೊಫೆಸರ್​ಗಳೇ ಇವುಗಳನ್ನು ಬರೆದು ಕೊಡುತ್ತಾರೆ!

ಕ್ಯಾಮಾರಾ ಹಿಡಿದು ಎಂಟ್ರಿಕೊಟ್ಟ ವರದಿಗಾರ್ತಿ ಸಂಶೋಧನಾ ವಿಷಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಘಟನೆಯನ್ನು ಬಯಲು ಮಾಡಿದ್ದಾರೆ. ಕ್ಯಾಮರಾ ಹಿಡಿದು ರಹಸ್ಯವಾಗಿ ಅಂಗಡಿಗೆ ಹೋಗಿ ಮಾಲೀಕನೊಂದಿಗೆ ಮಾತನಾಡಿದ್ದಾರೆ. ವಿದ್ಯಾರ್ಥಿಯಂತೆ ನಟಿಸಿ ಸಂಶೋಧನಾ ಪ್ರಬಂಧವನ್ನು ಕೊಳ್ಳುವಂತೆ ನಟಿಸಿದ್ದಾರೆ. ಮಾಲೀಕ ಯಾವ ವಿಷಯಕ್ಕೆ ಸಂಬಂಧಿಸಿದ ಪ್ರಬಂಧ ಬೇಕು ಎಂದು ಮಾತನಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ದೆಹಲಿಯ ಪಟೇಲ್ ಮಾರ್ಕೆಟ್​ನಲ್ಲಿರುವ ಈ ಪುಸ್ತಕ ಮಳಿಗೆಯ ಸಿಬ್ಬಂದಿ ಬಳಿ ಸಂಶೋಧನಾ ಪ್ರಬಂಧಗಳನ್ನು ಬರೆದುಕೊಡಲೆಂದೇ ಪ್ರೊಫೆಸರ್​, ವಿದ್ಯಾರ್ಥಿಗಳ ತಂಡವೇ ಇದೆಯಂತೆ. ಮಾಧ್ಯಮ, ಕಾನೂನು, ವಿಜ್ಞಾನ, ಸಮಾಜ ವಿಜ್ಞಾನ ಹೀಗೆ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಯಾವ ರೀತಿಯಲ್ಲಿ ಬೇಕೋ ಆ ರೀತಿಯಲ್ಲಿ ಸಂಶೋಧನಾ ಪ್ರಬಂಧಗಳು ಇಲ್ಲಿ ದೊರೆಯುತ್ತವೆ. ಒಂದು ಕಾಲೇಜಿನಲ್ಲಿ ಈಗಾಗಲೇ ಪಬ್ಲಿಷ್ ಆಗಿರುವ ಸಂಶೋಧನಾ ಪ್ರಬಂಧಗಳು ಕೂಡ ಇಲ್ಲಿ ಸಿಗುತ್ತವೆ. ಅದನ್ನೇ ಸ್ವಲ್ಪ ಬದಲಾಯಿಸಿಕೊಂಡು ಮತ್ತೊಂದು ಕಾಲೇಜಿನಲ್ಲಿ ಸಬ್ಮಿಟ್ ಮಾಡಬಹುದು. ರೆಡಿಮೇಡ್ ಅಲ್ಲದೆ ಹೊಸದಾಗಿ ಸಂಶೋಧನಾ ಪ್ರಬಂಧ ಬೇಕೆಂದರೆ ಅದನ್ನು ಬರೆದುಕೊಡಲು ದುಬಾರಿ ಹಣ ತೆರಬೇಕಾಗುತ್ತದೆ. ಈ ವಿಷಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆಯೇ ಹಣ ಕೂಡಾ ನಿಗದಿಯಾಗಿದೆ. 5,000 ದಿಂದ ಹಿಡಿದು 50,000 ರೂಪಾಯಿವರೆಗೆ ಸಂಶೋಧನಾ ಪ್ರಬಂಧ ಮಾರಾಟವಾಗುತ್ತಿರುವುದನ್ನು ಮಾಲೀಕ ಹೇಳಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಬಂಧವನ್ನು ಸಂಕಲಿಸುವುದು ಲಾಭದಾಯಕ ವ್ಯವಹಾರವಾಗಿ ಬಿಟ್ಟಿದೆ. ಪಿಹೆಚ್​ಡಿ ಪ್ರಬಂಧವನ್ನು ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆ ಮಾಡದೇ ಬರೆದರೆ ಏನು ಪ್ರಯೋಜನ?

ಇದನ್ನೂ ಓದಿ:

ಡೆತ್ ನೋಟ್ ಬರೆದಿಟ್ಟು ಕಂದಾಯ ನಿರೀಕ್ಷಕ ಆತ್ಮಹತ್ಯೆ, ಬಗರ್ ಹುಕುಂ ಅಕ್ರಮಕ್ಕೆ ಪ್ರಾಮಾಣಿಕ ಅಧಿಕಾರಿ ಬಲಿ?

ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣ; ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ

(Research paper for sale in Delhi market)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ