AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣ; ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ

2012ರಿಂದ 2 ಲಕ್ಷಕ್ಕಿಂತಲೂ ಹೆಚ್ಚು ಬಂದೂಕು ಪರವಾನಗಿಗಳು ಜಮ್ಮು-ಕಾಶ್ಮೀರದಿಂದ ಬೇರೆಬೇರೆಕಡೆಗೆ ಮಾರಾಟ ಆಗಿವೆ. ಇದು ಭಾರತದ ಅತ್ಯಂತ ದೊಡ್ಡ ನಕಲಿ ಬಂದೂಕು ಪರವಾನಗಿ ರಾಕೆಟ್​ ಎಂದೇ ಪರಿಗಣಿಸಲಾಗಿದ್ದು, ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ.

ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣ; ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ
ಜಮ್ಮು-ಕಾಶ್ಮೀರದ ವಿವಿಧೆಡೆ ಸಿಬಿಐ ದಾಳಿ
TV9 Web
| Edited By: |

Updated on: Jul 24, 2021 | 3:03 PM

Share

ಶ್ರೀನಗರ: ಜಮ್ಮು-ಕಾಶ್ಮೀರ ಮತ್ತು ದೆಹಲಿ ಸೇರಿ ಒಟ್ಟು 40 ಪ್ರದೇಶಗಳಲ್ಲಿ ಇಂದು ಸಿಬಿಐ (CBI) ತನಿಖಾ ದಳ ದಾಳಿ ನಡೆಸಿದೆ. ಬಂದೂಕು ಪರವಾನಗಿ (Gun Licenses) ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ರೇಡ್​ ನಡೆದಿದ್ದು, ಜಮ್ಮು-ಕಾಶ್ಮೀರ (Jammu-Kashmir)ದ ಹಿರಿಯ ಐಎಎಸ್​ ಅಧಿಕಾರಿ ಶಾಹೀದ್ ಇಕ್ಬಾಲ್​ ಚೌಧರಿ ಅವರ ಶ್ರೀನಗರದಲ್ಲಿರುವ ನಿವಾಸ ಸೇರಿ, ಉದ್ಧಾಂಪುರ, ರಾಜೌರಿ, ಅನಂತನಾಗ್​ ಮತ್ತು ಬಾರಾಮುಲ್ಲಾ ಸೇರಿ ಹಲವು ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ಇಕ್ಬಾಲ್​ ಚೌಧರಿಯವರು ಸದ್ಯ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿಯಾಗಿದ್ದಾರೆ ಮತ್ತು ಜಮ್ಮು-ಕಾಶ್ಮೀರದ ಮಿಷನ್ ಯೂತ್​ನ ಸಿಇಒನೂ ಹೌದು. ಈ ಹಿಂದೆ ಕಥುರಾ, ಕಥುವಾ, ರಿಯಾಸಿ, ರಾಜೌರಿಯಂಡ್ ಉಧಂಪುರ್ ಜಿಲ್ಲೆಗಳ ಜಿಲ್ಲಾಧಿಕಾರಿಯೂ ಆಗಿದ್ದರು. ಇವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೇರೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಾವಿರಾರು ಬಂದೂರು ಪರವಾನಗಿಗಳನ್ನು ನಕಲಿ ಹೆಸರುಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇವಲ ಇವರೊಬ್ಬರೇ ಅಲ್ಲದೆ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಎಂಟು ಮಂದಿ ಜಿಲ್ಲಾಧಿಕಾರಿಗಳ ಮೇಲೆ ಸಿಬಿಐ ಕಣ್ಣಿಟ್ಟಿದ್ದು, ತನಿಖೆ ನಡೆಸುತ್ತಿದೆ.

2012ರಿಂದ 2 ಲಕ್ಷಕ್ಕಿಂತಲೂ ಹೆಚ್ಚು ಬಂದೂಕು ಪರವಾನಗಿಗಳು ಜಮ್ಮು-ಕಾಶ್ಮೀರದಿಂದ ಬೇರೆಬೇರೆಕಡೆಗೆ ಮಾರಾಟ ಆಗಿವೆ. ಇದು ಭಾರತದ ಅತ್ಯಂತ ದೊಡ್ಡ ನಕಲಿ ಬಂದೂಕು ಪರವಾನಗಿ ರಾಕೆಟ್​ ಎಂದೇ ಪರಿಗಣಿಸಲಾಗಿದ್ದು, ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಕಳೆದ ವರ್ಷ ಐಎಎಸ್​ ಅಧಿಕಾರಿ ರಾಜೀವ್​ ರಂಜನ್​ ಎಂಬುವರು ಇದೇ ಕಾರಣಕ್ಕೆ ಅರೆಸ್ಟ್ ಆಗಿದ್ದರು. ಇವರು ಕುಪ್ವಾರಾ ಜಿಲ್ಲಾಧಿಕಾರಿಯಾಗಿದ್ದಾಗ ಅಕ್ರಮ ಮಾರಾಟದಲ್ಲಿ ಪಾಲುದಾರರಾಗಿದ್ದರು. ಜಮ್ಮು-ಕಾಶ್ಮೀರದಲ್ಲಿ ನಡೆದ ಬಂದೂಕು ಪರವಾನಗಿ ಅಕ್ರಮ ಮಾರಾಟ ಪ್ರಕರಣದ ತನಿಖೆಯನ್ನು ಮಾಜಿ ಗವರ್ನರ್​ ಎಂ.ಎನ್​.ವೋಹ್ರಾ ಅವರು ಸಿಬಿಐಗೆ ವಹಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳೇ ಪಾಲ್ಗೊಂಡಿದ್ದಾರೆ ಎಂಬುನ್ನು ಕಂಡುಕೊಂಡಿದ್ದ ವೋಹ್ರಾ, ಈ ಕ್ರಮ ಕೈಗೊಂಡಿದ್ದರು. ಅಂದ ಹಾಗೆ, ಈ ಲೈಸೆನ್ಸ್​ ಸ್ಕ್ಯಾಮ್​​ನ್ನು ಮೊದಲು ಪತ್ತೆ ಹಚ್ಚಿದ್ದು 2017ರಲ್ಲಿ ರಾಜಸ್ಥಾನದ ಆ್ಯಂಟಿ ಟೆರರ್​ ಸ್ಕ್ವಾಡ್​.

ಇದನ್ನೂ ಓದಿ: ನಾಲ್ಕು ಕ್ರಿಕೆಟ್ ತಂಡಗಳನ್ನು ಏಕಕಾಲದಲ್ಲಿ ಕಣಕ್ಕಿಳಿಸುವ ಬೆಂಚ್ ಸಾಮರ್ಥ್ಯ ಟೀಂ ಇಂಡಿಯಾದಲ್ಲಿದೆ

ರಾಜ್ಯ ಉಳಿಸೋಕೆ ಕಾಂಗ್ರೆಸ್ ಪಕ್ಷವನ್ನ ತೆಗೆಯಬೇಕು”: ತುಮಕೂರಿನಲ್ಲಿ ಮಾತು ತಪ್ಪಿದ ಸಿದ್ದರಾಮಯ್ಯ

CBI Raids 40 Locations in related to Jammu Kashmir Gun License Scam

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ