AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ಕ್ರಿಕೆಟ್ ತಂಡಗಳನ್ನು ಏಕಕಾಲದಲ್ಲಿ ಕಣಕ್ಕಿಳಿಸುವ ಬೆಂಚ್ ಸಾಮರ್ಥ್ಯ ಟೀಂ ಇಂಡಿಯಾದಲ್ಲಿದೆ

Hardik Pandya: ವಿಶ್ವದ ಯಾವುದೇ ಪಂದ್ಯಾವಳಿಯನ್ನು ಗೆಲ್ಲಬಲ್ಲ ಎರಡು ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ತಂಡಗಳನ್ನು ಆಯ್ಕೆದಾರರು ಆಯ್ಕೆ ಮಾಡಬಹುದು ಎಂದು ಬರೋಡಾ ಕ್ರಿಕೆಟಿಗ ಹೇಳಿಕೊಂಡಿದ್ದಾರೆ.

ನಾಲ್ಕು ಕ್ರಿಕೆಟ್ ತಂಡಗಳನ್ನು ಏಕಕಾಲದಲ್ಲಿ ಕಣಕ್ಕಿಳಿಸುವ ಬೆಂಚ್ ಸಾಮರ್ಥ್ಯ ಟೀಂ ಇಂಡಿಯಾದಲ್ಲಿದೆ
ಟೀಂ ಇಂಡಿಯಾ
TV9 Web
| Edited By: |

Updated on: Jul 24, 2021 | 2:46 PM

Share

ಟೀಂ ಇಂಡಿಯಾ ಅದ್ಭುತ ಬೆಂಚ್ ಸಾಮರ್ಥ್ಯ ಎಲ್ಲರನ್ನು ಅಚ್ಚರಿಗೊಳಿಸಿದೆ. ಪ್ರಸ್ತುತ, ಭಾರತದ ಎರಡು ಕ್ರಿಕೆಟ್ ತಂಡಗಳು ವಿವಿಧ ದೇಶಗಳ ಪ್ರವಾಸದಲ್ಲಿವೆ. ವಿರಾಟ್ ಕೊಹ್ಲಿ ನೇತೃತ್ವದ ತಂಡವು ಡರ್ಹಾಮ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ. ಅದೇ ಸಮಯದಲ್ಲಿ, ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿರುವ ಯುವ ಆಟಗಾರರಿಂದ ತುಂಬಿರುವ ಭಾರತ ತಂಡ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಈಗ ಅವರು ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಆಯ್ಕೆದಾರರು ಇನ್ನೂ ಎರಡು ತಂಡಗಳನ್ನು ಆಯ್ಕೆ ಮಾಡಬಹುದು, ಮತ್ತು ಈ ತಂಡಗಳು ವಿಶ್ವದ ಯಾವುದೇ ಪಂದ್ಯಾವಳಿಯನ್ನು ಗೆಲ್ಲುವ ಸಾಮಥ್ಯ್ರವನ್ನು ಹೊಂದಿವೆ ಎಂಬ ಹೇಳಿಕೆ ನೀಡಿದ್ದಾರೆ.

ಶ್ರೀಲಂಕಾಕ್ಕೆ ಭೇಟಿ ನೀಡಿದ ತಂಡದ ಕೆಲವೇ ಅನುಭವಿ ಆಟಗಾರರಲ್ಲಿ ಪಾಂಡ್ಯ ಕೂಡ ಒಬ್ಬರಾಗಿದ್ದಾರೆ. ಟೀಮ್ ಇಂಡಿಯಾದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಪಾಂಡ್ಯ, ಅದ್ಭುತ ಯುವ ಕ್ರಿಕೆಟಿಗರನ್ನು ಎತ್ತೇಚ್ಚವಾಗಿ ಹೊಂದಿರುವುದರಿಂದ ರಾಷ್ಟ್ರೀಯ ತಂಡವು ಈಗ ಗಳಿಸಿರುವ ಹೆಸರನ್ನು ಎಂದಿಗೂ ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಆಯ್ಕೆದಾರರು ಇನ್ನೂ ಎರಡು ತಂಡಗಳನ್ನು ಆಯ್ಕೆ ಮಾಡಬಹುದು ವಿಶ್ವದ ಯಾವುದೇ ಪಂದ್ಯಾವಳಿಯನ್ನು ಗೆಲ್ಲಬಲ್ಲ ಎರಡು ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ತಂಡಗಳನ್ನು ಆಯ್ಕೆದಾರರು ಆಯ್ಕೆ ಮಾಡಬಹುದು ಎಂದು ಬರೋಡಾ ಕ್ರಿಕೆಟಿಗ ಹೇಳಿಕೊಂಡಿದ್ದಾರೆ. ಆದರೆ, ಶ್ರೀಲಂಕಾ ಪ್ರವಾಸವು ಇಲ್ಲಿಯವರೆಗೆ ಹಾರ್ದಿಕ್‌ಗೆ ಲಾಭ ತಂದುಕೊಟ್ಟಿಲ್ಲ. ಇದೀಗ ಭಾರತ ತಂಡವು ಹೊಂದಿರುವ ಯುವ ಪ್ರತಿಭೆಗಳನ್ನು ಗಮನಿಸಿದರೆ, ನಾವು ಇನ್ನೂ ಎರಡು ತಂಡಗಳನ್ನು ಆಯ್ಕೆ ಮಾಡಬಹುದಾಗಿದೆ. ಜೊತೆಗೆ ವಿಶ್ವದ ಯಾವುದೇ ಮೂಲೆಯಲ್ಲಿ ನಡೆಯುವ ಸ್ಪರ್ಧೆಯನ್ನು ಗೆಲ್ಲುವ ಸಾಮಥ್ಯ್ರವನ್ನು ಹೊಂದಿದೆ ಎಂದಿದ್ದಾರೆ.

ಇದು ಬಿ ತಂಡ ಎಂದಿದ್ದ ರಣತುಂಗ ಶಿಖರ್ ಧವನ್ ಅವರ ನೇತೃತ್ವದಲ್ಲಿ ಯುವಜನರ ಮೆಚ್ಚುಗೆ ಪಡೆದ ಭಾರತೀಯ ತಂಡ ಶ್ರೀಲಂಕಾ ತಲುಪಿದಾಗ, ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ಮಾತನಾಡಿ, ಸೀಮಿತ ಓವರ್‌ಗಳ ಸರಣಿಗೆ ಎರಡನೇ ದರ್ಜೆಯ ಭಾರತೀಯ ತಂಡವನ್ನು ಆತಿಥ್ಯ ವಹಿಸುವುದು ನಮಗೆ ಅವಮಾನ ಮಾಡಿದಂತೆ ಎಂದಿದ್ದರು. ಇದಾದ ನಂತರ ಅದೇ ತಂಡ ಏಕದಿನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಜಯಭೇರಿ ಸಾಧಿಸಿತ್ತು.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ