ಸಹ ಆಟಗಾರರು ನನ್ನನ್ನು ಹಸು ಸಗಣಿ ಎಂದು ಕರೆಯುತ್ತಿದ್ದರು; ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನ ಗಂಭೀರ ಆರೋಪ

ನನ್ನ ಬೌಲಿಂಗ್ ಶೈಲಿಯನ್ನು ಕಾರುಗಳ ಟೈರ್‌ಗಳ ಕವರ್ ಕದಿಯುವಂತಿದೆ ಎಂದು ಟೀಕಿಸಿದ್ದರು. ಇದರಿಂದ ನಾನು ಸಾಕಷ್ಟು ಅವಮಾನಿತನಾಗಿದ್ದೆ. ನಾನು ಕೇಪ್ ಫ್ಲಾಟ್‌ಗಳಲ್ಲಿ ಜನಿಸಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು?

ಸಹ ಆಟಗಾರರು ನನ್ನನ್ನು ಹಸು ಸಗಣಿ ಎಂದು ಕರೆಯುತ್ತಿದ್ದರು; ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗನ ಗಂಭೀರ ಆರೋಪ
ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್
Follow us
TV9 Web
| Updated By: ಪೃಥ್ವಿಶಂಕರ

Updated on: Jul 24, 2021 | 3:50 PM

ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್ ಅವರು ಆಡುವ ದಿನಗಳಲ್ಲಿ ಚರ್ಮದ ಬಣ್ಣವನ್ನು ಆಧರಿಸಿ ಎದುರಿಸಿದ ತಾರತಮ್ಯದ ಬಗ್ಗೆ ತೆರೆದಿಟ್ಟಿದ್ದಾರೆ. ತನ್ನ ಸಹ ಆಟಗಾರರು ನನ್ನನ್ನು ಬ್ರೌನ್ ಶಿಟ್ (ಸಗಣಿ) ಎಂದು ಕರೆದಿದ್ದರು ಎಂದು ಆರೋಪಿಸಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾದ ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ಕಟ್ಟಡಕ್ಕೆ ಸಂಬಂಧಿಸಿದ ವಿಚಾರಣೆಯ ಸಮಯದಲ್ಲಿ ಮಾತನಾಡಿದ ಪಾಲ್ ಆಡಮ್ಸ್, ಎಲ್ಲಾ ಜನಾಂಗದ ಜನರಿಗೆ ಗೌರವವನ್ನು ಪಡೆಯಲು ಉತ್ತಮ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು. ಆಡಮ್ಸ್ 1995 ರಲ್ಲಿ ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ ಅವರು ತಮ್ಮ ತಂಡದ ಏಕೈಕ ಕಪ್ಪು ಆಟಗಾರರಾಗಿದ್ದರು. ಆಫ್ರಿಕಾ ತಂಡಕ್ಕೆ ಒಂಬತ್ತು ವರ್ಷಗಳ ಕಾಲ ಆಡಿದ ಆಡಮ್ಸ್ ಆ ಸಮಯದಲ್ಲಿ ಆಫ್ರಿಕಾ ತಂಡದ ಏಕೈಕ ಕಪ್ಪು ಆಟಗಾರರಾಗಿದ್ದರು. ಈ ಅನುಭವಕ್ಕೆ ಸಂಬಂಧಿಸಿದಂತೆ, ಅವರು ತಂಡದ ಒಳಗೆ ಮತ್ತು ಹೊರಗೆ ಜನಾಂಗೀಯ ಟೀಕೆಗಳನ್ನು ಎದುರಿಸಿದ ಬಗ್ಗೆ ಹೇಳಿಕೆ ನೀಡಿದ್ದಾರೆ.

ನನ್ನನ್ನು ಹಸು ಸಗಣಿ ಎಂದು ಕರೆಯಲಾಗುತ್ತಿತ್ತು ನಾನು ಆಡುವಾಗ ನನ್ನನ್ನು ಹಸು ಸಗಣಿ ಎಂದು ಕರೆಯಲಾಗುತ್ತಿತ್ತು. ಆಗಾಗ್ಗೆ ನಾವು ಪಂದ್ಯಗಳನ್ನು ಗೆದ್ದಾಗ ಅಥವಾ ಸಭೆಗಳಲ್ಲಿದ್ದಾಗ, ಅದಕ್ಕೆ ಸಂಬಂಧಿಸಿದ ಹಾಡನ್ನು ಹಾಡಲಾಗುತ್ತಿತ್ತು. ಸಹ ಆಟಗಾರರು ‘ಬ್ರೌನ್ ರು *** ರಿಂಗ್, ಟ್ರಾ ಲಾ ಲಾ ಲಾ ಲಾ ಎಂದು ಹಾಡುತ್ತಿದ್ದರು. ಆಗ ನನ್ನ ಗೆಳತಿ ನನ್ನನ್ನು, ಅವರು ಯಾಕೆ ಹೀಗೆ ಕರೆಯುತ್ತಾರೆ ಎಂದು ಕೇಳಿದರು. ಜೊತೆಗೆ ಅವರು ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ನೀವು ದೇಶಕ್ಕಾಗಿ ಆಡುವಾಗ, ನೀವು ಗೆದ್ದಾಗ, ನೀವು ಹೆಚ್ಚು ಯೋಚಿಸುವುದಿಲ್ಲ. ನೀವು ಈ ಎಲ್ಲ ಸಂಗತಿಗಳನ್ನು ಬದಿಗಿಟ್ಟಿದ್ದೀರಿ ಆದರೆ ಅದು ಸಂಪೂರ್ಣವಾಗಿ ವರ್ಣಭೇದ ನೀತಿಯಾಗಿದೆ. ಇದೆಲ್ಲವೂ ಉದ್ದೇಶಪೂರ್ವಕವಾಗಿ ನಡೆದಿರುವುದು. ಈ ಬಗ್ಗೆ ಅವರಿಗೆ ಕೇಳಿದರೆ ಅವರು ಇದರ ಬಗ್ಗೆ ತಿಳಿದಿರಲಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನಾವು ಇಂತಹ ಆಲೋಚನೆಗಳನ್ನು ಬದಲಿಸಬೇಕು ಎಂದಿದ್ದರು.

ಬೌಲಿಂಗ್ ಶೈಲಿ ಕಾರಿನ ಟೈರ್ ಕವರ್‌ಗಳನ್ನು ಕದಿಯುವಂತಿದೆ ಎಂದು ಹೇಳಲಾಗಿತ್ತು ಮುಂದುವರದು ಮಾತನಾಡಿದ ಆಡಮ್ಸ್, ನನ್ನ ಬೌಲಿಂಗ್ ಶೈಲಿಯನ್ನು ಕಾರುಗಳ ಟೈರ್‌ಗಳ ಕವರ್ ಕದಿಯುವಂತಿದೆ ಎಂದು ಟೀಕಿಸಿದ್ದರು. ಇದರಿಂದ ನಾನು ಸಾಕಷ್ಟು ಅವಮಾನಿತನಾಗಿದ್ದೆ. ನಾನು ಕೇಪ್ ಫ್ಲಾಟ್‌ಗಳಲ್ಲಿ ಜನಿಸಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು? ಅಲ್ಲಿ ಜನಿಸಿದ ಜನರನ್ನು ಯಾವಾಗಲೂ ದರೋಡೆಕೋರರು ಮತ್ತು ಕಳ್ಳರು ಎಂದು ಕರೆಯುತ್ತಿದ್ದರು? ಅದರೆ ನಾನು ಆಟವಾಡಲು ಪ್ರಾರಂಭಿಸಿದಾಗ ನಾನು ಇದಕ್ಕೆ ವಿಭಿನ್ನವಾಗಿದ್ದೆ. ನನ್ನ ಬೌಲಿಂಗ್ ಶೈಲಿ ಸಾಮಾನ್ಯಕ್ಕಿಂತ ಭಿನ್ನವಾಗಿತ್ತು, ಮತ್ತು ಮಾತನಾಡುವ ಶೈಲಿಯೂ ವಿಭಿನ್ನವಾಗಿತ್ತು. ಪ್ಯಾಟ್ ಸಿಮ್ಕಾಕ್ಸ್ ಅವರು ಬಿಳಿಯಾಗಿರುವುದರಿಂದ ಅವರಿಗೆ ಹೆಚ್ಚು ಆಡಲು ಅವಕಾಶ ಸಿಕ್ಕಿತು ಎಂದು ಪಾಲ್ ಆಡಮ್ಸ್ ಹೇಳಿದ್ದಾರೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ