AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Howzzat: ಡಿಜಿಟಲ್ ಮಾಧ್ಯಮದಲ್ಲಿ ಹೊಸ ಪ್ರಯೋಗ: ಟಿವಿ9 ಕನ್ನಡ ಹೌಜಾಟ್! ಮೈದಾನದಲ್ಲಿ ಟಿ-20 ಪಂದ್ಯ ನಡೆಯುವಾಗ ನಮ್ಮ ಜೊತೆ ಮಾತಾಡಿ

IND vs SL | ಹೌಜಾಟ್: ರವಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವ ಭಾರತ-ಶ್ರೀಲಂಕಾ ಪಂದ್ಯವನ್ನು ಹೊಸ ರೀತಿಯಲ್ಲಿ ನೋಡೋಣ. ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸುತ್ತಿದೆ.

Howzzat: ಡಿಜಿಟಲ್ ಮಾಧ್ಯಮದಲ್ಲಿ ಹೊಸ ಪ್ರಯೋಗ: ಟಿವಿ9 ಕನ್ನಡ ಹೌಜಾಟ್! ಮೈದಾನದಲ್ಲಿ ಟಿ-20 ಪಂದ್ಯ ನಡೆಯುವಾಗ ನಮ್ಮ ಜೊತೆ ಮಾತಾಡಿ
ಟಿವಿ9 ಕನ್ನಡ ಹೌಜಾಟ್
TV9 Web
| Updated By: Digi Tech Desk|

Updated on:Jul 24, 2021 | 11:38 AM

Share

ಬೆಂಗಳೂರು: ಕ್ರಿಕೆಟ್ ಹುಚ್ಚು ಯಾರಿಗಿಲ್ಲ ಹೇಳಿ? ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ, ನಾವು ನಾಯಕ ಏನು ಮಾಡಬೇಕು? ಆತ ಎಲ್ಲಿ ತಪ್ಪಿದ ಎಂದು ಹೇಳುತ್ತಲೇ ಇರುತ್ತೇವೆ. ಆದರೆ ಈಗ ಹಾಗಿಲ್ಲ. ನಿಮ್ಮ ಮಾತನ್ನು ಕೇಳಲು ನಾವು ಬರುತ್ತಿದ್ದೇವೆ. ರವಿವಾರದಂದು ಪ್ರಾರಂಭವಾಗುವ ಭಾರತ-ಶ್ರೀಲಂಕಾ ಟಿ-20 ಸರಣಿಯ ಪಂದ್ಯಗಳಲ್ಲಿ ನೀವು ಸುಮ್ಮನೆ ಕುಳಿತುಕೊಳ್ಳಬೇಕಾಗಿಲ್ಲ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ಇಲ್ಲಿದೆ.

ರವಿವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವ ಭಾರತ-ಶ್ರೀಲಂಕಾ ಪಂದ್ಯವನ್ನು ಹೊಸ ರೀತಿಯಲ್ಲಿ ನೋಡೋಣ. ಟಿವಿ9 ಕನ್ನಡ ಡಿಜಿಟಲ್ ಹೌಜಾಟ್! ಎಂಬ ಕಾರ್ಯಕ್ರಮ ಪ್ರಾರಂಭಿಸುತ್ತಿದೆ. ಇದು ಡಿಜಿಟಲ್ ಮಾಧ್ಯಮದಲ್ಲಿಯೇ ಒಂದು ಹೊಸ ಪ್ರಯೋಗ. ಮೊಟ್ಟಮೊದಲ ಲೈವ್ ಮತ್ತು ಸಂವಾದನಾತ್ಮಕ ಕ್ರಿಕೆಟ್ ಕಾರ್ಯಕ್ರಮವಾಗಿದೆ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಆಟಗಾರರು ಮತ್ತು ವೀಕ್ಷಕ ವಿವರಣೆಕಾರರೊಂದಿಗೆ ಸಂವಹನ ನಡೆಸಲು ಒಂದು ಸುವರ್ಣ ಅವಕಾಶವಿದೆ.

ಮೈದಾನದಲ್ಲಿ ಟಿ-20 ಪಂದ್ಯ ನಡೆಯುತ್ತಿರುವಾಗ, ಟಿವಿ9 ಡಿಜಿಟಲ್​ಗೆ ಫೋನ್ ಮಾಡಿ ಪಂದ್ಯದ ಬಗ್ಗೆ ನಿಮ್ಮ ಟಿಪ್ಪಣಿ ನೀಡಬಹುದು. ನಾಳೆ ಸಂಜೆ 7 ಗಂಟೆಗೆ ಮಾಜಿ ಟೆಸ್ಟ್ ಕ್ರಿಕೆಟಿಗ ದೊಡ್ಡ ಗಣೇಶ್ ಮತ್ತು ಜನಪ್ರಿಯ ಕನ್ನಡ ವೀಕ್ಷಕ ವಿವರಣೆಕಾರ ನವೀನ್ ಶೌರಿ ಮತ್ತು ನಮ್ಮ ಆ್ಯಂಕರ್ ಅವಿನಾಶ್ ಜೊತೆ ನೀವು ಮಾತಾಡಬಹುದು. ಈ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ.

ಇದನ್ನೂ ಓದಿ

Howzzat! ಕ್ರಿಕೆಟ್​ ಕುರಿತಾದ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೇ? ಹಾಗಿದ್ರೆ ಟಿವಿ9 ನೀಡುತ್ತಿದೆ ಸುವರ್ಣಾವಕಾಶ

IND vs ENG: ಮೂವರು ಹೊಸ ಆಟಗಾರರನ್ನು ಇಂಗ್ಲೆಂಡ್​ಗೆ ಕರೆಸುತ್ತಿರುವ ವಿರಾಟ್ ಕೊಹ್ಲಿ: ಆಂಗ್ಲರನ್ನು ಬಗ್ಗುಬಡಿಲು ಮಾಸ್ಟರ್ ಪ್ಲಾನ್

(IND vs SL T20 TV9 Kannada Digital presenting Howzzat to participate in Live commentary and discussion on)

Published On - 10:58 am, Sat, 24 July 21

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ