AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಮೂವರು ಹೊಸ ಆಟಗಾರರನ್ನು ಇಂಗ್ಲೆಂಡ್​ಗೆ ಕರೆಸುತ್ತಿರುವ ವಿರಾಟ್ ಕೊಹ್ಲಿ: ಆಂಗ್ಲರನ್ನು ಬಗ್ಗುಬಡಿಯಲು ಮಾಸ್ಟರ್ ಪ್ಲಾನ್

ಗಾಯಕ್ಕೆ ತುತ್ತಾಗಿ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದಿರುವ ಮೂವರು ಆಟಗಾರ ಬದಲಿಗೆ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಮತ್ತು ಜಯಂತ್ ಯಾದವ್​ರನ್ನು ಬದಲಿ ಆಟಗಾರರಾಗಿ ಬಿಸಿಸಿಐ ಆಯ್ಕೆ ಮಾಡುವತ್ತ ಚಿತ್ತ ನೆಟ್ಟಿದೆ ಎನ್ನಲಾಗಿದೆ.

IND vs ENG: ಮೂವರು ಹೊಸ ಆಟಗಾರರನ್ನು ಇಂಗ್ಲೆಂಡ್​ಗೆ ಕರೆಸುತ್ತಿರುವ ವಿರಾಟ್ ಕೊಹ್ಲಿ: ಆಂಗ್ಲರನ್ನು ಬಗ್ಗುಬಡಿಯಲು ಮಾಸ್ಟರ್ ಪ್ಲಾನ್
Virat Kohli
TV9 Web
| Edited By: |

Updated on:Jul 24, 2021 | 2:44 PM

Share

ಸಾಕಷ್ಟು ಕುತೂಹಲ ಕೆರಳಿಸಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಟೆಸ್ಟ್​ ಸರಣಿ ಆಗಸ್ಟ್ 4ರಂದು ಶುರುವಾಗಲಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಕ್ಕೆ (Team India) ದೊಡ್ಡ ಹೊಡೆತ ಬಿದ್ದಿತು. ಮೊದಲನೆಯದಾಗಿ ಶುಭ್ಮನ್ ಗಿಲ್ ಇಂಜುರಿಗೆ ತುತ್ತಾಗಿ ಸರಣಿಯಿಂದಲೇ ಹೊರಬಿದ್ದರೆ, ವಾಷಿಂಗ್ಟನ್ ಸುಂದರ್ ಹಾಗೂ ಆವೇಶ್ ಖಾನ್ ಕೂಡ ಗಾಯ ಮಾಡಿಕೊಂಡ ಪರಿಣಾಮ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಮೂವರು ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವ ಭಾರತಕ್ಕೆ ತಲೆನೋವು ಶುರುವಾಗಿದೆ.

ಹೀಗಿರುವಾಗ ಮೂಲಗಳಿಂದ ಮಾಹಿತಿಯೊಂದು ಹೊರಬಿದ್ದಿದ್ದು, ಗಾಯಕ್ಕೆ ತುತ್ತಾಗಿ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದಿರುವ ಮೂವರು ಆಟಗಾರ ಬದಲಿಗೆ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಮತ್ತು ಜಯಂತ್ ಯಾದವ್​ರನ್ನು ಬದಲಿ ಆಟಗಾರರಾಗಿ ಬಿಸಿಸಿಐ ಆಯ್ಕೆ ಮಾಡುವತ್ತ ಚಿತ್ತ ನೆಟ್ಟಿದೆ ಎನ್ನಲಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಬಿಸಿಸಿಐ ಜೊತೆ ಮಾತುಕತೆಯಲ್ಲಿದ್ದಾರಂತೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ವೇಳೆ ಶುಭ್ಮನ್ ಗಿಲ್ ಇಂಜುರಿಗೆ ತುತ್ತಾಗಿದ್ದರು. ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಅವೇಶ್ ಖಾನ್ ಕಂಟ್ರಿ ಇಲೆವೆನ್ ತಂಡದ ಪರ ಅಭ್ಯಾಸ ಪಂದ್ಯದಲ್ಲಿ ಅಡುವ ವೇಳೆ ಕೈ ಬೆರಳಿನ ಗಾಯವಾಗಿತ್ತು. ಅದರಲ್ಲೂ ಆವೇಶ್ ಖಾನ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮೂಲಕ ಭಾರತದ 3 ಮಂದಿ ಆಟಗಾರರು ಸರಣಿಯ ಆರಂಭಕ್ಕೂ ಮೊದಲೇ ತಂಡದಿಂದ ಹೊರ ಬಿದ್ದಂತಾಗಿದೆ. ಕೊಹ್ಲಿ ಅವರು ಶುಭ್ಮನ್ ಗಿಲ್ ಅವರ ಜಾಗಕ್ಕೆ ಬದಲಿ ಆಟಗಾರನನ್ನು ಇಂಗ್ಲೆಂಡ್​ಗೆ ಕಳುಹಿಸುವಂತೆ ಕೋರಿದ್ದರು. ಆದರೆ, ಬಿಸಿಸಿಐ ಈ ಬಗ್ಗೆ ಒಲವು ತೋರಲಿಲ್ಲ. ಸದ್ಯ ಮೂವರು ಆಟಗಾರರು ತಂಡದಿಂದ ಹೊರಬಿದ್ದ ಪರಿಣಾಮ ಪೃಥ್ವಿ ಶಾ, ಸೂರ್ಯಕುಮಾರ್ ಮತ್ತು ಜಯಂತ್ ಯಾದವ್​ರನ್ನು ಇಂಗ್ಲೆಂಡ್​ ಸರಣಿಗೆ ಆಯ್ಕೆ ಮಾಡುವ ಅಂದಾಜಿದೆ.

ಶಾ ಹಾಗೂ ಸೂರ್ಯಕುಮಾರ್ ಸದ್ಯ ಶ್ರೀಲಂಕಾದಲ್ಲಿದ್ದಾರೆ. ಏಕದಿನ ಸರಣಿ ಮುಕ್ತಾಯಗೊಂಡಿದ್ದು ಟಿ-20 ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಇತ್ತ ಜಯಂತ್ ಯಾದವ್ ಭಾರತದಲ್ಲಿದ್ದಾರೆ. ಸೂರ್ಯಕುಮಾರ್ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದ್ದರು.

ಟೀಮ್ ಇಂಡಿಯಾದ ಉಪ ನಾಯಕ ಅಜಿಂಕ್ಯಾ ರಹಾನೆ ಕೂಡ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಮೊದಲ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಅನುಮಾನ. ಇವರ ಜಾಗದಲ್ಲಿ ಸೂರ್ಯಕುಮಾರ್ ಆಡುವ ಸಾಧ್ಯತೆ ಇದೆ. ಒಪನರ್ ಆಗಿ ರೋಹಿತ್ ಶರ್ಮಾ ಜೊತೆ ಮಯಾಂಕ್ ಅಗರ್ವಾಲ್ ಅಥವಾ ಪೃಥ್ವಿ ಶಾ ಆಡಿಸಬಹುದು ಎಂದು ಹೇಳಲಾಗಿದೆ.

IND vs SL: ಲಂಕಾ ನಾಯಕನಿಗೂ ಕ್ರಿಕೆಟ್ ಟಿಪ್ಸ್ ನೀಡಿವ ದ್ರಾವಿಡ್: ಕನ್ನಡಿಗನ ನಡೆಗೆ ನೆಟ್ಟಿಗರ ಸಲಾಂ

Tokyo Olympics 2020: ಹಾಕಿಯಲ್ಲಿ ಭಾರತ ಶುಭಾರಂಭ: ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ

(Prithvi Shaw Suryakumar Yadav Jayanth Yadav likely to join Indian team in England)

Published On - 10:02 am, Sat, 24 July 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?