IND vs SL: ಲಂಕಾ ನಾಯಕನಿಗೂ ಕ್ರಿಕೆಟ್ ಟಿಪ್ಸ್ ನೀಡಿವ ದ್ರಾವಿಡ್: ಕನ್ನಡಿಗನ ನಡೆಗೆ ನೆಟ್ಟಿಗರ ಸಲಾಂ

ಯುವ ಆಟಗಾರರಿಗೆ ಸದಾ ಸ್ಪೂರ್ತಿಯಾಗುವ ದ್ರಾವಿಡ್ ಕೇವಲ ಭಾರತೀಯ ಆಟಗಾರರಿಗೆ ಮಾತ್ರವಲ್ಲದೆ ಎದುರಾಳಿ ತಂಡಕ್ಕು ಗುರು ಆಗಿದ್ದಾರೆ.

IND vs SL: ಲಂಕಾ ನಾಯಕನಿಗೂ ಕ್ರಿಕೆಟ್ ಟಿಪ್ಸ್ ನೀಡಿವ ದ್ರಾವಿಡ್: ಕನ್ನಡಿಗನ ನಡೆಗೆ ನೆಟ್ಟಿಗರ ಸಲಾಂ
India vs Sri lanka
Follow us
TV9 Web
| Updated By: Vinay Bhat

Updated on: Jul 24, 2021 | 8:04 AM

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅಂತಿಮ ಮೂರನೇ ಏಕದಿನ (3rd ODI) ಪಂದ್ಯದಲ್ಲಿ ಶ್ರೀಲಂಕಾ (Sri lanka) ತಂಡ 3 ವಿಕಟ್​ಗಳ ಜಯ ಸಾಧಿಸಿ ಮಾನ ಉಳಿದಿಕೊಂಡಿತು. ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲುಂಡಿತಾದರೂ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ರಾಹುಲ್ ದ್ರಾವಿಡ್ (Rahul Dravid) ಅವರು ಮುಖ್ಯ ಕೋಚ್ ಆಗಿ ಮತ್ತು ಶಿಖರ್ ಧವನ್ ಅವರು ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಭಾರತ ತಂಡ ಸರಣಿ ಗೆಲುವಿನಲ್ಲಿ ಕೋಚ್ ದ್ರಾವಿಡ್ ಪಾತ್ರ ಮಹತ್ವದ್ದು ಎನ್ನಬಹುದು. ಇದಕ್ಕೆ ಎರಡನೇ ಏಕದಿನ ಪಂದ್ಯವೇ ಉದಾಹರಣೆ.

ಎರಡನೇ ಏಕದಿನ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಭಾರತವನ್ನು ಗೆಲುವಿನ ದಡ ಸೇರಿಸಲು ಕಾರಣವಾಗಿದ್ದು ದ್ರಾವಿಡ್ ಅವರ ಆ ಒಂದು ನಿರ್ಧಾರ ಎಂಬುದು ತಿಳಿದಿದೆ. ಭಾರತ 7 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾಗ ದ್ರಾವಿಡ್ ಮಹತ್ವದ ಬದಲಾವಣೆ ಮಾಡಿದ್ದರು.

ಭುವಿ ಬದಲಿಗೆ ದೀಪಕ್ ಚಹರ್ ಅವರನ್ನು ಬ್ಯಾಟಿಂಗ್​ಗೆ ಇಳಿಸಿದ್ದರು. ಕ್ರೀಸ್​ಗೆ ಇಳಿಯುವ ಮುನ್ನ ಡ್ರೆಸಿಂಗ್ ರೂಮ್​ನಲ್ಲಿ ದೀಪಕ್ ಚಹರ್ ಜೊತೆ ಮಾತನಾಡಿದ್ದ ದ್ರಾವಿಡ್, ಎಲ್ಲಾ ಬಾಲ್​ಗಳನ್ನು ಆಡಲು ತಿಳಿಸಿದ್ದರು. ದ್ರಾವಿಡ್ ಸೂಚನೆಯಂತೆ ಬ್ಯಾಟಿಂಗ್ ಮಾಡಿದ ದೀಪಕ್ ಚಹರ್ ಕೊನೆಯವರೆಗೆ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಯುವ ಆಟಗಾರರಿಗೆ ಸದಾ ಸ್ಪೂರ್ತಿಯಾಗುವ ದ್ರಾವಿಡ್ ಕೇವಲ ಭಾರತೀಯ ಆಟಗಾರರಿಗೆ ಮಾತ್ರವಲ್ಲದೆ ಎದುರಾಳಿ ತಂಡಕ್ಕು ಗುರು ಆಗಿದ್ದಾರೆ. ಶುಕ್ರವಾರದ ಅಂತಿಮ ಏಕದಿನದಲ್ಲಿ ಟಾಸ್ ಗೆದ್ದು ಭಾರತ ಬ್ಯಾಟಿಂಗ್ ನಡೆಸುತ್ತಿರುವ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.

ಸ್ವಲ್ಪ ಸಮಯದ ನಂತರ ಮಳೆ ನಿಂತಾಗ ಗ್ರೌಂಡ್​ನಲ್ಲಿ ನೀರನ್ನು ತೆಗೆಯುವ ಕಾರ್ಯ ಆರಂಭಿಸಿದರು. ಈ ಸಂದರ್ಭ ದ್ರಾವಿಡ್ ಹಾಗೂ ಶ್ರೀಲಂಕಾದ ಯುವ ನಾಯಕ ದಾಸುನ್ ಸನಕಾ ಮೈದಾನದಲ್ಲಿ ಕೆಲಹೊತ್ತು ಮಾತುಕತೆ ನಡೆಸುತ್ತಿರುವುದು ಕಂಡುಬಂತು. ದಾಸುನ್ ಅವರಿಗೆ ದ್ರಾವಿಡ್ ಅವರು ಕೆಲವೊಂದು ಕ್ರಿಕೆಟ್ ಟಿಪ್ಸ್ ನೀಡಿದರು. ಇದನ್ನ ಕಂಡ ನೆಟ್ಟಿಗರು ಕನ್ನಡಿಗನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು 47 ಓವರ್​​ಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 43.1 ಓವರ್​ನಲ್ಲಿ 225 ರನ್​ಗೆ ಆಲೌಟ್ ಆಯಿತು. ಪೃಥ್ವಿ ಶಾ 49 ರನ್, ಸಂಜು ಸ್ಯಾಮ್ಸನ್ 46 ಹಾಗೂ ಸೂರ್ಯಕುಮಾರ್ 40 ರನ್ ಗಳಿಸಿದರು. ಲಂಕಾ ಪರ ಧವನಂಜಯ ಹಾಗೂ ಜಯವಿಕ್ರಮ ತಲಾ 3 ವಿಕೆಟ್ ಕಿತ್ತರು.

ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಆವಿಶ್ಕಾ ಫೆರ್ನಾಡೊ ಅವರ 76 ಹಾಗೂ ಭನುಕಾ ರಾಜಪಲಕ್ಷ ಅವರ 65 ರನ್​ಗಳ ನೆರವಿನಿಂದ 39 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 227 ರನ್ ಬಾರಿಸಿ 3 ವಿಕೆಟ್​ಗಳಿಂದ ಗೆದ್ದು ಬೀಗಿತು. ಭಾರತ ಪರ ರಾಹುಲ್ ಚಹಾರ್ 3 ವಿಕೆಟ್ ಪಡೆದರು.

India vs Sri Lanka 3rd ODI: ಟೀಂ ಇಂಡಿಯಾ ವಿರುದ್ಧ ಸುಲಭ ಗೆಲುವು ದಾಖಲಿಸಿದ ಶ್ರೀಲಂಕಾ

Tokyo Olympics 2020: ಆರ್ಚರಿ ಮಿಶ್ರ ಡಬಲ್ಸ್​ನಲ್ಲಿ ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟ ಭಾರತದ ದೀಪಿಕಾ-ಪ್ರವೀಣ್

(India vs Sri lanka Rahul Dravid was seen talking to Sri Lanka captain Dasun Shanaka during rain break)

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ