India vs Sri Lanka 3rd ODI: 3ನೇ ಅಂಪೈರ್ ತೀರ್ಪುಗೂ ಮುನ್ನ ಸಂಭ್ರಮಿಸಿ ಅಪಹಾಸ್ಯಕ್ಕೀಡಾದ ಶ್ರೀಲಂಕಾ ಆಟಗಾರರು..!
India vs Sri Lanka 3rd ODI: ಸ್ಟೇಡಿಯಂನಲ್ಲಿದ್ದ ಬಿಗ್ ಸ್ಕ್ರೀನ್ನಲ್ಲಿ ಬಾಲ್ ನೇರವಾಗಿ ಪ್ಯಾಡ್ಗೆ ಬಡಿಯುತ್ತಿರುವುದು ನೋಡಿ ಶ್ರೀಲಂಕಾ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಇತ್ತ ಮೂರನೇ ಅಂಪೈರ್ ತೀರ್ಪು ಬರುವ ಮೊದಲೇ ಸೂರ್ಯಕುಮಾರ್ ಕೂಡ ಮೈದಾನದಿಂದ ಪೆವಿಲಿಯನ್ನತ್ತ ಮುಖ ಮಾಡಿದರು. ಲಂಕಾ ಆಟಗಾರರ ಸಂಭ್ರಮ ನೋಡಿ ಹಾರ್ದಿಕ್ ಪಾಂಡ್ಯ ಕೂಡ ಪ್ಯಾಡ್ ಧರಿಸಿ ಮೈದಾನಕ್ಕಿಳಿದರು.
ಭಾರತ-ಶ್ರೀಲಂಕಾ ನಡುವಣ 3ನೇ ಏಕದಿನ ಪಂದ್ಯವು ಹಲವು ಕಾರಣಗಳಿಂದ ಕುತೂಹಲಕ್ಕೆ ಕಾರಣವಾಗಿತ್ತು. ಟಾಸ್ ಗೆದ್ದಾಗ ಶಿಖರ್ ಧವನ್ ಸಂಭ್ರಮಿಸಿದ್ದು, ಟೀಮ್ ಇಂಡಿಯಾ 6 ಬದಲಾವಣೆಯೊಂದಿಗೆ 5 ಹೊಸ ಮುಖಗಳಿಗೆ ಚಾನ್ಸ್ ನೀಡಿದ್ದು…ಹೀಗೆ ಆರಂಭದಿಂದಲೇ ನಾನಾ ಕಾರಣಗಳಿಂದ ಲಂಕಾ ವಿರುದ್ದದ ಅಂತಿಮ ಪಂದ್ಯವು ಗಮನ ಸೆಳೆದಿತ್ತು. ಹಾಗೆಯೇ ಟಾಸ್ ಗೆದ್ದು ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 118 ರನ್ಗಳಿಸಿದ್ದ ವೇಳೆ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ ಕಚ್ಚಿ ಆಡಿದ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು.
ಇತ್ತ ಸೂರ್ಯಕುಮಾರ್ ವಿಕೆಟ್ ಪಡೆಯುವಲ್ಲಿ ಹರಸಾಹಸ ಪಡುತ್ತಿದ್ದ ಲಂಕಾ ಬೌಲರುಗಳಿಗೆ 23ನೇ ಓವರ್ನಲ್ಲಿ ತುಸು ಸಮಾಧಾನ ಸಿಕ್ಕಿತ್ತು. ಪ್ರವೀಣ್ ಜಯವಿಕ್ರಮ ಎಸೆದ ಎಸೆತವು ಸೂರ್ಯಕುಮಾರ್ ಪ್ಯಾಡ್ಗೆ ತಾಗಿದೆ ಎಂದು ಲಂಕಾ ಆಟಗಾರರು ಎಲ್ಬಿಡಬ್ಲ್ಯೂಗೆ ಮನವಿ ಸಲ್ಲಿಸಿದರು. ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ತೀರ್ಪು ಪ್ರಶ್ನಿಸಿ ಸೂರ್ಯಕುಮಾರ್ 3ನೇ ಅಂಪೈರ್ಗೆ ಡಿಆರ್ಎಸ್ ಮನವಿ ಸಲ್ಲಿಸಿದರು. ಟಿವಿ ಅಂಪೈರ್ ಚೆಂಡು ಬ್ಯಾಟ್ಗೆ ತಗುಲಿದೆಯಾ ಎಂದು ಪರಿಶೀಲಿಸಿದಾಗ ಬಾಲ್ ನೇರವಾಗಿ ಹೋಗಿ ಕಾಲಿಗೆ ಪ್ಯಾಡ್ಗೆ ಬಡಿದಿರುವುದು ಸ್ಪಷ್ಟವಾಗಿತ್ತು.
ಸ್ಟೇಡಿಯಂನಲ್ಲಿದ್ದ ಬಿಗ್ ಸ್ಕ್ರೀನ್ನಲ್ಲಿ ಬಾಲ್ ನೇರವಾಗಿ ಪ್ಯಾಡ್ಗೆ ಬಡಿಯುತ್ತಿರುವುದು ನೋಡಿ ಶ್ರೀಲಂಕಾ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಇತ್ತ ಮೂರನೇ ಅಂಪೈರ್ ತೀರ್ಪು ಬರುವ ಮೊದಲೇ ಸೂರ್ಯಕುಮಾರ್ ಕೂಡ ಮೈದಾನದಿಂದ ಪೆವಿಲಿಯನ್ನತ್ತ ಮುಖ ಮಾಡಿದರು. ಲಂಕಾ ಆಟಗಾರರ ಸಂಭ್ರಮ ನೋಡಿ ಹಾರ್ದಿಕ್ ಪಾಂಡ್ಯ ಕೂಡ ಪ್ಯಾಡ್ ಧರಿಸಿ ಮೈದಾನಕ್ಕಿಳಿದರು. ಆದರೆ ಬಾಲ್ ಟ್ರ್ಯಾಕಿಂಗ್ನ್ನು ಹಲವು ಬಾರಿ ಪರಿಶೀಲಿಸಿದ ಮೂರನೇ ಅಂಪೈರ್ ನೌಟೌಟ್ ಎಂದು ತೀರ್ಪು ನೀಡಿದರು. ಏಕೆಂದರೆ ಚೆಂಡು ಆಫ್ ಸ್ಟಂಪ್ ಹೊರಗೆ ಬಿದ್ದಿತು. ಬಹುಶಃ ಶ್ರೀಲಂಕಾದ ಆಟಗಾರರಿಗೆ ಡಿಆರ್ಎಸ್ ನಿಯಮದ ಬಗ್ಗೆ ಸ್ಪಷ್ಟತೆ ಇದಿರಲಿಲ್ಲ. ಹೀಗಾಗಿಯೇ ಮೂರನೇ ಅಂಪೈರ್ ನಿರ್ಧಾರ ಬರುವ ಮೊದಲು ಅವರು ಸಂಭ್ರಮಿಸಿದರು.
#INDvSL pic.twitter.com/YGeK8CED0z
— The sports 360 (@Thesports3601) July 23, 2021
ಆದರೆ ಮೂರನೇ ಅಂಪೈರ್ ತೀರ್ಪು ಬಂದಾಗ ಶ್ರೀಲಂಕಾದ ಪ್ರತಿಯೊಬ್ಬ ಆಟಗಾರರು ದಿಗ್ಭ್ರಮೆಗೊಂಡರು. ಅಲ್ಲದೆ ಫೀಲ್ಡ್ ಅಂಪೈರ್ ಜೊತೆ ಯಾಕೆ ನಾಟೌಟ್ ನೀಡಿದ್ದಾರೆ ಎಂದು ಪ್ರಶ್ನಿಸಿ ಕಾರಣಗಳನ್ನು ತಿಳಿದುಕೊಂಡರು. ಮೊದಲೇ ಕಳಪೆ ಪ್ರದರ್ಶನದಿಂದ ಭಾರೀ ಟ್ರೋಲ್ಗೆ ಒಳಗಾಗಿದ್ದ ಶ್ರೀಲಂಕಾ ಆಟಗಾರರು ಇದೀಗ, ಮೂರನೇ ತೀರ್ಪಿಗೂ ಮುಂಚೆಯೇ ಸಂಭ್ರಮಿಸಿ ಅಪಹಾಸ್ಯಕ್ಕೀಡಾಗಿದ್ದಾರೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!
(India vs Sri Lanka 3rd ODI: Sri Lanka Players Celebrate Suryakumar Yadav’s Wicket Even After DRS Confirms)
Published On - 10:13 pm, Fri, 23 July 21