SL vs IND 3rd ODI: ಶ್ರೀಲಂಕಾ ಸ್ಪಿನ್ ಮೋಡಿ: ಸಾಧಾರಣ ಸವಾಲು ನೀಡಿದ ಟೀಮ್ ಇಂಡಿಯಾ
India vs Sri Lanka 3rd ODI : ಇನ್ನು ಪದಾರ್ಪಣೆ ಪಂದ್ಯದಲ್ಲಿ ಮಿಂಚುವಲ್ಲಿ ನಿತೀಶ್ ರಾಣಾ ಹಾಗೂ ಕೃಷ್ಣಪ್ಪ ಗೌತಮ್ ವಿಫಲರಾದರು. ರಾಣಾ 7 ರನ್ಗಳಿಸಿದರೆ, ಕೆ ಗೌತಮ್ 2 ರನ್ಗಳಿಸಿ ಧನಂಜಯಗೆ ವಿಕೆಟ್ ಒಪ್ಪಿಸಿದರು.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾಗೆ 226 ರನ್ಗಳ ಸಾಧಾರಣ ಸವಾಲು ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ದೊರೆತಿರಲಿಲ್ಲ. ನಾಯಕ ಶಿಖರ್ ಧವನ್ ಕೇವಲ 13 ರನ್ಗಳಿಸಿ ಮೊದಲಿಗರಾಗಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಪೃಥ್ವಿ ಶಾ ಹಾಗೂ ಸಂಜು ಸ್ಯಾಮ್ಸನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ಅದರಂತೆ ಲಂಕಾ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಪೃಥ್ವಿ 48 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 49 ರನ್ ಬಾರಿಸಿದರು. ಈ ಹಂತದಲ್ಲಿ ಶನಕ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪೃಥ್ವಿ ಎಲ್ಬಿಡಬ್ಲ್ಯೂ ಆಗಿ ಅರ್ಧಶತಕದಿಂದ ವಂಚಿತರಾದರು. ಇನ್ನು ಮತ್ತೊಂದೆಡೆ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟದೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಿದರು.
ಈ ವೇಳೆ ಜೊತೆಯಾದ ಸ್ಯಾಮ್ಸನ್-ಮನೀಶ್ ಪಾಂಡೆ ಉತ್ತಮ ಜೊತೆಯಾಟವಾಡಿದರು. ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದ ಈ ಜೋಡಿ ತಂಡದ ಮೊತ್ತವನ್ನು100ರ ಗಡಿ ದಾಟಿಸಿದರು. ಇದೇ ವೇಳೆ ಅರ್ಧಶತಕದ ತಲುಪಿದ್ದ ಸ್ಯಾಮ್ಸನ್ (46) ಜಯವಿಕ್ರಮ ಎಸೆತದಲ್ಲಿ ಅವಿಷ್ಕಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದರಿಂದ ಕೆಲ ಹೊತ್ತಿನವರೆಗೆ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಮೂರು ಓವರ್ಗಳ ಕಡಿತದೊಂದಿಗೆ ಪಂದ್ಯವನ್ನು ಪುನರಾರಂಭಿಸಲಾಗಿಯಿತು.
ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕನ್ನಡಿಗ ಮನೀಶ್ ಪಾಂಡೆ ಕೇವಲ 11 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಮ್ಮ ಫಾರ್ಮ್ ಪ್ರದರ್ಶಿಸಿದರು. ಅದರಂತೆ 37 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 40 ರನ್ ಬಾರಿಸಿದರು. ಇದೇ ವೇಳೆ ದಾಳಿಗಿಳಿದ ಧನಂಜಯ ಸೂರ್ಯಕುಮಾರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (19) ಕೂಡ ಜಯವಿಕ್ರಮನ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದರು.
ಇನ್ನು ಪದಾರ್ಪಣೆ ಪಂದ್ಯದಲ್ಲಿ ಮಿಂಚುವಲ್ಲಿ ನಿತೀಶ್ ರಾಣಾ ಹಾಗೂ ಕೃಷ್ಣಪ್ಪ ಗೌತಮ್ ವಿಫಲರಾದರು. ರಾಣಾ 7 ರನ್ಗಳಿಸಿದರೆ, ಕೆ ಗೌತಮ್ 2 ರನ್ಗಳಿಸಿ ಧನಂಜಯಗೆ ವಿಕೆಟ್ ಒಪ್ಪಿಸಿದರು. ಇನ್ನು ರಾಹುಲ್ ಚಹರ್ (13) ಹಾಗೂ ನವದೀಪ್ ಸೈನಿ (15) ಒಂದಷ್ಟು ಪ್ರತಿರೋಧ ತೋರಿದರೂ ಲಂಕಾ ಬೌಲರುಗಳ ಪರಾಕ್ರಮದ ಮುಂದೆ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ 43.1 ಓವರ್ನಲ್ಲಿ 225 ರನ್ಗಳಿಗೆ ಸರ್ವಪತನ ಕಂಡಿತು. ಶ್ರೀಲಂಕಾ ಪರ ಅಕಿಲ ಧನಂಜಯ ಹಾಗೂ ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಚಮೀರ 2 ವಿಕೆಟ್ ಉರುಳಿಸಿದರು.
ಉಭಯ ತಂಡಗಳು ಹೀಗಿವೆ (India vs Sri Lanka 3rd ODI Playing 11):-
ಶ್ರೀಲಂಕಾ (Sri Lanka Playing 11): ಶ್ರೀಲಂಕಾ (ಇಲೆವೆನ್ ಪ್ಲೇಯಿಂಗ್): ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಭನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶನಕಾ (ನಾಯಕ), ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ದಾನಂಜಯ, ಜಯವಿಕ್ರಮ
ಭಾರತ (Team India Playing 11): ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!
Published On - 8:31 pm, Fri, 23 July 21