ಬಿಎಸ್​ಪಿ ಅಧಿಕಾರಕ್ಕೆ ಬಂದರೆ ಶ್ರೀರಾಮ ಮಂದಿರವನ್ನು ತ್ವರಿತವಾಗಿ ನಿರ್ಮಾಣ ಮಾಡಲಾಗುವುದು; ಮಾಯಾವತಿ ಪಕ್ಷದಿಂದ ಮತ್ತೊಂದು ಭರವಸೆ

Ram Temple: ಬಿಎಸ್​ಪಿ ಹಿಂದುಳಿದ, ದಲಿತರ ಪಕ್ಷ ಎಂದೇ ಗುರುತಿಸಿಕೊಂಡಿದೆ. ಹಿಂದೊಮ್ಮೆ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಾಗಲೂ ಆ ಪಕ್ಷಕ್ಕೆ ಹಿಂದುಳಿದವರ ಮತವೇ ಜಾಸ್ತಿ ಬಿದ್ದಿತ್ತು. ಆದರೆ ಈಗ ಏಕಾಏಕಿ ಬ್ರಾಹ್ಮಣ ಸಮುದಾಯದ ಓಲೈಕೆ ಮಾಡುತ್ತಿದೆ.

ಬಿಎಸ್​ಪಿ ಅಧಿಕಾರಕ್ಕೆ ಬಂದರೆ ಶ್ರೀರಾಮ ಮಂದಿರವನ್ನು ತ್ವರಿತವಾಗಿ ನಿರ್ಮಾಣ ಮಾಡಲಾಗುವುದು; ಮಾಯಾವತಿ ಪಕ್ಷದಿಂದ ಮತ್ತೊಂದು ಭರವಸೆ
ಮಾಯಾವತಿ ಮತ್ತು ಸತೀಶ್​ ಚಂದ್ರ ಮಿಶ್ರಾ
Follow us
| Updated By: Lakshmi Hegde

Updated on:Jul 24, 2021 | 3:56 PM

ಬರುವ ವರ್ಷ ಉತ್ತರಪ್ರದೇಶ (Uttar Pradesh)ದ ಚುನಾವಣೆಗೆ ಬಹುಜನ ಸಮಾಜ ಪಾರ್ಟಿ (BSP) ಭರ್ಜರಿ ತಯಾರಿಯನ್ನೇ ನಡೆಸುತ್ತಿದೆ. ಈ ಬಾರಿ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಮುಂದಾಗಿರುವ ಪಕ್ಷ, ಅಯೋಧ್ಯೆ(Ayodhya)ಯಿಂದಲೇ ಚುನಾವಣಾ ಪ್ರಚಾರವನ್ನೂ ನಡೆಸಲು ನಿರ್ಧರಿಸಿದೆ. ಈ ಹಿಂದೆ ಮಾತನಾಡಿದ ಮಾಯಾವತಿ, ಮುಂದಿನ ವರ್ಷ ಚುನಾವಣೆಯಲ್ಲಿ ಬ್ರಾಹ್ಮಣರು ಯಾರೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ನಂಬಿಕೆ ನಮಗೆ ಇದೆ ಎಂದೂ ಹೇಳಿದ್ದಾರೆ. ಈಗ ಇನ್ನೊಂದು ಮಹತ್ವದ ಭರವಸೆಯವನ್ನು ಮಾಯಾವತಿ(Mayawati) ನೀಡಿದ್ದಾರೆ. ಇದೀಗ ಬಿಎಸ್​ಪಿ ಇನ್ನೊಂದು ಮಹತ್ವದ ಭರವಸೆ ನೀಡಿದೆ. ಒಂದೊಮ್ಮೆ ನಮ್ಮ ಪಕ್ಷ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ರಾಮಮಂದಿರ (Ram Temple) ನಿರ್ಮಾಣ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಲಾಗುವುದು ಎಂದೂ ಹೇಳಿದೆ.

ಬಿಎಸ್​ಪಿ ಹಿಂದುಳಿದ, ದಲಿತರ ಪಕ್ಷ ಎಂದೇ ಗುರುತಿಸಿಕೊಂಡಿದೆ. ಹಿಂದೊಮ್ಮೆ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಾಗಲೂ ಆ ಪಕ್ಷಕ್ಕೆ ಹಿಂದುಳಿದವರ ಮತವೇ ಜಾಸ್ತಿ ಬಿದ್ದಿತ್ತು. ಆದರೆ ಈಗ ಏಕಾಏಕಿ ಬ್ರಾಹ್ಮಣ ಸಮುದಾಯದ ಓಲೈಕೆ ಮಾಡುತ್ತಿದೆ. ಮುಖ್ಯಮಂತ್ರಿ ಯೋಗಿ ಬ್ರಾಹ್ಮಣರಿಗೆ ನೀಡಿರುವ ಭರವಸೆಯನ್ನು ಉಳಿಸಿಕೊಂಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆ ಸಮುದಾಯದ ಹಿತ ಕಾಯುತ್ತೇವೆ ಎಂಬಿತ್ಯಾದಿ ಭರವಸೆಗಳನ್ನೂ ಬಿಎಸ್​ಪಿ ನೀಡುತ್ತಿದೆ. ಬ್ರಾಹ್ಮಣರನ್ನು ಹೆಚ್ಚೆಚ್ಚು ತಲುಪುವ ದೃಷ್ಟಿಯಿಂದ, ಬಿಎಸ್​ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್​ ಚಂದ್ರ ಮಿಶ್ರಾ (ಇವರು ಬ್ರಾಹ್ಮಣ ಸಮುದಾಯದವರು) ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಹೊಸ ಕಾರ್ಯಕ್ರಮಗಳನ್ನೂ ಶುರು ಮಾಡಿದ್ದಾರೆ.

2020ರ ಆಗಸ್ಟ್​ 5ರಂದು ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ಭೂಮಿಪೂಜೆ ನೆರವೇರಿಸಿದ್ದಾರೆ. ಒಂದು ವರ್ಷವಾಗುತ್ತ ಬಂದರೂ ಇನ್ನೂ ಮಂದಿರಕ್ಕೆ ಅಡಿಪಾಯ ಹಾಕುವ ಕೆಲಸವೇ ಪೂರ್ತಿಯಾಗಿ ಮುಗಿದಿಲ್ಲ. ದೇಗುಲ ನಿರ್ಮಾಣ ಯಾವಾಗ ಮುಗಿಯುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಇನ್ನೂ ಎಷ್ಟು ವರ್ಷ ಬೇಕು ಎಂದು, ಸತೀಶ್​ ಚಂದ್ರ ಮಿಶ್ರಾ, ಅಯೋಧ್ಯೆಯಲ್ಲಿ ಬ್ರಾಹ್ಮಣ ಸಮುದಾಯವನ್ನುದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಗೆಲುವಿನ ಫಾರ್ಮುಲಾ ರಚಿಸುತ್ತಿರುವ ಬಿಎಸ್​ಪಿ 2007ರಂತೆ ಮತ್ತೆ ಅಧಿಕಾರ ಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಇದೇ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮನವೊಲಿಸುವ ಪ್ರಯತ್ನಗಳೂ ನಡೆಯುತ್ತಿವೆ. ಬ್ರಾಹ್ಮಣರೆಲ್ಲ ಒಗ್ಗಟ್ಟಾಗಿ ಬಿಎಸ್​ಪಿಗೆ ಮತಹಾಕಬೇಕು. ದಲಿತರು ಮತ್ತು ಬ್ರಾಹ್ಮಣರ ಮಧ್ಯೆ ಸಹೋದರತ್ವ ಸಂಬಂಧವಿದೆ. ಇವೆರಡೂ ಸೇರಿದರೆ ಖಂಡಿತ ಪಕ್ಷಕ್ಕೆ ಬಲ ಬಂದೇಬರುತ್ತದೆ ಎಂದೂ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: Wild Boar menace: ಕಾಡು ಹಂದಿ ಬೇಟೆಗೆ ಹೈಕೋರ್ಟ್ ಅನುಮತಿ; ಆದರೆ ವನ್ಯಜೀವಿ ಪ್ರಿಯರು ಎತ್ತಿದ್ದಾರೆ ಆಕ್ಷೇಪ!

Published On - 3:50 pm, Sat, 24 July 21