2024ರೊಳಗೆ ಭಾರತೀಯ ಬ್ರಾಡ್​ಗೇಜ್ ರೈಲ್ವೆ ಮಾರ್ಗವೆಲ್ಲವೂ ವಿದ್ಯುದೀಕರಣ; ಹೊಸ ಯೋಜನೆಗೆ 21,000 ಕೋಟಿ ರೂ. ವೆಚ್ಚ

Indian Railways | ಬಾಕಿ ಉಳಿದಿರುವ ರೈಲು ಮಾರ್ಗವನ್ನು ವಿದ್ಯುದೀಕರಣಗೊಳಿಸಲು ಸುಮಾರು 21,000 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಕೂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

2024ರೊಳಗೆ ಭಾರತೀಯ ಬ್ರಾಡ್​ಗೇಜ್ ರೈಲ್ವೆ ಮಾರ್ಗವೆಲ್ಲವೂ ವಿದ್ಯುದೀಕರಣ; ಹೊಸ ಯೋಜನೆಗೆ 21,000 ಕೋಟಿ ರೂ. ವೆಚ್ಚ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 24, 2021 | 6:05 PM

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ 2024ರ ವೇಳೆಗೆ ಎಲ್ಲ ಬ್ರಾಡ್​ಗೇಜ್ ರೈಲು ಮಾರ್ಗವನ್ನೂ ವಿದ್ಯುದೀಕರಣಗೊಳಿಸಲು ನಿರ್ಧರಿಸಿದೆ. ಇನ್ನು ಮೂರು ವರ್ಷದೊಳಗೆ 21,000 ಕೋಟಿ ರೂ. ವೆಚ್ಚದ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ (Indian Railway) ಸಚಿವ ಅಶ್ವಿನಿ ವೈಷ್ಣವ್ ಸಂಸತ್​​ನಲ್ಲಿ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ಅಶ್ವಿನಿ ವೈಷ್ಣವ್, ಏಪ್ರಿಲ್ 1ರ ವೇಳೆಗೆ ಭಾರತದ ರೈಲ್ವೆ ನೆಟ್​ವರ್ಕ್​ನ ವಿಸ್ತೀರ್ಣ 67,956 ರೂಟ್ ಕಿ.ಮೀ.ನಷ್ಟಿತ್ತು. ಮುಂದಿನ ದಿನಗಳಲ್ಲಿ 7.54 ಲಕ್ಷ ಕೋಟಿ ರೂ. ವೆಚ್ಚದಲ್ಲಿ 484 ರೈಲ್ವೆ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗೇ, ಭಾರತೀಯ ರೈಲ್ವೆಯ 64,689 ಕಿ.ಮೀ. ಬ್ರಾಡ್​ಗೇಜ್ ಮಾರ್ಗಗಳಲ್ಲಿ 45,881 ಕಿ.ಮೀ. ಮಾರ್ಗವನ್ನು ಎಲೆಕ್ಟ್ರಿಫೈಡ್ ಮಾಡಲಾಗಿದೆ. ಇನ್ನುಳಿದ 18,808 ಕಿ.ಮೀ. ಮಾರ್ಗವನ್ನು ಕೂಡ ಎಲೆಕ್ಟ್ರಿಫೈಡ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಾಕಿ ಉಳಿದಿರುವ ರೈಲು ಮಾರ್ಗವನ್ನು ವಿದ್ಯುದೀಕರಣಗೊಳಿಸಲು ಸುಮಾರು 21,000 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಕೂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇದರ ಜೊತೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ ವಂದೇ ಭಾರತ್ ಸೆಮಿ-ಹೈಸ್ಪೀಡ್ ರೈಲುಗಳ ಜತೆಗೆ 40 ನಗರಗಳನ್ನು ಸಂಪರ್ಕಿಸುವ ಕನಿಷ್ಠ 10 ಹೊಸ ರೈಲುಗಳನ್ನು 75 ವರ್ಷಗಳ ಸ್ವಾತಂತ್ರ್ಯದ ನೆನಪಿಗಾಗಿ 2022ರ ಆಗಸ್ಟ್ ವೇಳೆಗೆ ಸಜ್ಜುಗೊಳಿಸಲಾಗುತ್ತಿದೆ. ವಂದೇ ಭಾರತ್ ರೈಲುಗಳು ಹಳಿಗಳಲ್ಲಿ ಓಡಾಡಲು ಒಂದು ತಿಂಗಳು ತೆಗೆದುಕೊಳ್ಳಬಹುದು. ಡಿಸೆಂಬರ್ 2022 ಅಥವಾ 2023 ರ ಆರಂಭದಲ್ಲಿ ಮೊದಲ ರೈಲುಗಳು ಸಂಚಾರ ಆರಂಭಿಸುವ ಸಾಧ್ಯತೆಯಿದೆ.

ರಾಜಧಾನಿ ಮತ್ತು ಶತಾಬ್ದಿಯಂತಹ ಸಾಮಾನ್ಯ ಲೊಕೊ-ಹಾಲ್ಡ್ ರೈಲುಗಳಿಗಿಂತ ವಂದೇ ಭಾರತ್ ತನ್ನ ಗುರಿಯನ್ನು ಪೂರ್ಣಗೊಳಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಸ್ವಯಂಚಾಲಿತ ಬಾಗಿಲುಗಳು, ವಿಮಾನದಲ್ಲಿರುವಂತಹ ಆಸನಗಳು ಮತ್ತು ಪ್ರಯಾಣಿಕರ ಸೌಕರ್ಯ ಮತ್ತು ಅನುಕೂಲಕ್ಕಾಗಿ ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ವಂದೇ ಭಾರತ್ ಆಧುನಿಕ ರೈಲು ಪ್ರಯಾಣವನ್ನು ಕಲ್ಪಿಸುತ್ತದೆ. ಪ್ರಸ್ತುತ, ಕೇವಲ ಎರಡು ವಂದೇ ಭಾರತ್ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಒಂದು ದೆಹಲಿಯಿಂದ ವಾರಣಾಸಿಗೆ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಇನ್ನೊಂದು ದೆಹಲಿಯಿಂದ ಕತ್ರಾಕ್ಕೆ ಸಂಚರಿಸುತ್ತದೆ. 100 ವಂದೇ ಭಾರತ್ ಉತ್ಪಾದಿಸುವ ವೆಚ್ಚ ಸುಮಾರು 11,000 ಕೋಟಿ ರೂ. 16 ಬೋಗಿಗಳಿರುವ ಪ್ರತಿ ರೈಲಿಗೆ ಸುಮಾರು 110 ಕೋಟಿ ರೂ ಖರ್ಚಾಗುತ್ತದೆ.

ಇದನ್ನೂ ಓದಿ: Maharashtra Rains: ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಮುಂಬೈ, ಕೊಂಕಣ ಮಾರ್ಗದ 30 ರೈಲುಗಳ ಸಂಚಾರ ರದ್ದು

Karnataka Weather Today: ಕರ್ನಾಟಕದಾದ್ಯಂತ ಭಾರೀ ಮಳೆ; ಮಲೆನಾಡು ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

(Indian Railways to Electrify Broad Gauge Rail Lines by 2024 at Cost of 21,000 Crore Rupees)

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ