ಕೊನೆಯ ಓವರ್ನಲ್ಲಿ ಒಂದಂಕಿ ರನ್ಗಳ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
DPL 2025: 20ನೇ ಓವರ್ನ ಮೊದಲ ಎಸೆತದಲ್ಲೇ ಆಶಿಶ್ ಮಯಾಂಕ್ ಗುಸೈನ್ (27) ವಿಕೆಟ್ ಪಡೆದರು. ಇನ್ನು 2ನೇ ಮತ್ತು 3ನೇ ಎಸೆತಗಳಲ್ಲಿ ಒಂದೊಂದು ರನ್ ನೀಡಿದರು. 4ನೇ ಮತ್ತು 5ನೇ ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ. ಪರಿಣಾಮ ಕೊನೆಯ ಎಸೆತದಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳಲು 4 ರನ್ಗಳು ಬೇಕಿತ್ತು. ಈ ಹಂತದಲ್ಲಿ ಆಶಿಶ್ ಮೀನಾ ನೀಡಿದ್ದು ಕೇವಲ 2 ರನ್.
ಡೆಲ್ಲಿ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ಹಾಗೂ ವೆಸ್ಟ್ ಡೆಲ್ಲಿ ಲಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಈಸ್ಟ್ ಡೆಲ್ಲಿ ರೈಡರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಅಂಕಿತ್ ರಾಣಾ 47 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 71 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತು.
159 ರನ್ಗಳ ಗುರಿ ಬೆನ್ನತ್ತಿದ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 19 ಓವರ್ಗಳಲ್ಲಿ 152 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್ನಲ್ಲಿ ಗೆಲ್ಲಲು ಬೇಕಿದದ್ದು ಕೇವಲ 7 ರನ್ಗಳು ಮಾತ್ರ. ಆದರೆ ಅಂತಿಮ ಓವರ್ ಎಸೆದ ಆಶಿಶ್ ಮೀನಾ ಇಡೀ ಪಂದ್ಯದ ಫಲಿತಾಂಶ ಬದಲಿಸಿಬಿಟ್ಟರು.
20ನೇ ಓವರ್ನ ಮೊದಲ ಎಸೆತದಲ್ಲೇ ಆಶಿಶ್ ಮಯಾಂಕ್ ಗುಸೈನ್ (27) ವಿಕೆಟ್ ಪಡೆದರು. ಇನ್ನು 2ನೇ ಮತ್ತು 3ನೇ ಎಸೆತಗಳಲ್ಲಿ ಒಂದೊಂದು ರನ್ ನೀಡಿದರು. 4ನೇ ಮತ್ತು 5ನೇ ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ. ಪರಿಣಾಮ ಕೊನೆಯ ಎಸೆತದಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳಲು 4 ರನ್ಗಳು ಬೇಕಿತ್ತು. ಈ ಹಂತದಲ್ಲಿ ಆಶಿಶ್ ಮೀನಾ ನೀಡಿದ್ದು ಕೇವಲ 2 ರನ್. ಈ ಮೂಲಕ ಈಸ್ಟ್ ಡೆಲ್ಲಿ ರೈಡರ್ಸ್ ತಂಡಕ್ಕೆ 2 ರನ್ಗಳ ರೋಚಕ ಗೆಲುವು ತಂದುಕೊಡುವಲ್ಲಿ ಆಶಿಶ್ ಮೀನಾ ಯಶಸ್ವಿಯಾದರು.

