ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು
ಕೊಪ್ಪಳದ ಬಸವೇಶ್ವರ ವೃತ್ತದ ಬಳಿ ತಾಲೂಕು ಒಕ್ಕುಲತನ ಸಹಕಾರಿ ಸಂಘದ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ಕಿಲೋಮೀಟರ್ಗೂ ಅಧಿಕ ಉದ್ದದ ಸಾಲು ಕಂಡುಬಂದಿದೆ. ಪಹಣಿ ಮತ್ತು ಆಧಾರ್ ಕಾರ್ಡ್ ಹೊಂದಿರುವ ರೈತರಿಗೆ ಮಾತ್ರ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಸಾವಿರಾರು ರೈತರು ಗೊಬ್ಬರ ಪಡೆಯಲು ಕಾಯ್ದುಕೊಂಡು ನಿಂತಿದ್ದಾರೆ.
ಕೊಪ್ಪಳ, ಆಗಸ್ಟ್ 11: ರಾಜ್ಯದಲ್ಲಿ ಯೂರಿಯಾ (urea) ಗೊಬ್ಬರದ ಅಭಾವ ಇನ್ನು ಅಂತ್ಯವಾಗಿಲ್ಲ. ಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ಇತ್ತ ಕೊಪ್ಪಳದ ಬಸವೇಶ್ವರ ವೃತ್ತದ ಬಳಿ ಇರುವ ಸಹಕಾರಿ ಸಂಘದ ಮುಂದೆ ರೈತರು ಯೂರಿಯಾಗಾಗಿ ಒಂದು ಕಿ.ಮೀ ವರೆಗೆ ಸರತಿ ಸಾಲಿನಲ್ಲಿ ನಿಂತುಕೊಂಡಿರುವುದು ಕಂಡುಬಂದಿದೆ. ಪಹಣಿ, ಆಧಾರ್ ಕಾರ್ಡ್ ಇದ್ದರೆ ಮಾತ್ರ ಯೂರಿಯಾ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಯೂರಿಯಾ ಗೊಬ್ಬರ ಪಡೆಯಲು ಸಾವಿರಾರು ರೈತರು ಕಾಯ್ದುಕೊಂಡು ನಿಂತಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
