Video: ಭಾರತ ನನ್ನ ನೆಚ್ಚಿನ ದೇಶ, ಇಲ್ಲಿನ ಜನರು ತುಂಬಾ ಒಳ್ಳೆಯವ್ರು; ಭಾರತಕ್ಕೆ ಭೇಟಿ ನೀಡಿದ ವಿದೇಶಿಗನ ಮೆಚ್ಚುಗೆಯ ನುಡಿ
ಭಾರತಕ್ಕೆ ಬಂದ ವಿದೇಶಿಗರು ಇಲ್ಲಿನ ಆಚಾರ ವಿಚಾರ, ಆಹಾರ ಪದ್ಧತಿಯನ್ನು ಮನಸಾರೆ ಇಷ್ಟ ಪಡುತ್ತಿದ್ದಾರೆ. ಇದೀಗ ಅಮೆರಿಕದ ವ್ಲಾಗರ್‌ರೊಬ್ಬರು ಭಾರತೀಯ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದು, ಭಾರತದ ಪ್ರಕೃತಿ, ಆಹಾರ, ವೈವಿಧ್ಯತೆ ಮತ್ತು ಆತಿಥ್ಯವನ್ನು ಶ್ಲಾಘಿಸಿದ್ದಾರೆ. ಭಾರತದ ಬಗೆಗೆ ನಕರಾತ್ಮಕ ಧೋರಣೆಯನ್ನು ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ. ವಿದೇಶಿಗನ ಮಾತು ಕೇಳಿ ಬಳಕೆದಾರರು ಒಳ್ಳೆತನ ಹುಡುಕುವ ಮನಸ್ಸು ಬೇಕು ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ವಿಶೇಷವಾದ ಆಕರ್ಷಿಣೀಯ ಪ್ರವಾಸಿ ತಾಣಗಳಿದ್ದು (tourist place) ಹೀಗಾಗಿ ಪ್ರತಿ ವರ್ಷವು ದೇಶ ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ತಾಣಗಳನ್ನು ಸವಿಯುತ್ತಾರೆ. ದೂರದಿಂದ ಬರುವ ಪ್ರವಾಸಿ ಪ್ರಿಯರಾದ ವಿದೇಶಿಗರಿಗೆ ಭಾರತದ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ಹೊಂದಿರುತ್ತಾರೆ. ಅಮೆರಿಕದ ವ್ಲಾಗರ್‌ರೊಬ್ಬರು (American Vlogger ) ಭಾರತೀಯ ಪ್ರವಾಸಿ ತಾಣಗಳಲ್ಲಿ ಒಂದಾದ ಜಲಪಾತಕ್ಕೆ ಭೇಟಿ ನೀಡಿದ್ದು, ತನಗೆ ಭಾರತ ಅಚ್ಚು ಹೆಚ್ಚು ಎನ್ನುತ್ತಾ ಭಾರತವನ್ನು ಹಾಡಿ ಹೊಗಳಿದ್ದಾರೆ. ಭಾರತದ ಬಗ್ಗೆ ತಮ್ಮದೇ ದೃಷ್ಟಿಕೋನದಲ್ಲಿ ಯೋಚಿಸುವವರಿಗೆ ಬುದ್ಧಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿವೆ.
@vanboys222 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಭಾರತವು ಕೊಳಕು, ಜನನಿಬಿಡ ಕೊಳೆಗೇರಿಗಳಿಗಿಂತ ಹೆಚ್ಚಿನದು, ಈ ದೇಶವು ಅತ್ಯುತ್ತಮ ಆಹಾರ ಮತ್ತು ಸುಂದರವಾದ ಪ್ರಕೃತಿಯನ್ನು ಹೊಂದಿದೆ. ಸ್ಥಳೀಯ ಭಾರತೀಯರು ಆತಿಥ್ಯವನ್ನು ಇಷ್ಟಪಡುತ್ತಾರೆ, ಇಲ್ಲಿ ಅತ್ಯುತ್ತಮ ಆತಿಥ್ಯವಿದೆ. ನಾನು ಭಾರತವನ್ನು ಪ್ರೀತಿಸುತ್ತೇನೆ, ಇಲ್ಲಿನ ಜನರನ್ನು ಭೇಟಿ ಮಾಡದೇ ಹಿಂತಿರುಗಲು ಸಾಧ್ಯವಿಲ್ಲ ಎಂಬ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದಲ್ಲಿ ಅಮೆರಿಕದ ವ್ಲಾಗರ್ ಒಬ್ಬರು ಭಾರತದಲ್ಲಿನ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದು, ಪ್ರಕೃತಿಯ ನಡುವೆ ಸ್ವಚ್ಛಂದವಾಗಿ ಹರಿಯುತ್ತಿರುವ ಜಲಪಾತದಲ್ಲಿ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ವಿದೇಶಿಗ, “ಭಾರತ ನಿಮಗೆ ಕೊಳಕು ಮತ್ತು ಕಲುಷಿತವಾಗಿ ಕಾಣುತ್ತಿದೆಯೇ? ಈ ದೇಶ ನನ್ನ ನೆಚ್ಚಿನ ದೇಶಗಳಲ್ಲಿ ಒಂದಾಗಿದೆ. ಇದು ಅತ್ಯಂತ ಅಗ್ಗದ ದೇಶ. ಇಲ್ಲಿ ಅದ್ಭುತ ಜನರು, ಅದ್ಭುತವಾದ ವಿಭಿನ್ನ ಹವಾಮಾನವಿದೆ. ನಾನು ಈಗ ಪರ್ವತಗಳ ನಡುವೆ ಹರಿಯುತ್ತಿರುವ ಜಲಪಾತದ ಬಳಿ ಇದ್ದೇನೆ. ಭಾರತದ ಬಗ್ಗೆ ನೀವು ತಿಳಿದುಕೊಂಡಿರುವ ಎಲ್ಲಾ ವಿಚಾರಗಳು ಸತ್ಯವಲ್ಲ, ಈ ಸ್ಥಳವನ್ನು ನೋಡಿ ಎಂದಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: Video: ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ
ಈ ವಿಡಿಯೋ 44 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನಾನು ಭಾರತಕ್ಕೆ ಹೋಗುತ್ತೇನೆ ಎಂದಾಗಲೆಲ್ಲಾ ಜನರು ನನಗೆ ಕೆಟ್ಟದ್ದನ್ನು ಹೇಳುತ್ತಾರೆ. ಆದರೆ ಅವರು ನಿಮಗೆ ಒಳ್ಳೆಯದನ್ನು ಎಂದಿಗೂ ಹೇಳುವುದಿಲ್ಲ. ಧನ್ಯವಾದಗಳು ಸಹೋದರ. ನಿಮ್ಮ ಮಾತಿನಲ್ಲಿ ಭಾರತದ ಬಗಗ್ಗೆ ದೃಷ್ಟಿಕೋನ ಹೇಗಿದೆ ಎಂದು ತಿಳಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತೀಯರು ಯಾವುದೇ ದೇಶದ ಜನರು ಇಲ್ಲಿಗೆ ಬಂದರೂ ಪ್ರೀತಿ ವಿಶ್ವಾಸದಿಂದ ಮಾತನಾಡಿಸುತ್ತಾರೆ. ನಮ್ಮವರಂತೆ ಕಾಣುವುದು ಭಾರತೀಯ ದೊಡ್ಡ ಗುಣ ಎಂದು ಕಾಮೆಂಟ್‌ನಲ್ಲಿ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ವಾವ್ಹ್ ಈ ಸ್ಥಳವು ಅದ್ಭುತವಾಗಿದೆ, ನೀವೀಗ ಎಲ್ಲಿದ್ದೀರಾ ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Mon, 11 August 25








