Video: ಬೆಂಗಳೂರು ಅದ್ಭುತ ಅನುಭವಗಳ ಸಾರ, ಹುಟ್ಟೂರಿಗೆ ಮರಳುವಾಗ ಭಾವುಕಳಾದ ವಿದೇಶಿ ಮಹಿಳೆ
ಬೆಂಗಳೂರು ಅಂದ್ರೆ ಕೆಲವರಿಗೆ ಏನೋ ಸೆಳೆತ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಬೆಂಗಳೂರಿನತ್ತ ಹೆಜ್ಜೆ ಹಾಕುವವರೇ ಹೆಚ್ಚು. ಕೆಲವ್ರು ಬೆಂಗಳೂರು ಹೇಗಿದೆ ಎಂದು ನೋಡಲು ಒಮ್ಮೆಯಾದ್ರು ಬೆಂದಕಾಳೂರಿನತ್ತ ಬರುತ್ತಾರೆ. ಆದರೆ ಇಲ್ಲೊಬ್ಬ ವಿದೇಶಿ ಮಹಿಳೆ ಸುತ್ತಾಡಲು ಬೆಂಗಳೂರಿಗೆ ಬಂದಿದ್ದಾಳೆ. ಸಣ್ಣ ಟ್ರಿಪ್ ಬಳಿಕ ಮಾಯಾನಗರಿ ತೊರೆದು ವಿದೇಶಕ್ಕೆ ತೆರಳುವಾಗ ಭಾವುಕಳಾಗಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು (Bengaluru) ನೂರಾರು ಜನರ ಪಾಲಿಗೆ ಸುಂದರ ಬದುಕು ಕಟ್ಟಿಕೊಟ್ಟ ನಗರ. ಟ್ರಾಫಿಕ್ ಸಮಸ್ಯೆ, ಇಲ್ಲಿನ ಜನರದ್ದು ಯಾಂತ್ರಿಕ ಬದುಕು ಎಂದೆನಿಸಿದರೂ ಅದನ್ನೇ ಖುಷಿಯಿಂದ ಸ್ವೀಕರಿಸಿ ಇಷ್ಟ ಪಟ್ಟು ಇಲ್ಲಿ ಬದುಕುತ್ತಿರುವವರು ಲೆಕ್ಕವಿಲ್ಲದಷ್ಟು ಜನರು. ಅತ್ಯದ್ಭುತ ಅನುಭವ ನೀಡಿದ ಬೆಂಗಳೂರಿಗೆ ವಿದಾಯ ಹೇಳಿ ತಮ್ಮ ಹುಟ್ಟೂರಿಗೆ ತೆರಳಬೇಕಾದ ಸಂದರ್ಭ ಬಂದರೆ ಭಾವುಕರಾಗುವುದು ಸಹಜ. ಇದೀಗ ವಿದೇಶದಿಂದ ಬೆಂಗಳೂರು ನೋಡಲು ಬಂದ ಅರಿನಾ (Arina) ಎಂಬ ಮಹಿಳೆಯೂ ಇಲ್ಲಿನ ಜನರ ಪ್ರೀತಿಗೆ ಮನಸೋತಿದ್ದಾಳೆ. ತನ್ನ ಹದಿನೈದು ದಿನಗಳ ಪ್ರವಾಸ ಮುಗಿಸಿ ತನ್ನ ಊರಿಗೆ ತೆರಳಿದಾಗ ಈ ಮಹಿಳೆಯೂ ಕಣ್ಣೀರು ಸುರಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ಸಖತ್ ವೈರಲ್ ಆಗಿದೆ.
ತನ್ನ ದೇಶಕ್ಕೆ ಮರಳುವಾಗ ವಿದೇಶಿ ಮಹಿಳೆ ಭಾವುಕ
arinashoco ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಅರಿನಾ ಎಂಬ ವಿದೇಶಿ ಮಹಿಳೆಯೂ ಬೆಂಗಳೂರಿಗೆ ಟ್ರಿಪ್ ಬಂದ ವೇಳೆಯಲ್ಲಿ ತಮಗಾದ ಅನುಭವ ವನ್ನು ಹಂಚಿಕೊಂಡಿದ್ದಾರಳೆ. ಹದಿನೈದು ದಿನಗಳ ಪ್ರವಾಸ ಮುಗಿಸಿ ತನ್ನ ದೇಶಕ್ಕೆ ಮರಳಲು ವಿಮಾನ ಹತ್ತಿದಾಗ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಬೆಂಗಳೂರಿನ ಬಂದ ಅರಿನಾ 15 ದಿನಗಳ ಕಾಲ ಇಲ್ಲಿ ಕಳೆದಿದ್ದಾರೆ. ಇಲ್ಲಿನ ಪ್ರೇಕ್ಷಣಿಯ ಸ್ಥಳ, ಉದ್ಯಾನವನಗಳು, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಫುಡ್ ಸ್ಟ್ರೀಟ್ ಸೇರಿದಂತೆ ಎಲ್ಲೆಡೆ ಸುತ್ತಾಡಿ ಸಖತ್ ಎಂಜಾಯ್ ಮಾಡಿರುವುದನ್ನು ಹೇಳಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದಲ್ಲಿ ನಾನು ಈ ಹಿಂದೆ ಭೇಟಿ ಮಾಡಿದ ದೇಶದಿಂದ ತೆರಳುವಾಗ ಕಣ್ಣೀರು ಸುರಿಸಿಲ್ಲ. ಆದರೆ ಕಳೆದ 15 ದಿನಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ. ಮೂರನೇ ಭೇಟಿ ಮತ್ತೆ ಭಾರತಕ್ಕೆ ಮರಳಬೇಕು ಎಂದು ನಿರ್ಧರಿಸಿದ್ದೇನೆ. ಬೆಂಗಳೂರು ವಿವಿಧ ಸಂಸ್ಕೃತಿಯಿದ್ದು, ಇಲ್ಲಿ ಹಿಂದೂ, ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳು ಇವೆ. ಭಾರತೀಯರು ತುಂಬಾನೇ ಒಳ್ಳೆಯವ್ರು, ಬಹಳ ಪ್ರೀತಿಯಿಂದ ಮಾತನಾಡಿಸುತ್ತಾರೆ. ರಸ್ತೆಬದಿಯಲ್ಲಿ ಎರಡು ಕಡೆಯಲ್ಲಿಸಾಲಾಗಿರುವ ಮನೆಗಳು ಇಲ್ಲಿನ ಪರಿಸಾರವು ಇನ್ನಷ್ಟೂ ಸುಂದರವಾಗಿ ಕಾಣಿಸುತ್ತದೆ. ಇಲ್ಲಿನ ಪರಿಸರ ಸ್ವಚ್ಛವಾಗಿದ್ದು, ಇಲ್ಲಿನ ವಾತಾವರಣ, ರಸ್ತೆ, ಮಾರುಕಟ್ಟೆ ಸೇರಿದಂತೆ ಎಲ್ಲವೂ ಸುಂದರವಾಗಿದ್ದು ಸಹಜವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ಹೇಳಿದ್ದಾಳೆ.
ನನ್ನ ಬೆಂಗಳೂರಿನ ಪ್ರವಾಸದ ಕೊನೆಯ ದಿನ ಇಲ್ಲಿನ ಸಂಸ್ಕೃತಿ ಸಾರುವ ಉಡುಗೆ ಖರೀದಿಸಿದ್ದೇನೆ,ಇಲ್ಲಿ ಪೂಜೆಯಲ್ಲಿ ಭಾಗಿಯಾಗಿದ್ದೇನೆ. ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದೇನೆ. ಈ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನನಗೆ ಬೆಂಗಳೂರಿನಿಂದ ತೆರಳಲು ಕಷ್ಟವಾಗುತ್ತಿದೆ. ನಾನು ಬೆಂಗಳೂರಿನ ಪ್ರೀತಿ, ಒಳ್ಳೆತನದಲ್ಲಿ ಕಳೆದುಹೋಗಿದ್ದೇನೆ. ಈ ಶುದ್ಧ ನಗರದ ಮೇಲೆ ನಿಜಕ್ಕೂ ಪ್ರೀತಿಯಾಗಿದೆ. ಇಲ್ಲಿಂದ ತೆರಳುವಾಗ ಮನಸ್ಸು ಭಾರವಾಗುತ್ತಿದೆ. ಆದರೆ ಹೋಗುವುದು ನನಗೆ ಅನಿವಾರ್ಯ ಎಂದು ಹೇಳಿಕೊಂಡಿದ್ದು, ಈ ವಿಡಿಯೋದಲ್ಲಿ ಅರಿನಾ ಭಾವುಕರಾಗುವುದನ್ನು ನೀವು ನೋಡಬಹುದು.
ಇದನ್ನೂ ಓದಿ: Video: ಭಾರತ ಇಷ್ಟವಾಗಿದ್ದು ಇದೇ ಕಾರಣಕ್ಕೆ, ಅಮೆರಿಕದ ಮಹಿಳೆ ಕೊಟ್ಟ ಕಾರಣ ನೋಡಿ
ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈಕೆಯ ಮಾತು ಕೇಳಿ ಕಳೆದು ಹೋಗಿದ್ದಾರೆ. ಬಳಕೆದಾರರೊಬ್ಬರು, ಬೆಂಗಳೂರು ಕೇವಲ ನಗರವಲ್ಲ, ಇದೊಂದು ಸುಂದರ ಭಾವನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಮಗೆ ನಿಮ್ಮ ಮಾತು ಕೇಳಿ ನಿಜಕ್ಕೂ ಖುಷಿಯಾಯಿತು. ಮತ್ತೆ ಮತ್ತೆ ಈ ಸುಂದರ ನಗರಕ್ಕೆ ಭೇಟಿ ನೀಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬೆಂಗಳೂರಿನಲ್ಲಿ ಟ್ರಾಫಿಕ್ ಗೆ ಮಾತ್ರ ಸೀಮಿತ, ಇದು ಎಮೋಷನ್ ಗೆ ಖಂಡಿತ ಜಾಗವಿಲ್ಲ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








