Video: ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ
ಇತ್ತೀಚೆಗಿನ ದಿನಗಳಲ್ಲಿ ಪ್ರೇಮ ವಿವಾಹಗಳು ಹೆಚ್ಚಾಗುತ್ತಿದೆ. ವಿದೇಶಿಯರನ್ನು ಭಾರತೀಯ ಯುವಕ ಯುವತಿಯರು ವರಿಸುತ್ತಿದ್ದಾರೆ. ಈ ವಿದೇಶಿಯರು ಭಾರತೀಯರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾದಂತಹ ಸಾಕಷ್ಟು ಕಥೆಗಳನ್ನು ನೀವು ನೋಡಿದ್ದೀರಿ ಅಲ್ವಾ. ಆದರೆ ಇಲ್ಲೊಬ್ಬಳು ರಷ್ಯಾದ ಮಹಿಳೆಯೂ ಭಾರತೀಯ ಪುರುಷರನ್ನು ಯಾಕೆ ಮದುವೆಯಾದೆ ಎನ್ನುವುದಕ್ಕೆ ಕಾರಣ ಬಹಿರಂಗ ಪಡಿಸಿದ್ದಾಳೆ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಪ್ರೀತಿ ಹುಟ್ಟಲು ಕಾರಣಬೇಕಿಲ್ಲ, ಪ್ರೀತಿಗೆ ಜಾತಿ, ಧರ್ಮ ಹಾಗೂ ದೇಶ ಇದ್ಯಾವುದು ಬೇಕಾಗಿಲ್ಲ. ಶುದ್ಧ ಮನಸ್ಸು ಹಾಗೂ ಇಬ್ಬರ ಇಷ್ಟ ಕಷ್ಟಗಳು ಒಪ್ಪಿಗೆಯಾದರೆ ಪ್ರೀತಿ ತಾನಾಗಿ ಚಿಗುರೊಡೆಯುತ್ತದೆ. ಇದಕ್ಕೆ ಸಾಕ್ಷಿ ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿರುವ ಪ್ರೇಮ ವಿವಾಹಗಳು (Love marriage). ಭಾರತೀಯರು ವಿದೇಶಿಯರನ್ನು ಇಷ್ಟ ಪಟ್ಟು ಮದುವೆಯಾಗುತ್ತಿದ್ದಾರೆ. ಇದೀಗ ರಷ್ಯಾದ ಮಹಿಳೆ(Russian woman) ತಾನು ಭಾರತೀಯ ಪುರುಷನನ್ನು ಯಾವ ಕಾರಣಕ್ಕಾಗಿ ಮದುವೆಯಾದೆ ಎಂದು ತಿಳಿಸಿದ್ದಾಳೆ. ಭಾರತೀಯನನ್ನು ಇಷ್ಟ ಪಡಲು ಮೂರು ಕಾರಣಗಳನ್ನು ಉಲ್ಲೇಖಿಸಿದ್ದು, ಈ ಕುರಿತಾದ ಕ್ಲಿಪಿಂಗ್ ವೈರಲ್ ಆಗುತ್ತಿದ್ದಂತೆ ಈಕೆಯ ಪ್ರಾಮಾಣಿಕ ಮಾತುಗಳು ಬಳಕೆದಾರರ ಮೊಗದಲ್ಲಿ ನಗು ತರಿಸಿದೆ.
ksyu.chawra ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಲವ್ ಯು, ದಿ ಬೆಸ್ಟ್ ಪತಿ ಇನ್ ದಿ ವರ್ಲ್ಡ್ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಾನು ಭಾರತೀಯನನ್ನು ಮದುವೆಯಾಗಲು ಮೂರು ಕಾರಣಗಳಿವೆ. ಅವನು ಯಾವಾಗಲೂ ನನಗಾಗಿ ಅಡುಗೆ ಮಾಡುತ್ತಾನೆ, ನನಗೆ ಮುದ್ದಾದ ಮಗುವನ್ನು ನೀಡಿದ್ದಾನೆ. ನನ್ನ ಪತಿ ಯಾವಾಗಲೂ ನನ್ನನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾನೆ, ಅತಿಯಾಗಿ ನನ್ನನ್ನು ಪ್ರೀತಿಸುತ್ತಾನೆ ಹೀಗೆ ಮೂರು ಕಾರಣಗಳನ್ನು ಹೇಳಿರುವುದನ್ನುನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಚಾವ್ರಾ ಮೊದಲು ಆಧ್ಯಾತ್ಮಿಕ ತರಬೇತಿಗಾಗಿ ಭಾರತಕ್ಕೆ ಬಂದಿದ್ದು, ಈ ವೇಳೆ ಅವರು ಯಾವುದೇ ಸಂಬಂಧಗಳನ್ನು ಅಥವಾ ಹೊಸ ಸಂಪರ್ಕಗಳನ್ನು ಹುಡುಕುತ್ತಿರಲಿಲ್ಲ. ಒಂದೊಳ್ಳೆ ಕುಟುಂಬದೊಂದಿಗೆ ಖುಷಿಯಿಂದ ಬದುಕುವ ಆಸೆಯನ್ನು ಹೊಂದಿದ್ದಳು. ಆಕೆಯದ್ದು ಉದ್ದೇಶವೇ ಒಳ್ಳೆಯ ಸಂಗಾತಿಯನ್ನು ಪಡೆಯುವುದಾಗಿತ್ತು. ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಈ ಬಗ್ಗೆ ಗುರುಗಳ ಬಳಿ ಹೇಳಿಅವರ ಆಶೀರ್ವಾದ ಪಡೆದುಕೊಂಡಿದ್ದಳು. ಸ್ವಲ್ಪ ಸಮಯದಲ್ಲೇ ಭಾರತೀಯನ ಪರಿಚಯವಾಯಿತು. ಆ ಬಳಿಕ ಅದೇ ವ್ಯಕ್ತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈಕೆಯು ಅಂದಿನಿಂದ ಇಲ್ಲಿನ ಸಂಸ್ಕೃತಿ ಆಚಾರ ವಿಚಾರವನ್ನು ಪಾಲಿಸಿಕೊಂಡು ಭಾರತದಲ್ಲಿ ನೆಲೆಸಿದ್ದಾಳೆ.
ಇದನ್ನೂ ಓದಿ: Video: ಬೆಂಗಳೂರು ಅದ್ಭುತ ಅನುಭವಗಳ ಸಾರ, ಹುಟ್ಟೂರಿಗೆ ಮರಳುವಾಗ ಭಾವುಕಳಾದ ವಿದೇಶಿ ಮಹಿಳೆ
ಈ ವಿಡಿಯೋ 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಈಕೆಯ ಪ್ರಾಮಾಣಿಕ ಮಾತಿಗೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಇಬ್ಬರಿಗೂ ಒಳ್ಳೆಯದಾಗಲಿ. ನಿಮ್ಮ ಸಂಸಾರದಲ್ಲಿ ಖುಷಿ, ಸಂತೋಷವೇ ತುಂಬಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಂತಹ ಪತಿಯನ್ನು ಪಡೆಯಲು ನೀವು ಪುಣ್ಯ ಮಾಡಿರಬೇಕು ಎಂದಿದ್ದಾರೆ. ನಾನು ಭಾರತೀಯನನ್ನು ಮದುವೆಯಾಗಲು ಬಯಸುತ್ತೇನೆ. ಭಾರತೀಯ ನಿಜಕ್ಕೂ ಶ್ರಮ ಜೀವಿಗಳು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








