AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಾಧುರಿಗಾಗಿ ಮಿಡಿದ ಕರ್ನಾಟಕದ ಜೈನ ಸಮುದಾಯ, ಜಿಯೋಗೆ ಗುಡ್​​ಬೈ ಹೇಳಿದ ಜನ

ರಿಲಯನ್ಸ್​ ಇಂಡಸ್ಟ್ರೀಸ್​ ಮತ್ತು ರಿಲಯನ್ಸ್​ ಫೌಂಡೇಷನ್​ಗೆ ಸೇರಿದ ವಂತಾರ ಅನಿಮಲ್ ರೆಸ್ಕ್ಯೂ ಸೆಂಟರ್​​ಗೆ ಜೈನ ಮಠದ ಮಾಧುರಿ ಹೆಸರಿನ ಆನೆಯನ್ನು ಸ್ಥಳಾಂತರಿಸಲಾಗಿದೆ. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಜನರು ಅಂಬಾನಿ ಸೇರಿದಂತೆ ಸಂಸ್ಥೆಯ ವಿರುದ್ಧ ಗರಂ ಆಗಿದ್ದಾರೆ. ಇತ್ತ ಜೈನ ಸಮುದಾಯಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ.

Viral: ಮಾಧುರಿಗಾಗಿ ಮಿಡಿದ ಕರ್ನಾಟಕದ ಜೈನ ಸಮುದಾಯ, ಜಿಯೋಗೆ ಗುಡ್​​ಬೈ ಹೇಳಿದ ಜನ
ಮಾಧುರಿ ಆನೆಗಾಗಿ ಮಿಡಿದ ಜನರುImage Credit source: Twitter
ಸಾಯಿನಂದಾ
|

Updated on:Aug 04, 2025 | 1:33 PM

Share

ಮಹಾರಾಷ್ಟ್ರ, ಆಗಸ್ಟ್ 04 : ಎಲ್ಲಿ ನೋಡಿದ್ದರಲ್ಲಿ ಮಾಧುರಿ ಆನೆಯದ್ದೇ ಸುದ್ದಿ. ಹೌದು, ಕೊಲ್ಹಾಪುರದ ನಂದನಿ ಮಠ (Nandani Jain Mutt in Kolhapur) ದಿಂದ ಮಹಾದೇವಿ ಎನ್ನುವ ಹೆಸರಿನ ಆನೆಯನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತಿನ ವಂತಾರ ಅನಿಮಲ್ ರೆಸ್ಕ್ಯೂ ಸೆಂಟರ್ (Vantara Animal Rescue Center in Gujarat) ಸ್ಥಳಾಂತರಿಸಲಾಗಿದೆ. ಇದು ಜೈನ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ನ ಈ ಆದೇಶವು ಜೈನ ಸಮುದಾಯದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಜೈನ ಸಮುದಾಯದ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆನೆಯನ್ನು ಮತ್ತೆ ಜೈನಮಠಕ್ಕೆ ಹಿಂದುರಿಗಿಸಬೇಕೆಂದು ಒತ್ತಾಯವು ಕೇಳಿ ಬರುತ್ತಿವೆ.

ಆನೆಯ ಆರೋಗ್ಯ ಹದಗೆಟ್ಟಿದ್ದೇ ಈ ನಿರ್ಧಾರಕ್ಕೆ ಕಾರಣ

ಇದನ್ನೂ ಓದಿ
Image
ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು
Image
ಮರಿ ಆನೆಗಳ ಕ್ಯೂಟ್​​​ ಚುಂಬನ
Image
ಅಮ್ಮನ ಮಡಿಲಿನಲ್ಲಿ ಸುಖ ನಿದ್ರೆ ಮಾಡಿದ ಮರಿಯಾನೆ
Image
ಅಯ್ಯೋ ಅಮ್ಮ ನನಗೆ ಕುರ್ಚಿಯಲ್ಲಿ ಕೂರೋಕೆ ಆಗ್ತಿಲ್ಲ, ಈ ಮರಿಯಾನೆಯ ಕಷ್ಟ ನೋಡಿ

ಕರ್ನಾಟಕದಲ್ಲಿ ಹುಟ್ಟಿದ್ದ ಮಹಾದೇವಿ (ಮಾಧುರಿ) ಆನೆಯನ್ನು ಮೂರು ವರ್ಷವಿರುವಾಗಲೇ ಕೊಲ್ಹಾಪುರದ ಜೈನ ಮಠಕ್ಕೆ ಹಸ್ತಾಂತರಿಸಲಾಗಿತ್ತು. ಹೀಗಾಗಿ ಕಳೆದ ಮೂವತ್ತು ವರ್ಷಗಳಿಂದ ಮಠದಲ್ಲೇ ಇದ್ದ ಆನೆಯೂ ಜಾತ್ರೆಗಳು, ಧಾರ್ಮಿಕ ಉತ್ಸವಗಳ ಭಾಗವಾಗಿಯೇ ಇತ್ತು. ಹೀಗಾಗಿ ಜೈನ ಧರ್ಮಗುರು ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗೂ ಹಾಗೂ ಇಲ್ಲಿನ ಭಕ್ತವೃಂದಕ್ಕೂ ಮಹಾದೇವಿ ಎನ್ನುವ ಆನೆಯೂ ತುಂಬಾನೇ ಆಪ್ತವಾಗಿತ್ತು, ಹೀಗಾಗಿ ಭಾವನಾತ್ಮಕ ಸಂಬಂಧವು ಏರ್ಪಟ್ಟಿತ್ತು. ಹೀಗಾಗಿರುವ ಆನೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು, ಇತ್ತ ಮಾನಸಿಕ ಸ್ಥಿಮಿತ ಕಳೆದು ಕೊಳ್ಳುತ್ತಿದೆ ಎಂದು ಎನ್​​ಜಿಓ ವೊಂದು ಹೈಪವರ್ ಕಮಿಟಿ ಗೆ ದೂರನ್ನು ನೀಡಿದ ಹಿನ್ನಲೆಯಲ್ಲಿ ಜುಲೈ 16, 2025ರಂದು ಬಾಂಬೆ ಹೈಕೋರ್ಟ್ ಈ ಮಹಾದೇವಿ ಆನೆಯನ್ನು ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂದು ತೀರ್ಪು ನೀಡಿದ್ದ ಬೆನ್ನಲ್ಲೇ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ತೀರ್ಪನ್ನು ಬೆಂಬಲಿಸುವ ಮುಖೇನ ಸ್ಥಳಾಂತರಕ್ಕೆ ಸೂಚಿಸಿದೆ.

ಭಾವುಕ ಕ್ಷಣದ ವಿಡಿಯೋ ಇಲ್ಲಿದೆ

ಕೊಲ್ಹಾಪುರದ ಜನರು ಜಿಯೋಗೆ ಗುಡ್​​ಬೈ ಹೇಳಲು ನಿರ್ಧಾರ

ಅಂಬಾನಿ ಒಡೆತನಕ್ಕೆ ಸೇರಿದ ವಂತಾರಕ್ಕೆ ಜೈನಮಠದ ಮಹಾದೇವಿ ಅನ್ನೋ ಹೆಸರಿನ ಆನೆಯೂ ಸ್ಥಳಾಂತರಗೊಂಡಿರುವುದು ಶಿರೋಲ್​ನ ಜನರ ಹಾಗೂ ಜೈನ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಜೈನ ಸಮುದಾಯಗಳು ಸೇರಿದಂತೆ ಇಲ್ಲಿನ ಜನರು ಅಂಬಾನಿಯವರ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಜಿಯೋಗೆ ಗುಡ್ ಬಾಯ್ ಹೇಳಲು ನಿರ್ಧರಿಸಿದ್ದಾರೆ. ಈ ಸಂಸ್ಥೆಯ ಉತ್ಪನ್ನಗಳು ಹಾಗೂ ಸೇವೆಗಳನ್ನು ಬಳಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಜಿಯೋಗೆ ಪೋರ್ಟ್​ ಆಗುತ್ತಿದ್ದು, ಆನೆಯ ಜೊತೆಗೆ ಭಾವನಾತ್ಮಕ ಸಂಬಂಧ ಎಷ್ಟಿತ್ತು ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿದೆ.

ಇದನ್ನೂ ಓದಿ: Video: ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು

ಭಕ್ತವೃಂದಕ್ಕೆ ಮಹಾದೇವಿಯಲ್ಲ, ಮಾಧುರಿಯೆಂದೇ ಪರಿಚಿತ

ಶಿರೋಲ್ ತಾಲೂಕಿನ ಜನರಿಗೂ ಈ ಆನೆಗೂ ಎಲ್ಲಿಲ್ಲದ ಆತ್ಮೀಯತೆ. ಕಳೆದ ಮೂವತ್ತು ವರ್ಷಗಳಿಂದ ಮಠದಲ್ಲೇ ಇದ್ದ ಆನೆಯೂ ಜಾತ್ರೆಗಳು, ಧಾರ್ಮಿಕ ಉತ್ಸವಗಳ ಭಾಗವಾಗಿದ್ದ ಕಾರಣ ಈ ಆನೆಯೊಂದಿಗೆ ಆತ್ಮೀಯತೆ ಬೆಳೆದಿತ್ತು. ಈ ಆನೆಯ ಹೆಸರು ಮಹಾದೇವಿಯಾಗಿದ್ದರೂ ಈ ತಾಲೂಕಿನ ಜನರು ಪ್ರೀತಿಯಿಂದಲೇ ಮಾಧುರಿ ಈ ಹೆಸರಿನಿಂದ ಕರೆಯುತ್ತಿದ್ದರು.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Published On - 1:30 pm, Mon, 4 August 25

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ