Video: ಅಮ್ಮನ ಮಡಿಲಿನಲ್ಲಿ ಸುಖ ನಿದ್ರೆ ಮಾಡಿದ ಮರಿಯಾನೆ
ಮರಿಯಾನೆಗಳ ಆಟ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಈ ಪುಟಾಣಿ ಆನೆಗಳು ತನ್ನ ತಾಯಿಯ ಜೊತೆಗೆ ಪ್ರೀತಿಯಿಂದ ಗುದ್ದಾಡುತ್ತವೆ, ಮುದ್ದಾಡುತ್ತವೆ. ಆದರೆ ಇದೀಗ ತಾಯಾನೆಯ ಮಡಿಲಿನಲ್ಲಿ ಹಾಯಾಗಿ ನಿದ್ರಿಸುತ್ತಿರುವ ಮರಿಯಾನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ದೃಶ್ಯವೂ ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

ಅಮ್ಮನ (mother) ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಾಗಿಲ್ಲ. ಪ್ರೀತಿ ತುಂಬಿದ ಕೈತುತ್ತಿಗಿಂತ ರುಚಿ ಯಾವುದು ಇದೆ ಅಲ್ಲವೇ. ಅದೇ ರೀತಿ ಅಮ್ಮನ ಮಡಿಲಿಗಿಂತ ಬೆಚ್ಚಗೆಯ ಜಾಗ ಬೇರೊಂದು ಇಲ್ಲ. ಪ್ರಾಣಿಗಳು ಕೂಡ ತಾಯಿಯ ಮಡಿಲಿನಲ್ಲಿ ಮಲಗಲು ಇಷ್ಟ ಪಡುತ್ತವೆ. ಇಲ್ಲೊಂದು ಪುಟಾಣಿ ಆನೆಯೊಂದು (little elephant) ತನ್ನ ತಾಯಿಯ ಮಡಿಲಿನಲ್ಲಿ ಹಾಯಾಗಿ ನಿದ್ರಿಸಿದೆ. ಅಮ್ಮನ ಬೆಚ್ಚಗೆ ಮಡಿಲಿನಲ್ಲಿ ಇರುವ ಸುಖವೇ ಹಾಗೆ ಎನ್ನುವುದನ್ನು ಈ ವಿಡಿಯೋ ಎತ್ತಿ ತೋರಿಸುತ್ತಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಮುದ್ದಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ತಮ್ಮ @susantananda3 ಹೆಸರಿನ ಎಕ್ಸ್ ಖಾತೆಯಲ್ಲಿ ಈ ಚೋಟುವಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಐಷಾರಾಮಿ ಎಂದರೆ ನಾಲ್ಕು ಟನ್ ಪ್ರೀತಿಯ ಮೇಲೆ ನಿದ್ರಿಸುವುದು, ಚೋಟು ತನ್ನ ತಾಯಿಯ ಮಡಿಲಲ್ಲಿ ಗಾಢ ನಿದ್ದೆಗೆ ಜಾರಿದೆ. ಸುಕ್ಕುಗಳಲ್ಲಿ ಸುತ್ತುವರಿದ ಶುದ್ಧ ಪ್ರೀತಿ ಇದು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Luxury is sleeping on four tons of love💕 Chotu fast asleep on its mothers lap-Pure love wrapped in wrinkles pic.twitter.com/yev6iNsB1M
— Susanta Nanda IFS (Retd) (@susantananda3) July 24, 2025
ಈ ವಿಡಿಯೋದಲ್ಲಿ ಪುಟಾಣಿ ಮರಿ ಆನೆಯೊಂದು ತನ್ನ ತಾಯಿಯ ತೊಡೆಯ ಮೇಲೆ ತಲೆಯಿಟ್ಟು ಹಾಯಾಗಿ ನಿದ್ರಿಸುತ್ತಿರುವುದನ್ನು ನೋಡಬಹುದು. ಮತ್ತೊಂದು ಆನೆಯೊಂದು ಈ ತಾಯಿ ಮರಿಯ ಪಕ್ಕದಲ್ಲಿ ನಿಂತು ಕೊಂಡಿದೆ. ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ತಾಯಿ ಮಗುವಿನ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.
ಇದನ್ನೂ ಓದಿ: Video: ಅಯ್ಯೋ… ಅಮ್ಮ ನನಗೆ ಕುರ್ಚಿಯಲ್ಲಿ ಕೂರೋಕೆ ಆಗ್ತಿಲ್ಲ, ಈ ಮರಿಯಾನೆಯ ಕಷ್ಟ ನೋಡಿ
ಜುಲೈ 24 ರಂದು ಶೇರ್ ಮಾಡಲಾದ ಈ ವಿಡಿಯೋಗೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ಚೋಟು ಕೂಡ ಕನಸಿನಲ್ಲಿ ನಗುತ್ತಿದ್ದಾನೆ. ಅವನು ಬಾಳೆಹಣ್ಣು ತಿನ್ನುತ್ತಿರುವ ಕನಸು ಕಾಣುತ್ತಿದ್ದಾನೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇನ್ನೊಬ್ಬರು, ಚೋಟು ಅಮ್ಮನ ಮಡಿಲಲಿನಲ್ಲಿ ಹಾಯಾಗಿ ನಿದ್ರಿಸಿದ್ದಾನೆ. ಇದುವೇ ನಿಜವಾದ ಐಷಾರಾಮಿ ಜೀವನ ಎಂದಿದ್ದಾರೆ. ಮತ್ತೊಬ್ಬರು, ತಾಯಿಯ ಮಡಿಲಿಗಿಂತ ಆರಾಮಾದಾಯಕ ಹಾಗೂ ಸುರಕ್ಷಿತ ಜಾಗ ಮತ್ತೊಂದು ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








