Video: ಅಯ್ಯೋ… ಅಮ್ಮ ನನಗೆ ಕುರ್ಚಿಯಲ್ಲಿ ಕೂರೋಕೆ ಆಗ್ತಿಲ್ಲ, ಈ ಮರಿಯಾನೆಯ ಕಷ್ಟ ನೋಡಿ
ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಚೇಷ್ಟೆ ಹಾಗೂ ತುಂಟಾಟದ ವಿಡಿಯೋಗಳು ನೆಟ್ಟಿಗರ ಮನಸ್ಸು ಗೆಲ್ಲುವುದಿದೆ. ಆದರೆ ಇದೀಗ ಮರಿಯಾನೆಯ ಈ ವಿಡಿಯೋ ನೋಡಿದ್ರೆ ನಿಮಗೆ ಖಂಡಿತ ಇಷ್ಟವಾಗದೇ ಇರದು. ಮರಿಯಾನೆಯು ಕುರ್ಚಿ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದೆ. ಆದರೆ ಕುಳಿತುಕೊಳ್ಳಲು ಸಾಧ್ಯವಾಗದಿದ್ದಾಗ ಸಿಟ್ಟಿನಲ್ಲಿ ಏನು ಮಾಡಿದೆ ಗೊತ್ತಾ? ಈ ಕುರಿತಾದ ವಿಡಿಯೋ ಇಲ್ಲಿದೆ.

ಮುಗ್ಧ ಪ್ರಾಣಿಗಳ ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಚಂದ. ಆದರೆ ಈ ಮರಿಯಾನೆಗಳ (baby elephant) ಆಟ, ತುಂಟಾಟ ಹಾಗೂ ಕಸರತ್ತು ಹೀಗೆ ಪೆದ್ದು ಪೆದ್ದು ಆಟವನ್ನು ನೋಡಿದರೆ ಖುಷಿಯಾಗುತ್ತದೆ. ಕೆಲವೊಮ್ಮೆ ಈ ಮುಗ್ಧ ಪ್ರಾಣಿಗಳು ಮಕ್ಕಳಂತೆ ಮುದ್ದು ಮುದ್ದಾಗಿ ಕೋಪಿಸಿಕೊಳ್ಳುತ್ತವೆ. ಇದೀಗ ಮರಿಯಾನೆ ತುಂಟಾಟದ ವಿಡಿಯೋ ವೈರಲ್ ಆಗಿದೆ. ಮಡಚಿ ಇಡಬಹುದಾದ ಕುರ್ಚಿಯನ್ನು ಕಂಡೊಡನೆ ಓಡಿ ಹೋಗಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದು, ಈ ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
tuskersh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಪುಟಾಣಿ ಮರಿಯೊಂದು ನಿಧಾನವಾಗಿ ತನ್ನ ದೇಹ ಸಮತೋಲನವನ್ನು ಕಾಯ್ದುಕೊಂಡು ಮಡಚಿ ಇಡಬಹುದಾದ ಕುರ್ಚಿ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದೆ. ಎಷ್ಟೇ ಪ್ರಯತ್ನಿಸಿದರೂ ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಕೊನೆಗೆ ಸಿಟ್ಟಿನಲ್ಲಿ ಕುರ್ಚಿಯನ್ನು ಕಾಲಿನಿಂದ ಒದ್ದು ಅಪ್ಪಚಿ ಮಾಡಿ ತನ್ನ ಕೋಪವನ್ನು ಹೊರಹಾಕಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ :Video: ಭಾರತ ಇಷ್ಟವಾಗಿದ್ದು ಇದೇ ಕಾರಣಕ್ಕೆ, ಅಮೆರಿಕದ ಮಹಿಳೆ ಕೊಟ್ಟ ಕಾರಣ ನೋಡಿ
ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಎಷ್ಟು ಮುದ್ದಾಗಿದೆ ಈ ವಿಡಿಯೋ, ಮರಿಯಾನೆಯ ತುಂಬಾ ನೋಡುವುದೇ ಖುಷಿ ಎಂದಿದ್ದಾರೆ. ಇನ್ನೊಬ್ಬರು, ಅಯ್ಯೋ ಈ ಪುಟ್ಟ ಮರಿಯಾನೆ ಕುಳಿತುಕೊಳ್ಳಲು ಎಷ್ಟು ಕಷ್ಟ ಪಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದಯವಿಟ್ಟು ಯಾರಾದ್ರೂ ಈ ಮರಿಯಾನೆಗೆ ಸೋಫಾ ತಂದುಕೊಡಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








