Video: ಚಾಲಕನಿಲ್ಲದೆ ಸ್ಟಾರ್ಟ್ ಆಗಿ ಮುಂದಕ್ಕೆ ಬಂದು ನಿಂತ ಟ್ರ್ಯಾಕ್ಟರ್
ಜಗತ್ತಿನಲ್ಲಿ ಚಾಲಕನ ಸಹಾಯವಿಲ್ಲದೆ ಸ್ವ ಸಾಮಾರ್ಥ್ಯದಿಂದ ಕಾರು ಅಥವಾ ಕೆಲವೊಂದು ವಾಹನಗಳು ಚಲಿಸುತ್ತದೆ. ಆದರೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಚಾಲಕನಿಲ್ಲದೆ ಟ್ರ್ಯಾಕ್ಟರ್ವೊಂದು ಮುಂದಕ್ಕೆ ತನ್ನಷ್ಟಕ್ಕೆ ಹೋಗಿದೆ. ಇದೀಗ ಈ ವೈರಲ್ ವಿಡಿಯೋ ಅಲ್ಲಿನ ಜನರಿಗೆ ಭಯವನ್ನು ಉಂಟು ಮಾಡಿದೆ. ಅನೇಕರ ಗೊಂದಲಕ್ಕೆ ಈ ವಿಡಿಯೋ ಕಾರಣವಾಗಿದೆ.

ಮಧ್ಯಪ್ರದೇಶ, ಆಗಸ್ಟ್ 04 : ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಭಯಾನಕ ವಿಡಿಯೋ ವೈರಲ್ (Balaghat Viral) ಆಗುತ್ತಲೇ ಇರುತ್ತದೆ. ಈ ಟ್ರ್ಯಾಕ್ಟರ್ನಲ್ಲಿ ವಿಚಿತ್ರ ಶಬ್ದ, ಇನ್ನು ಕೆಲವೊಂದು ಚಾಲಕನಿಲ್ಲದೆ ಕಾರು ಮುಂದಕ್ಕೆ ಹೋಗುವುದು, ಹೀಗೆ ಹಲವು ಘಟನೆಗಳು ವೈರಲ್ ಆಗುತ್ತದೆ. ಇದೀಗ ಇಲ್ಲೊಂದು ಅಂತಹದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಆಘಾತಕಾರಿ ವಿಡಿಯೋ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ. ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಈ ವಿಡಿಯೋ ಸಿಸಿಟಿವಿ ಕ್ಯಾಮರದಲ್ಲಿ (tractor running without driver) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂದು ಶೆಡ್ನಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ್‌ಗಳ ಸಾಲಿನಲ್ಲಿ ಒಂದು ಟ್ರ್ಯಾಕ್ಟರ್ ಚಾಲಕನಿಲ್ಲದೆ ಚಲಿಸುತ್ತಿರುವುದನ್ನು ನೋಡಬಹುದು. ಇನ್ನು ಈ ಘಟನೆ ಬಾಲಘಾಟ್ ಜಿಲ್ಲೆಯ ಭಟೇರಾ ಚೌಕಿಯಲ್ಲಿ ನಡೆದಿದ್ದು, ನಿನ್ನೆ ರಾತ್ರಿ ಅಂದರೆ ಆಗಸ್ಟ್ 3ರಂದು ಟ್ರ್ಯಾಕ್ಟರ್ ಚಾಲಕನಿಲ್ಲದೇ ಚಲಿಸಿ, ಮುಂದೆ ಇಟ್ಟಿದ್ದ ಇಟ್ಟಿಗೆಗಳ ರಾಶಿಗೆ ಡಿಕ್ಕಿ ಹೊಡೆದು ನಿಂತಿದೆ.
ಅದೃಷ್ಟವಶಾತ್ ಟ್ರ್ಯಾಕ್ಟರ್ ಹತ್ತಿರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರೂ ಕಾಮೆಂಟ್ ಮಾಡಿದ್ದಾರೆ. ಇದನ್ನು ಅನೇಕರು ಅಹಿತಕರ ಘಟನೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಟ್ರ್ಯಾಕ್ಟರ್ ಹೇಗೆ ತಾನಾಗಿಯೇ ಸ್ಟಾರ್ಟ್ ಆಗಿ ಪಾರ್ಕಿಂಗ್ ಪ್ರದೇಶದಿಂದ ಮುಂದಕ್ಕೆ ಹೋಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಇದು ಶಾರ್ಟ್ ಸರ್ಕ್ಯೂಟ್ನಿಂದ ಆಗಿದೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
बालाघाट: हैरान करने वाला वीडियो आया सामने, अपने आप चल पड़ा ट्रेक्टर, CCTV में कैद हुआ नजारा #MadhyaPradesh pic.twitter.com/xH1uWJc89O
— NDTV MP Chhattisgarh (@NDTVMPCG) August 4, 2025
ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಚಲಿಸುತ್ತಿರುವ ಬಗ್ಗೆ ಅಲ್ಲಿನ ಜನರಲ್ಲಿ ಭಯ ಉಂಟಾಗಿದೆ. ತಾಂತ್ರಿಕ ತಜ್ಞರು ಇದನ್ನು ತಾಂತ್ರಿಕ ದೋಷದಿಂದ ಎಂದು ಹೇಳಿದ್ದಾರೆ. ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಚಲಿಸಲು ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಇದರಿಂದಾಗಿ ಟ್ರ್ಯಾಕ್ಟರ್ ತಾನಾಗಿಯೇ ಸ್ಟಾರ್ಟ್ ಆಗಿ ಮುಂದೆ ಬಂದಿದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಹಲವು ವಿಭಿನ್ನ ಅಭಿಪ್ರಾಯಗಳಿವೆ. ಚಾಲಕನಿಲ್ಲದೆ ತನ್ನಷ್ಟಕ್ಕೆ ಸ್ಟಾರ್ಟ್ ಆಗಿ, ಮುಂದೆಕ್ಕೆ ಹೋಗುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆದರೆ ಜಗತ್ತು ಬದಲಾಗಿದೆ. ಹೀಗಿನ ವಾಹನಗಳು ಚಾಲಕನಿಲ್ಲದೆ ಚಲಿಸುತ್ತಿದೆ. ಆದರೆ ಇದು ವಿಭಿನ್ನವಾಗಿದೆ ಎಂಬುದು ಅನೇಕರ ಅಭಿಪ್ರಾಯ.
ಇದನ್ನೂ ಓದಿ: ಮಾಧುರಿಗಾಗಿ ಮಿಡಿದ ಕರ್ನಾಟಕದ ಜೈನ ಸಮುದಾಯ, ಜಿಯೋಗೆ ಗುಡ್ಬೈ ಹೇಳಿದ ಜನ
ಆಧುನಿಕ ಯುಗದಲ್ಲಿ ಚಾಲಕರಹಿತ ಕಾರುಗಳು ಹೊಸದೇನಲ್ಲ, ಅಂತಹ ಕಾರುಗಳನ್ನು ಸ್ವಯಂ ಚಾಲಿತ ಕಾರುಗಳು ಅಥವಾ ಸ್ವಾಯತ್ತ ಕಾರುಗಳು ಎಂದು ಕರೆಯಲಾಗುತ್ತದೆ. ಅಂತಹ ಕಾರುಗಳು ಯಾವುದೇ ಮಾನವ ಚಾಲಕರಿಲ್ಲದೆ ಸ್ವಂತವಾಗಿ ಚಲಿಸುತ್ತವೆ. ಈ ಕಾರು ತನ್ನ ಸುತ್ತಮುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳುವ ಮೂಲಕ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ತನ್ನನ್ನು ತಾನೇ ಚಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ಟ್ರ್ಯಾಕ್ಟರ್ ವಿಷಯದಲ್ಲಿ ಬೇರೆ ಎಂದು ಹೇಳಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








