Optical Illusion: ಈ ಚಿತ್ರದಲ್ಲಿ ಅಡಗಿರುವ ಮೂರನೇ ವ್ಯಕ್ತಿಯ ಮುಖವನ್ನು ಹುಡುಕಬಲ್ಲಿರಾ?
ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್‌ನಂತಹ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ಈ ಚಿತ್ರಗಳನ್ನು ನೋಡಿದಾಗ ಒಂದು ಕ್ಷಣ ನಮ್ಮಲ್ಲಿ ಗೊಂದಲವನ್ನು ಮೂಡಿಸುತ್ತದೆ. ಆದರೆ ಈ ಮೋಜಿನ ಆಟವನ್ನು ಆಡುತ್ತಾ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಇದೀಗ ಇಂತಹದ್ದೇ ಒಂದು ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ಅಡಗಿರುವ ಮೂರನೇ ವ್ಯಕ್ತಿಯ ಮುಖವನ್ನು ಪತ್ತೆಹಚ್ಚಬೇಕು. ಇದು ನಿಮ್ಮಿಂದ ಸಾಧ್ಯವಾದರೆ ನಿಮ್ಮ ಕಣ್ಣಿನ ದೃಷ್ಟಿ ಅತ್ಯುತ್ತಮವಾಗಿದೆ ಎಂದರ್ಥ.

ಆಪ್ಟಿಕಲ್ ಇಲ್ಯೂಷನ್ (Optical Illusion) ಬ್ರೈನ್ ಟೀಸರ್‌ನಂತಹ ಒಗಟಿನ ಚಿತ್ರಗಳು ಬಿಡುವಿನ ಸಮಯದಲ್ಲಿ ಟೈಮ್ ಪಾಸ್ ಗಾಗಿ ಇರುವುದೆಂದು ಕೆಲವರು ಭಾವಿಸುತ್ತಾರೆ. ಆದರೆ ಇದು ವ್ಯಕ್ತಿಯ ಬುದ್ಧಿವಂತಿಕೆ ಹಾಗೂದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಸಾಧ್ಯವಾಗಿದೆ. ಮೆದುಳಿಗೆ ವ್ಯಾಯಾಮ ನೀಡುವ ಇಂತಹ ಆಟಗಳನ್ನು ಆಡುವುದರಲ್ಲಿ ಇರುವ ಖುಷಿಯೇ ಬೇರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಇಬ್ಬರೂ ವ್ಯಕ್ತಿಗಳ ಮುಖಗಳಿದ್ದು, ಮೂರನೇ ವ್ಯಕ್ತಿಯ ಮುಖ ಎಲ್ಲಿದೆ ಎಂದು ಗುರುತಿಸಬೇಕು. ಈ ಒಗಟು ಬಿಡಿಸಲು ಇಂತಿಷ್ಟು ಸಮಯಾವಕಾಶ ನೀಡಿಲ್ಲ. ಆದರೆ ಈ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ.
ಸವಾಲು ಸ್ವೀಕರಿಸಿದ್ದೀರಾ?
ಆಪ್ಟಿಕಲ್ ಇಲ್ಯೂಷನ್ ನಂತಹ ಒಗಟಿನ ಆಟಗಳು ವೀಕ್ಷಣಾ ಕೌಲಶ್ಯಗಳನ್ನು ಪರೀಕ್ಷಿಸಲು ಸಹಾಯಕವಾಗಿದೆ. ಸದ್ಯಕ್ಕೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಇಬ್ಬರೂ ಹುಡುಗಿಯರು ಪರಸ್ಪರ ಕೈ ಕೈ ಹಿಡಿದು ಸಾಂದರ್ಭಿಕವಾಗಿ ಮಾತನಾಡುತ್ತಿರುವಂತೆ ಕಾಣುತ್ತಿದೆ. ಈ ಇಬ್ಬರೂ ನಮ್ಮ ಕಣ್ಣಿಗೆ ಕಾಣಿಸುತ್ತಾರೆ. ಆದರೆ ಇದರಲ್ಲಿರುವ ಸವಾಲು ಎಂದರೆ ಮೂರನೇ ವ್ಯಕ್ತಿಯ ಮುಖವನ್ನು ಗುರುತಿಸುವುದು. ಹತ್ತು ಜನರಲ್ಲಿ ಒಬ್ಬರು ಮಾತ್ರ ಇಂತಹ ಸವಾಲನ್ನು ಬಿಡಿಸಲು ಸಾಧ್ಯ. ನೀವು ಈ ಸವಾಲು ಸ್ವೀಕರಿಸಿದ್ದೀರಿ ಎಂದಾದ್ರೆ ಈಗಲೇ ಈ ಒಗಟನ್ನು ಬಿಡಿಸುವತ್ತ ಗಮನ ಕೊಡಿ.
ಇದನ್ನೂ ಓದಿ: Optical Illusion: ಈ ದಟ್ಟ ಅರಣ್ಯದಲ್ಲಿ ಅಡಗಿರುವ ಚಿರತೆಯನ್ನು 10 ಸೆಕೆಂಡಿನಲ್ಲಿ ಹುಡುಕಿ
ಉತ್ತರ ಇಲ್ಲಿದೆ

ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೂರನೇ ವ್ಯಕ್ತಿಯ ಮುಖವನ್ನು ಪತ್ತೆ ಹಚ್ಚಲು ನೀವು ಎಷ್ಟೇ ಪ್ರಯತ್ನಿಸಿದರೂ ಉತ್ತರ ಹುಡುಕಲು ಸಾಧ್ಯವಾಗುತ್ತಿಲ್ಲವೇ, ಹೆಚ್ಚು ಚಿಂತಿಸಬೇಡಿ, ನಾವೇ ನಿಮಗೆ ಉತ್ತರ ಹೇಳುತ್ತೇವೆ. ಮೂರನೇ ವ್ಯಕ್ತಿಯ ಮುಖವು ಎಡಭಾಗದಲ್ಲಿರುವ ಹುಡುಗಿಯ ಟೀ ಶರ್ಟ್‌ನಲ್ಲಿದೆ. ಹೀಗಾಗಿ ನೀವು ಏಕಾಗ್ರತೆಯಿಂದ ಟೀ ಶರ್ಟ್‌ನತ್ತ ಕಣ್ಣುಹಾಯಿಸಿದರೆ ಉತ್ತರವು ಸ್ಪಷ್ಟವಾಗಿ ಕಾಣುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 am, Mon, 4 August 25








