AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ತಬ್ಬಿಕೊಂಡ ಮರಿಯಾನೆ

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ನಿಷ್ಕಲ್ಮಶ ಪ್ರೀತಿಯನ್ನು ಸಾರುವ ದೃಶ್ಯ ಕಂಡಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಇಂತಹದ್ದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆನೆಮರಿಯೊಂದು ಉದ್ಯಾನವನದಲ್ಲಿ ಕುಳಿತುಕೊಂಡಿದ್ದ ದಂಪತಿಯನ್ನು ಪ್ರೀತಿಯಿಂದ ಮುದ್ದಾಡಿದ ದೃಶ್ಯವೊಂದು ಗಮನ ಸೆಳೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಬಳಕೆದಾರರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video: ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ತಬ್ಬಿಕೊಂಡ ಮರಿಯಾನೆ
ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ತಬ್ಬಿಕೊಂಡ ಮರಿಯಾನೆImage Credit source: Twitter
ಸಾಯಿನಂದಾ
|

Updated on: Aug 04, 2025 | 2:45 PM

Share

ಆನೆಗಳು (elephant) ಆಟ ತುಂಟಾಟಗಳನ್ನು ನೋಡುವುದೇ ಕಣ್ಣಿನ ಹಬ್ಬ. ಈ ಪುಟಾಣಿ ಆನೆಗಳು ಮಾಡುವ ಚೇಷ್ಟೆಗಳು ಅಷ್ಟಿಷ್ಟಲ್ಲ. ಕೆಲವೊಮ್ಮೆ ತನ್ನ ಮನುಷ್ಯರ ಜೊತೆಗೆ ಪ್ರೀತಿಯಿಂದ ವರ್ತಿಸುತ್ತವೆ. ಎಲ್ಲರ ಮನಸ್ಸನ್ನು ಗೆಲ್ಲುತ್ತವೆ. ಇದೀಗ ಇಂತಹ ಮರಿಯಾನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ಬಿರುಗಾಳಿ ಎಬ್ಬಿಸಿದೆ. ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ಮರಿಯಾನೆಯೊಂದು ತಬ್ಬಿಕೊಂಡು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

@Amaazing Nature ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮರಿಯಾನೆ ಹಾಗೂ ದಂಪತಿಯ ನಡುವಿನ ಸಂವಾದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಈ ವಿಡಿಯೋಗೆ ಮರಿ ಆನೆಗಳು ಮನುಷ್ಯರು ತುಂಬಾ ಮುದ್ದಾಗಿದ್ದಾರೆಂದು ಭಾವಿಸುತ್ತವೆ ಮತ್ತು ನಮ್ಮನ್ನು ಅಪ್ಪಿಕೊಳ್ಳಲು ಬಯಸುತ್ತವೆ” ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ಕ್ಲಿಪ್‌ನಲ್ಲಿ ದಂಪತಿಯೂ ಪ್ರಶಾಂತವಾದ ಸ್ಥಳದಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ. ಈ ವೇಳೆಯಲ್ಲಿ ಮರಿಯಾನೆಯೂ ಈ ಜೋಡಿಯನ್ನು ಹಿಂದಿನಿಂದ ಸಮೀಪಿಸುವುದರೊಂದಿಗೆ ವಿಡಿಯೋವು ಪ್ರಾರಂಭವಾಗುತ್ತದೆ. ಈ ದಂಪತಿ ತಿರುಗಿ ನೋಡುತ್ತಿದ್ದಂತೆ ಈ ಆನೆ ಮರಿ ತನ್ನ ಸೊಂಡಿಲನ್ನು ಚಾಚಿ, ಅವರ ಭುಜಗಳ ಮೇಲೆ ಇಡುತ್ತದೆ. ಪ್ರೀತಿಯಿಂದ ತನ್ನ ಮುಂಭಾಗದ ಕಾಲುಗಳನ್ನು ಮೇಲೆತ್ತಿ ವ್ಯಕ್ತಿಯ ಭುಜದ ಮೇಲೆ ಇಡುತ್ತದೆ. ಈ ದೃಶ್ಯವನ್ನು ನೋಡಿದರೆ ಪ್ರೀತಿಯಿಂದ ಆನೆಯೂ ಅಪ್ಪಿ ಕೊಂಡಂತೆ ಕಾಣುತ್ತಿದೆ.

ಇದನ್ನೂ ಓದಿ
Image
ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು
Image
ಮರಿ ಆನೆಗಳ ಕ್ಯೂಟ್​​​ ಚುಂಬನ
Image
ಅಮ್ಮನ ಮಡಿಲಿನಲ್ಲಿ ಸುಖ ನಿದ್ರೆ ಮಾಡಿದ ಮರಿಯಾನೆ
Image
ಅಯ್ಯೋ ಅಮ್ಮ ನನಗೆ ಕುರ್ಚಿಯಲ್ಲಿ ಕೂರೋಕೆ ಆಗ್ತಿಲ್ಲ, ಈ ಮರಿಯಾನೆಯ ಕಷ್ಟ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Viral: ಮಾಧುರಿಗಾಗಿ ಮಿಡಿದ ಕರ್ನಾಟಕದ ಜೈನ ಸಮುದಾಯ, ಜಿಯೋಗೆ ಗುಡ್​​ಬೈ ಹೇಳಿದ ಜನ

ಈ ವಿಡಿಯೋ ಈಗಾಗಲೇ 1.3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು,ಈ ಆನೆಗಳ ತುಂಟಾಟ ನೋಡುವುದೇ ಚಂದ, ಎಷ್ಟು ಮುದ್ದಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯವು ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಈ ಆನೆಗಳು ಮನುಷ್ಯರನ್ನು ಕಂಡಾಗ ಮಗುವಾಗುತ್ತದೆ, ತನ್ನನ್ನು ಅವರುಗಳು ಪ್ರೀತಿಸಬೇಕೆಂದು ಬಯಸುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ