Optical Illusion: ಈ ದಟ್ಟ ಅರಣ್ಯದಲ್ಲಿ ಅಡಗಿರುವ ಚಿರತೆಯನ್ನು 10 ಸೆಕೆಂಡಿನಲ್ಲಿ ಹುಡುಕಿ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲ, ಇದು ನಮ್ಮ ವ್ಯಕ್ತಿತ್ವ, ಕಣ್ಣಿನ ದೃಷ್ಟಿ, ಬುದ್ಧಿವಂತಿಕೆಯ ಮಟ್ಟ ಎಷ್ಟಿದೆ ಎಂದು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಇಂತಹ ಸಾಕಷ್ಟು ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ದಟ್ಟವಾದ ಹಚ್ಚಹಸಿರಿನ ಅರಣ್ಯದ ನಡುವೆ ಅಡಗಿರುವ ಚಿರತೆಯನ್ನು ನೀವು ಹುಡುಕಬೇಕು.

ಬುದ್ಧಿ ಹಾಗೂ ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಿದೆ. ಇಂತಹ ಒಗಟುಗಳನ್ನು ಬಿಡಿಸಲು ಆಸಕ್ತಿಯಿರುವವರು ಸಹಜವಾಗಿಯೇ ಇದರತ್ತ ಕಣ್ಣಾಯಿಸುತ್ತಾರೆ. ಆದರೆ ಕೆಲವರಿಗೆ ಎಷ್ಟೇ ತಲೆಕೆಡಿಸಿಕೊಂಡರೂ ಉತ್ತರ ಹುಡುಕುವುದು ಕಷ್ಟವಾಗಬಹುದು. ಇನ್ನು ಕೆಲವರು ಕಣ್ಣು ಮಿಟುಕಿಸುವುದರೊಳಗಾಗಿ ಒಗಟನ್ನು ಬಿಡಿಸುತ್ತಾರೆ. ಇದೀಗ ಕಠಿಣ ಸವಾಲಿನ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಸಹಕಾರಿಯಾಗುವ ಚಿತ್ರವೊಂದು ವೈರಲ್ ಆಗಿದೆ. ಈ ದಟ್ಟವಾದ ಹಚ್ಚ ಹಸಿರಿನ ಅರಣ್ಯದಲ್ಲಿ ಚಿರತೆಯೊಂದು ಅಡಗಿದೆ. ಕೇವಲ ಹತ್ತು ಸೆಕೆಂಡುಗಳ ಒಳಗೆ ಈ ಚಿರತೆಯನ್ನು (leopard) ಪತ್ತೆ ಹಚ್ಚುವ ಸವಾಲು ನಿಮಗಿದೆ. ಇದೀಗ ಚಾಲೆಂಜ್ ಸ್ವೀಕರಿಸಲು ರೆಡಿ ಇದ್ದೀರಾ ಅಂತಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ, ಉತ್ತರ ಹುಡುಕಲು ಪ್ರಯತ್ನಿಸಿ.
ಈ ಚಿತ್ರದಲ್ಲಿ ಏನಿದೆ?
ಮೆದುಳಿಗೆ ಕೆಲಸ ನೀಡುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು @stock-associatio -83 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ನೆಲಕ್ಕೆ ಬಿದ್ದ ತರಗೆಲೆಗಳು, ಹಚ್ಚಹಸಿರಿನಿಂದ ಆವೃತ್ತವಾದ ದಟ್ಟವಾದ ಅರಣ್ಯವನ್ನು ನೀವು ನೋಡಬಹುದು. ಮೊದಲಿಗೆ ಈ ಚಿತ್ರವನ್ನು ನೋಡಿದಾಗ ಸುಂದರವಾದ ಅರಣ್ಯ ಮಾತ್ರ ನಿಮ್ಮ ಕಣ್ಣಿಗೆ ಬೀಳುತ್ತದೆ. ಆದರೆ ಈ ಚಿತ್ರದಲ್ಲಿ ಚಿರತೆಯೊಂದು ಅಡಗಿದೆ. ಹತ್ತು ಸೆಕೆಂಡುಗಳೊಳಗೆ ಈ ಚಿರತೆಯನ್ನು ಗುರುತಿಸಿ ಈ ಸವಾಲನ್ನು ಬಿಡಿಸಬೇಕು.
ಇದನ್ನೂ ಓದಿ: Optical Illusion: ಈ ಮರದ ಕೊಂಬೆ ಮೇಲೆ ಎಷ್ಟು ಪಕ್ಷಿಗಳಿವೆ ಎಂದು ಹೇಳಿ ನೋಡಾ?
ಉತ್ತರ ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಯಿತೆ?
ಚಿರತೆಯನ್ನು ಕಾಡಿನ ನೆಲ ಹಾಗೂ ಸುತ್ತಮುತ್ತಲಿನ ಹಸಿರಿನೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸಲಾಗಿದೆ. ಚದುರಿದ ಎಲೆಗಳು ಹಾಗೂ ಹಚ್ಚಹಸಿರಿನ ಪರಿಸರದಿಂದ ಈ ಪ್ರಾಣಿಯನ್ನು ಗುರುತಿಸುವುದು ಕಷ್ಟವಾಗಬಹುದು. ಆದರೆ ಈ ಅಡೆತಡೆಗಳನ್ನು ದಾಟಿ ನೀವು ಈ ಒಗಟನ್ನು ಬಿಡಿಸಿದರೆ ನಿಮ್ಮ ಕಣ್ಣಿನ ದೃಷ್ಟಿ ಉತ್ತಮವಾಗಿದೆ ಎಂದರ್ಥ. ನಿಮಗೆ ಚಿರತೆ ಕಣ್ಣಿಗೆ ಬೀಳದೆ ಇದ್ದರೆ ಹುಡುಕುತ್ತಲೇ ಇರಿ. ನೀವು ಏಕಾಗ್ರತೆಯಿಂದ ಈ ಚಿತ್ರವನ್ನು ಗಮನಿಸಿದರೆ ಚಿರತೆಯೂ ನಿಮ್ಮ ಕಣ್ಣಿಗೆ ಖಂಡಿತ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




