Optical Illusion: ಈ ಮರದ ಕೊಂಬೆ ಮೇಲೆ ಎಷ್ಟು ಪಕ್ಷಿಗಳಿವೆ ಎಂದು ಹೇಳಿ ನೋಡಾ?
ಆಪ್ಟಿಕಲ್ ಇಲ್ಯೂಷನ್ ಹಾಗೂ ಬ್ರೈನ್ ಟೀಸರ್‌ನಂತಹ ಒಗಟಿನ ಚಿತ್ರಗಳು ಬಿಡುವಿನ ಸಮಯದಲ್ಲಿ ಟೈಮ್ ಪಾಸ್‌ಗಾಗಿ ಇರುವುದು ಮಾತ್ರವಲ್ಲ, ಇದು ಮೆದುಳಿಗೆ ವ್ಯಾಯಾಮ ನೀಡುತ್ತದೆ. ನಿಮ್ಮ ಬುದ್ಧಿವಂತಿಕೆ ಹಾಗೂ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸುತ್ತದೆ. ಆದರೆ ಇದೀಗ ಇಲ್ಲೊಂದು ಇಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಮರದ ಕೊಂಬೆಯ ಮೇಲೆ ಎಷ್ಟು ಪಕ್ಷಿಗಳು ಕುಳಿತಿವೆ ಎಂದು ಹೇಳುವ ಸವಾಲನ್ನು ನೀಡಲಾಗಿದೆ.

ಬಿಡುವುದು ಸಿಕ್ಕಾಗಲೆಲ್ಲಾ ಕೆಲವರು ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ಈ ಒಗಟನ್ನು ಬಿಡಿಸುವ ಆಸಕ್ತಿಯಿರುವವರಿಂದ ಇದರಲ್ಲಿ ಸಿಗುವ ಮಜಾನೇ ಬೇರೆ. ಆದರೆ ಎಷ್ಟೋ ಸಲ ಈ ಚಿತ್ರಗಳು ಭ್ರಮೆಯಲ್ಲಿ ಸಿಲುಕಿಸಲು ಬಹುದು. ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿನ ಉತ್ತರವನ್ನು ಕಂಡುಹಿಡಿಯಲು ಕೆಲವರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಸಲೀಸಾಗಿ ಇವುಗಳನ್ನು ಬಿಡಿಸಿ ಉತ್ತರ ಕಂಡುಕೊಳ್ಳುತ್ತಾರೆ. ಆದರೆ ಇದೀಗ ಇಂತಹದೊಂದು ಚಿತ್ರ ವೈರಲ್ ಆಗಿದ್ದು, ಮರದ ಕೊಂಬೆಯ ಮೇಲೆ ಕುಳಿತಿರುವ ಪಕ್ಷಿಗಳೆಷ್ಟು ಎಂದು ನೀವು ಹೇಳಬೇಕು. ಹಾಗಾದ್ರೆ ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧವಿದ್ದೀರಾ?
ಈ ಚಿತ್ರದಲ್ಲಿ ಏನಿದೆ?
r/Awwdcational ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುತ್ತದೆ. ಈ ಚಿತ್ರದಲ್ಲಿ ಮರದ ಕೊಂಬೆಯ ಮೇಲೆ ಸಾಲಾಗಿ ಒಂದಕ್ಕೊಂದು ಅಂಟಿಕೊಂಡು ಹಕ್ಕಿಗಳು ಕುಳಿತಿದೆ. ಹೀಗಾಗಿ ನೀವು ಈ ಮರದ ಕೊಂಬೆಯ ಮೇಲೆ ಎಷ್ಟು ಪಕ್ಷಿಗಳು ಕುಳಿತುಕೊಂಡಿವೆ ಎಂದು ಹೇಳಬೇಕು. ಈ ಚಿತ್ರವೂ ನಿಮ್ಮ ಕಣ್ಣನ್ನು ಒಂದು ಕ್ಷಣ ಮೋಸಗೊಳಿಸಬಹುದು. ಇಲ್ಲಿ ಪಕ್ಷಿಗಳ ಗುಂಪೊಂದು ನಿಮ್ಮ ಕಣ್ಣಿಗೆ ಬೀಳಬಹುದು. ಆದರೆ ನೀವು ನೋಡುವುದಕ್ಕಿಂತ ಈ ಒಗಟು ಹೆಚ್ಚು ಜಟಿಲವಾಗಿದೆ. ಹೀಗಾಗಿ ಪೂರ್ಣ ಗಮನವನ್ನು ಈ ಚಿತ್ರದತ್ತ ಕೇಂದ್ರೀಕರಿಸಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
European bee eaters are richly colored birds native to Europe, western Asia and Africa. They usually live in colonies and prefer to have close contact with each other, often huddling together on a common perch in groups like this for comfort and warmth. byu/SingaporeCrabby inAwwducational
ಸವಾಲನ್ನು ಸ್ವೀಕರಿಸಿದ್ದೀರಾ?
ಈ ಚಿತ್ರದಲ್ಲಿ ಮರದ ಕೊಂಬೆಯ ಮೇಲೆ ಕುಳಿತಿರುವ ಪಕ್ಷಿಗಳೆಷ್ಟು ಎಂದು ಕಂಡುಹಿಡಿಯುವ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ದೀರಾ. ಕೆಲವೊಮ್ಮೆ ಇಂತಹ ಒಗಟನ್ನು ಬಿಡಿಸುವಾಗ ಎಚ್ಚರಿಕೆಯಿಂದ ನೋಡುವುದು ಮುಖ್ಯ. ನೀವು ನಿಮ್ಮ ಗಮನವನ್ನು ಮೊನಚಾದ ಬಾಲಗಳು ಮತ್ತು ಸಣ್ಣ ತಲೆಗಳ ಮೇಲೆ ಕೇಂದ್ರೀಕರಿಸಿ. ಸ್ವಲ್ಪ ತಾಳ್ಮೆ ಮತ್ತು ತೀಕ್ಷ್ಣವಾದ ವೀಕ್ಷಣೆಯಿಂದ ಉತ್ತರ ಸ್ಪಷ್ಟವಾಗಿ ನಿಮಗೆ ಸಿಗಲು ಸಾಧ್ಯ.
ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಅಡಗಿರುವ ಬೆಕ್ಕುಗಳೆಷ್ಟು? ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ?
ಉತ್ತರ ಇಲ್ಲಿದೆ
ಮರದ ಕೊಂಬೆಯ ಮೇಲೆ ಕುಳಿತಿರುವ ಪಕ್ಷಿಗಳು ಎಷ್ಟು ಎಂದು ಪತ್ತೆ ಹಚ್ಚಿ ಸರಿಯಾದ ಉತ್ತರ ಹೇಳಿದ್ದರೆ ನಿಮಗೆ ಅಭಿನಂದನೆಗಳು. ನಿಮ್ಮ ವೀಕ್ಷಣಾ ಕೌಶಲ್ಯ ಉತ್ತಮವಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಿ. ಎಷ್ಟೇ ಪ್ರಯತ್ನಪಟ್ಟರೂ ನಿಮಗೆ ಸರಿಯಾದ ಉತ್ತರವನ್ನು ಹೇಳಲು ಆಗುತ್ತಿಲ್ಲವೇ, ಹೆಚ್ಚು ಚಿಂತಿಸಬೇಡಿ, ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಈ ಮರದ ಕೊಂಬೆಯ ಮೇಲೆ ಒಂಬತ್ತು ಪಕ್ಷಿಗಳು ಸಾಲಾಗಿ ಒಂದಕ್ಕೊಂದು ಅಂಟಿಕೊಂಡು ಕುಳಿತಿವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:53 am, Wed, 30 July 25








