Video: ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ವರ್ಷದಲ್ಲಿ 2 ಬಾರಿ ಅಮೆರಿಕದಿಂದ ಬೆಂಗಳೂರಿಗೆ ಬರುವ ವಿದೇಶಿ ಉದ್ಯಮಿ
ಬೆಂಗಳೂರಿನಲ್ಲಿ ಬೇರೆ ಬೇರೆ ಜಿಲ್ಲೆಯ ಹಾಗೂ ರಾಜ್ಯ, ದೇಶಗಳ ಆಹಾರ ಸಿಗುತ್ತದೆ. ಅದಕ್ಕೆ ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆಯಿಂದ ಬಂದ ಜನ ಇಲ್ಲಿ ತಮ್ಮ ಊರಿನ ಆಹಾರವನ್ನು ಸವಿಯಲು ಬಯಸುತ್ತಾರೆ. ಅದರಲ್ಲೂ ಬೆಂಗಳೂರಿನಲ್ಲಿ ಮಂಗಳೂರು ಹಾಗೂ ಉತ್ತರ ಕರ್ನಾಟಕದ ಆಹಾರವನ್ನು ಸವಿಯಲು ಬಯಸುವುದೇ ಹೆಚ್ಚು. ಯಾಕೆಂದರೆ ಅಲ್ಲಿನ ಆಹಾರಗಳು ಆರೋಗ್ಯಕರ ಹಾಗೂ ರುಚಿಯಾಗಿರುತ್ತದೆ. ಇದೀಗ ಇಲ್ಲೊಬ್ಬ ವಿದೇಶಿ ಉದ್ಯಮಿ ಉತ್ತರ ಕರ್ನಾಟಕದ ಆಹಾರ ಸವಿದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲಾ ರೀತಿ ಆಹಾರಗಳು ಸಿಗುತ್ತದೆ. ಮಂಗಳೂರಿನ ಊಟ, ಉತ್ತರ ಕರ್ನಾಟಕದ ಊಟ, ಬೇರೆ ಬೇರೆ ರಾಜ್ಯದ, ಹಾಗೂ ವಿದೇಶದ ಊಟಗಳು ಕೂಡ ಬೆಂಗಳೂರಿನಲ್ಲಿ ಸಿಗುತ್ತದೆ. ಬೆಂಗಳೂರು ಎಲ್ಲರನ್ನೂ ಒಪ್ಪಿಕೊಂಡಿದೆ, ಎಲ್ಲವನ್ನು ಅಪ್ಪಿಕೊಂಡಿದೆ. ಅದಕ್ಕೆ ಬೆಂಗಳೂರು ಅನೇಕರಿಗೆ ಜೀವನ ಕಟ್ಟಿಕೊಟ್ಟ ಊರು. ಇದೀಗ ಅಮೆರಿಕದ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟವನ್ನು ಸವಿದು, ಉತ್ತಮ ಹಾಗೂ ರುಚಿಕರ ಊಟ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜನಪ್ರಿಯ ಅಮೇರಿಕನದ ಉದ್ಯಮಿ ಬ್ರೆಟ್ ಮುಲ್ಲರ್ ಅವರು ಬೆಂಗಳೂರಿನ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನಲ್ಲಿ ಜೋಳದ ರೊಟ್ಟಿ (Jolada Rotti) ಊಟದ ರುಚಿ ನೋಡಿದ್ದಾರೆ. ಜನಪ್ರಿಯ ಆಹಾರ ವಾಹಿನಿ ಬೆಂಗಳೂರು ಸರ್ವ್ಡ್ ವಿಡಿಯೋವೊಂದನ್ನು ಹಂಚಿಕೊಂಡಿದೆ.
ಈ ವಿಡಿಯೋದಲ್ಲಿ ಬ್ರೆಟ್ ಮುಲ್ಲರ್ ಬಸವನಗುಡಿಯಲ್ಲಿರುವ ಕಾಮತ್ ಹೋಟೆಲ್ನಲ್ಲಿ ಸಾಂಪ್ರದಾಯಿಕ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟ ಸವಿಯುವುದನ್ನು ಕಾಣಬಹುದು. ಬ್ರೆಟ್ ಮುಲ್ಲರ್ ಇಲ್ಲಿನ ಊಟದ ವೈವಿಧ್ಯತೆ ಮತ್ತು ತಾಜಾತನವನ್ನು ಶ್ಲಾಘಿಸಿದ್ದಾರೆ. ನಾನು ಮೊದಲು 2014 ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಶಿಫಾರಸಿನ ಮೇರೆಗೆ ಇಲ್ಲಿಗೆ ಬಂದೆ. ಆಗ ನಾನು ನಗರಕ್ಕೆ ಹೊಸಬನಾಗಿದ್ದೆ. ಅನೇಕ ಅನುಭವಗಳನ್ನು ಇಲ್ಲಿ ಪಡೆದುಕೊಂಡಿದ್ದೇನೆ. ಹಾಗಾಗಿ ಈ ಹೋಟೆಲ್ನ ತಟ್ಟೆ ತಾಜಾ ತರಕಾರಿಗಳು, ಗರಿಗರಿಯಾದ ಸಲಾಡ್‌ಗಳು ಮತ್ತು ರೋಮಾಂಚಕ ಸುವಾಸನೆಗಳಿಂದ ತುಂಬಿದೆ. ಜೋಳದ ರೊಟ್ಟಿಯ ಮೇಲೆ ಕರಗುವ ಬೆಣ್ಣೆ ಅದ್ಭುತವಾಗಿದೆ, ವಿಶೇಷವಾಗಿ ಬದನೆಕಾಯಿ ಕರಿ ಇನ್ನು ಅದ್ಭುತವಾಗಿದೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
California Burrito CEO x Jolad Rotti Meals pic.twitter.com/eFlhLCsjqX
— Season Flake 🌊⚓️ (@seasonflaketopg) July 29, 2025
ಇವರು ಒಬ್ಬ ಉದ್ಯಮಿಯಾಗಿದ್ದರು, ಗ್ರಾಮೀಣ ಭಾಗದ ಊಟದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಜೋಳದ ರೊಟ್ಟಿ ಊಟವನ್ನು ಸವಿಯಲು ವರ್ಷಕ್ಕೆ ಎರಡು ಮೂರು ಬಾರಿ ಬಸವನಗುಡಿಗೆ ವಿಶೇಷ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಬೆಂಗಳೂರಿನಾದ್ಯಂತ ಇದೇ ರೀತಿಯ ಆಹಾರವನ್ನು ನೀಡುವ ಹಲವಾರು ಸ್ಥಳಗಳಿವೆ, ಆದರೆ ಇದು ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಇದು ಅತ್ಯುತ್ತಮವಾಗಿದೆ. ಇಂತಹ ಊಟವನ್ನು ತಿಂದ ನಂತರ, ಜಿಮ್‌ಗೆ ಹೋಗುವುದು ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ನಾವು ಸಾಮಾನ್ಯವಾಗಿ ಇಂತಹ ಆಹಾರಕ್ಕಿಂತ ವೈವಿಧ್ಯತೆ ಕೂಡಿದ ಆಹಾರಗಳ ಬಗ್ಗೆ ಹೆಚ್ಚು ಒಲವು ತೋರಿಸುತ್ತೇವೆ. ಆದರೆ ಮಜ್ಜಿಗೆ, ವಿಶೇಷ ತರಕಾರಿಗಳು ಆರೋಗ್ಯಕರ, ಹೊಟ್ಟೆ ತುಂಬಿಸುವ ಮತ್ತು ರುಚಿಕರವಾಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮದ್ವೆ ಆದವರಿಗಿಂತ ಸಿಂಗಲ್ ಆಗಿರೋರೆ ಖುಷಿಯಾಗಿರೋದಂತೆ, ಇದಕ್ಕೆ ಸಾಕ್ಷಿ ಈ ದೃಶ್ಯ
ಇನ್ನು ಬೆಂಗಳೂರಿನಲ್ಲಿ ಬ್ರೆಟ್ ಮುಲ್ಲರ್ ಆಟೋದಲ್ಲಿ ಪಯಣ ಮಾಡುತ್ತಾರೆ. ಈ ಬಗ್ಗೆಯೂ ಹಂಚಿಕೊಂಡಿದ್ದಾರೆ. ಮುಲ್ಲರ್ 2012 ರಲ್ಲಿ 22 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ತೆರಳಿದರು ಮತ್ತು ನಗರದಲ್ಲಿ ಮೊದಲ ಕ್ಯಾಲಿಫೋರ್ನಿಯಾ ಬುರ್ರಿಟೋ ಔಟ್ಲೆಟ್ ತೆರೆಯಲಾಗಿತ್ತು. ಇದೀಗ ಭಾರತದಾದ್ಯಂತ 100 ಕ್ಕೂ ಹೆಚ್ಚು ಔಟ್ಲೆಟ್ಗಳನ್ನು ಹೊಂದಿದೆ. ಇದು ಕಳೆದ ವರ್ಷ $23 ಮಿಲಿಯನ್ (₹1,99,63,64,879 ) ಆದಾಯವನ್ನು ಗಳಿಸಿದೆ. ಇನ್ನು ಇದು ಕೊರೊನಾ ಸಮಯದಲ್ಲಿ ಭಾರೀ ನಷ್ಟವನ್ನು ಅನುಭವವನ್ನು ಅನುಭವಿಸಿತ್ತು. ಆ ಕಾರಣ 37 ಅಂಗಡಿಗಳಲ್ಲಿ 19 ಅಂಗಡಿಗಳನ್ನು ಮುಚ್ಚಿತು. ಆದರೆ ಬ್ರ್ಯಾಂಡ್ ಮತ್ತೆ ಹೆಸರು ಮಾಡಲು ಶುರು ಮಾಡಿತ್ತು. 2021 ರಲ್ಲಿ ಭಾರೀ ಪ್ರಚಾರವನ್ನು ಪಡೆಯಿತು. 100 ರೂ ಮೆನು ಅಭಿಯಾನವನ್ನು ಪ್ರಾರಂಭಿಸಿತು, ಇದು ಭಾರಿ ಯಶಸ್ಸನ್ನು ಕಂಡಿತ್ತು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








