Viral: ಮಕ್ಕಳು, ಮನೆ, ಗಂಡ, ಕೆಲಸ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಮಹಿಳೆಗೆ ಕೆಲಸ ನೀಡಲು ನಿರಾಕರಿಸಿದ ಕಂಪನಿ
ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಸರಿದೂಗಿಸುವುದು ತುಂಬಾ ಕಷ್ಟ ಎಂಬುದನ್ನು ಕಂಪನಿಯೇ ನಿರ್ಧರಿಸುವ ಕೆಲಸವನ್ನು ಮಾಡುತ್ತಿದೆ, ಆದರೆ ಕೆಲಸ ಮಾಡುವುದು ಮಹಿಳೆಯರಿಗೆ ತುಂಬಾ ಅನಿವಾರ್ಯವಾಗಿದೆ. ಕಂಪನಿಯೊಂದು ವೃತ್ತಿ ಜೀವನದ ಹೊರೆಯ ಜತೆಗೆ ವೈಯಕ್ತಿಕ ಬದುಕನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಮಹಿಳೆಯೊಬ್ಬರಿಗೆ ಕೆಲಸ ನೀಡಲು ಕಂಪನಿಯೊಂದು ನಿರಾಕರಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೇ ಹಂಚಿಕೊಂಡಿದ್ದಾರೆ.

ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ (Diversity & Inclusion) ಇದನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂಬುದನ್ನು ಮೊದಲು ಕಲಿಯಬೇಕು. ಅದರಲ್ಲೂ ಕೆಲಸಕ್ಕೆ ಹೋಗುವ ಹೆಣ್ಮಕ್ಕಳಿಗೆ ಈ ವಿಚಾರ ತಿಳಿದಿರಲೇಬೇಕು. ಅದೆಷ್ಟೋ ಪ್ರತಿಭಾವಂತ ಮಹಿಳೆಯರು ಈ ಕಾರಣಕ್ಕಾಗಿ ತಮ್ಮ ವೃತ್ತಿ ಜೀವನವನ್ನು ಬಿಟ್ಟು, ಮಕ್ಕಳು, ಮನೆಗಾಗಿ ಸೇವೆ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಈಗ ಕಂಪನಿಗಳೇ ಮದುವೆಯಾದ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಕೆಲವೊಂದು ವಿಚಾರಗಳನ್ನು ಗಮನಿಸುತ್ತಾರೆ. ಇಂತಹದೇ ಒಂದು ಘಟನೆ ನಡೆದಿದೆ. ಈ ಬಗ್ಗೆ ಮಹಿಳೆಯೊಬ್ಬರು ಮದುವೆಯ ನಂತರ ಕೆಲಸ ಪಡೆಯುವುದು ಎಷ್ಟು ಕಷ್ಟ ಎಂಬುದನ್ನು ಲಿಂಕ್ಡ್ಇನ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಪಡೆಯಲು ಸಂದರ್ಶನವೊಂದು ನೀಡಿದರು. ಈ ವೇಳೆ ಸಂದರ್ಶದಲ್ಲಿ ಅವರಿಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
ಚಿಕ್ಕ ಚಿಕ್ಕ ಮಕ್ಕಳಿರುವುದರಿಂದ ಮಾರ್ಕೆಂಟಿಗ್ನ ಮುಖ್ಯ ಅಧಿಕಾರಿ ಕೆಲಸವನ್ನು ಕಂಪನಿ ತಿರಸ್ಕರಿಸಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಂದರ್ಶನದ ನಡೆಸಿದ ನಂತರ ಕಂಪನಿಯ ಎಚ್ಆರ್ ಜತೆಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ನನ್ನನ್ನೂ ತಿರಸ್ಕರಿಸಲು ಪ್ರಮುಖ ಕಾರಣ ನನಗೆ ಚಿಕ್ಕ ಚಿಕ್ಕ ಮಕ್ಕಳಿದೆ ಎಂದು ಇಲ್ಲಿ ತಿಳಿಸಿದ್ದಾರೆ. ಸಂದರ್ಶನದ ವೇಳೆ 14 ನಿಮಿಷಗಳ ಕಾಲ ನನ್ನ 11 ವರ್ಷಗಳ ವೃತ್ತಿಜೀವನದ ಬಗ್ಗೆ ಕೇಳಿದ್ದಾರೆ. ನಂತರದ ಮೂರು ನಿಮಿಷ ವೈಯಕ್ತಿಕ ವಿಚಾರದ ಬಗ್ಗೆ ಕೇಳಿದ್ದಾರೆ. ಈ ವೇಳೆ ನಾನು ಮಕ್ಕಳು, ಗಂಡನ ಬಗ್ಗೆ ಹೇಳಿದ್ದೇನೆ. 14 ನಿಮಿಷಗಳ ಸಂದರ್ಶನವು ತನಗೆ ಹೇಗೆ ಆಶ್ಚರ್ಯ ಮತ್ತು ನಿರಾಶೆಯನ್ನುಂಟು ಮಾಡಿತು ಎಂದು ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
ಇದನ್ನೂ ಓದಿ: ನನ್ನ ಮೊದಲ ಸಂಬಳ 5000 ರೂ, ಇದೀಗ ವಾರ್ಷಿಕ ಸಂಬಳ 46 ಲಕ್ಷ ರೂ, ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
ಇನ್ನು ಈ ಕಂಪನಿ ವೃತ್ತಿಪರ ಸಾಧನೆಗಳ ಬಗ್ಗೆ ಕೇಳುವ ಬದಲು, ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವಂತೆ ತೋರುತ್ತಿತ್ತು. ಈ ಮಹಿಳೆ ಹೇಳಿರುವ ಪ್ರಕಾರ, ಸಂದರ್ಶನದಲ್ಲಿ ಕುಟುಂಬ ಸದಸ್ಯರ ಸಂಖ್ಯೆ ಎಷ್ಟು, ಮಕ್ಕಳ ವಯಸ್ಸು, ಅವರು ಯಾವ ಶಾಲೆಗೆ ಹೋಗುತ್ತಿದ್ದಾರೆ. ನೀವು ಇಲ್ಲದಾಗ ಯಾರು ನೋಡಿಕೊಳ್ಳುತ್ತಾರೆ. ಕೆಲಸಕ್ಕೆ ಹೇಗೆ ಬರುತ್ತಿರಾ? ಗಂಡ ಕೆಲಸ, ಹೀಗೆ ಅನೇಕ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಈ ಸಂದರ್ಶನದಲ್ಲಿ ನನ್ನ ಆದಾಯ, ನಾನು ಕೆಲಸ ಮಾಡಿದ ಕೆಲಸದ ಸ್ಥಳ, ನನ್ನ ಸಾಧನೆಗಳು, ನನ್ನ ವೈಫಲ್ಯಗಳು, ನಾನು ಕೆಲಸ ಮಾಡಿದ ಸವಾಲಿನ ಯೋಜನೆಗಳು ಅಥವಾ ನಾನು ಇದುವರೆಗೆ ಮಾಡಿದ ಅದ್ಭುತ ಕೆಲಸದ ಬಗ್ಗೆ ಯಾವುದೇ ಪ್ರಶ್ನೆಗಳು ಇರಲಿಲ್ಲ. ಈ ವೇಳೆಯೇ ಈ ಕೆಲಸ ನನಗೆ ಸಿಗುವುದಿಲ್ಲ ಎಂದು ಸ್ಪಷ್ಟವಾಗಿತ್ತು. ಮರುದಿನ ಆ ಕಂಪನಿಯ HR ಕರೆ ಮಾಡಿ, ನಿಮ್ಮನ್ನು ತಿರಸ್ಕಾರ ಮಾಡಲಾಗಿದೆ. ಈ ತಿರಸ್ಕಾರಕ್ಕೆ ನಿಮ್ಮ ಮಕ್ಕಳು ಚಿಕ್ಕವರು ಎಂದು ಹೇಳಿದರು. ಇದು ನನ್ನ ಒಬ್ಬಳ ಕಥೆ ಅಲ್ಲ ಎಷ್ಟೋ ಜನ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Wed, 30 July 25








