Video: ಯುವತಿಯರನ್ನು ಹಿಂಬಾಲಿಸಿಕೊಂಡು ಬಂದ ಪುಂಡರ ಗುಂಪು, ಬೆಂಗಳೂರು ಎಷ್ಟು ಸೇಫ್ ಎಂದ ಯುವತಿಯರು
ಕಾಲ ಕೆಟ್ಟೋಗಿದೆ, ಹೀಗಾಗಿ ಯಾರನ್ನು ನಂಬುವ ಹಾಗೆ ಇಲ್ಲ, ಉದ್ಯೋಗ ಹಾಗೂ ಓದಿಗಾಗಿ ಹುಟ್ಟೂರು ಬಿಟ್ಟು ದೂರದ ಊರುಗಳಿಗೆ ತೆರಳುವ ಹೆಣ್ಣು ಮಕ್ಕಳಂತೂ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಹೌದು, ಈ ಮೂವರು ಯುವತಿಯರಿಗೆ ಬೆಂಗಳೂರಿನಲ್ಲಿ ಕಹಿ ಅನುಭವವಾಗಿದೆ. ಸ್ವತಃ ಈ ಯುವತಿಯರೇ ಘಟನೆಯ ಬಗ್ಗೆ ವಿವರಿಸಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 29: ಎಷ್ಟೇ ಆಧುನಿಕತೆಗೆ ಒಗ್ಗಿಕೊಂಡಿದ್ದರೂ ಹೆತ್ತವರು ತಮ್ಮ ಮಗಳನ್ನು ದೂರದ ಊರಿಗೆ ಉದ್ಯೋಗಕ್ಕೆಂದು ಕಳುಹಿಸುವಾಗ ಸಣ್ಣದೊಂದು ಭಯ ಇದ್ದೆ ಇರುತ್ತದೆ. ಇದಕ್ಕೆ ಕಾರಣ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಿರುವುದು. ನಮ್ಮ ಸುತ್ತಮುತ್ತಲಿನ ನಡೆಯುವ ಅದೆಷ್ಟೋ ಘಟನೆಗಳು ಸಾಕ್ಷಿಯಾಗಿದೆ. ಇದೀಗ ಬೆಂಗಳೂರಿನಲ್ಲಿ (Bengaluru) ಮೂವರು ಪುಂಡರ ಗುಂಪೊಂದು ಯುವತಿಯರನ್ನು ಹಿಂಬಾಲಿಸುತ್ತಿರುವ ವಿಡಿಯೋವನ್ನು ಯುವತಿಯೊಬ್ಬಳು ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ.
ಹೌದು, ಬೆಂಗಳೂರಿನ ರಾಮೇಶ್ವರಂ ಕೆಫೆ ಬಳಿ ಮೂವರು ಯುವತಿಯರು ತಿಂಡಿ ತಿನ್ನಲು ಹೋಗಿದ್ದ ವೇಳೆ ಅಲ್ಲಿಯೇ ಇದ್ದ ಮೂವರು ಪುಂಡರು ಇವರನ್ನು ಹಿಂಬಾಲಿಸಿದ್ದಾರೆ. ಈ ವೇಳೆಯಲ್ಲಿ ಈ ಮೂವರಲ್ಲಿ ಒಬ್ಬಾಕೆ ಇವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಹೌದು, suha_hana88 ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಯುವತಿಯೊಬ್ಬಳು ಬೆಂಗಳೂರಿನಲ್ಲಿ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋದೊಂದಿಗೆ ಈ ಕೆಟ್ಟ ಅನುಭವದಿಂದಾಗಿ ತಮಗೆ ಭೂಮಿ “ನಡುಗಿದ, ಭಯನಕ ಅನುಭವವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಮೂವರು ಯುವತಿಯರು ಬೆಂಗಳೂರಿನ ರಾಮೇಶ್ವರಂ ಕೆಫೆ ಬಳಿ ಮೂವರು ಯುವತಿಯರು ತಿಂಡಿ ತಿನ್ನಲು ಹೋಗಿದ್ದಾರೆ. ಈ ವೇಳೆಯಲ್ಲಿ ಅಲ್ಲೇ ಇದ್ದ ಮೂವರು ವ್ಯಕ್ತಿಗಳು ಇವರನ್ನು ಹಿಂಬಾಲಿಸಿದ್ದಾರೆ. ಪ್ರಾರಂಭದಲ್ಲಿ ಈ ಬಗ್ಗೆ ಈ ಯುವತಿಯರಿಗೆ ಗಮನಕ್ಕೆ ಬರದಿರುವುದನ್ನು ನೀವಿಲ್ಲಿ ನೋಡಬಹುದು.
ಅಲ್ಲಿಂದ ಹೊರಟ ಬಳಿಕವೂ ಈ ಗ್ಯಾಂಗ್ ಕಾರಿನಲ್ಲಿ ಯುವತಿಯರನ್ನು ಹಿಂಬಾಲಿಸಿದೆ. ಕೆಲಕ್ಷಣದವರೆಗೂ ಯುವತಿಯರಿಗೆ ಇದು ಗಮನಕ್ಕೆ ಬಂದಿರಲಿಲ್ಲ. ಆದರೆ ಆಟೋ ಬುಕ್ ಮಾಡಿಕೊಂಡು ತಮ್ಮ ಪಿಜಿಗೆ ತೆರಳುತ್ತಿದ್ದ ವೇಳೆಯಲ್ಲಿ ಮತ್ತೆ ಅದೇ ವ್ಯಕ್ತಿಗಳು ಕಾರಿನಲ್ಲಿ ತಮ್ಮನ್ನು ಹಿಂಬಾಲಿಸುವುದನ್ನು ನೋಡಿದ್ದಾರೆ. ಈ ವೇಳೆಯಲ್ಲಿ ಈ ಕಾರು ತಮ್ಮ ಆಟೋವನ್ನು ಹಿಂಬಾಲಿಸುತ್ತಿದೆ.
ಜೆಪಿ ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮನ್ನು ಹಿಂಬಾಲಿಸುವುದು ಪ್ರಾರಂಭವಾಗಿದ್ದು, ರಾಪಿಡೋ ಹತ್ತಿದ ಬಳಿಕವೂ ಇದು ಮುಂದುವರೆಯಿತು ಎಂದು ಯುವತಿಯೊಬ್ಬಳು ಹೇಳುತ್ತಾ ಈ ಬಗ್ಗೆ ವಿವರಿಸಿದ್ದಾಳೆ. ಈ ಕಹಿ ಅನುಭವವು ನಮ್ಮನ್ನು ಒಂದು ಕ್ಷಣ ಭಯಗೊಳ್ಳುವಂತೆ ಮಾಡಿದೆ. ಆಟೋ ಚಾಲಕನು ತಮಗೆ ಸಹಾಯ ಮಾಡಲು ಮುಂದಾಗಲಿಲ್ಲ ಎಂದಿದ್ದು, ಈ ವಿಡಿಯೋದ ಕೊನೆಗೆ ತಾವು ಸೇಫ್ ಆಗಿ ಪಿಜಿ ತಲುಪಿದೆವು ಎಂದು ಯುವತಿ ಹೇಳಿದ್ದಾಳೆ.
ಇದನ್ನೂ ಓದಿ: Viral: 7.3 ಕಿ.ಮೀ ಕ್ರಮಿಸಲು ನನಗೆ 73 ನಿಮಿಷಗಳು ಬೇಕೇ ಬೇಕು; ಇದು ನನ್ನ ದಿನನಿತ್ಯದ ಪಾಡು
ಈ ವಿಡಿಯೋವೂ ಹದಿನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನೀವು ಈ ಬಗ್ಗೆ ಪಬ್ಲಿಕ್ ಗೆ ಈ ಬಗ್ಗೆ ತಿಳಿಸಬೇಕಿತ್ತು, ಅವರು ಈ ಪುಂಡರಿಗೆ ಬುದ್ಧಿ ಕಲಿಸುತ್ತಿದ್ದರು ಎಂದಿದ್ದಾರೆ. ಇನ್ನೊಬ್ಬರು, ಹೆಣ್ಣು ಮಕ್ಕಳೇ, ಇಂತಹ ಸಂದರ್ಭದಲ್ಲಿ ದಯವಿಟ್ಟು ಆ ಪುಂಡರ ಕಾರಿನ ನಂಬರ್ ನ್ನು ಹಂಚಿಕೊಳ್ಳಲು ಹಿಂದೇಟು ಹಾಕಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಣ್ಣು ಮಕ್ಕಳಿಗೆ ಈ ಭಾರತವೂ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Tue, 29 July 25




