AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನನ್ನ ಮೊದಲ ಸಂಬಳ 5000 ರೂ, ಇದೀಗ ವಾರ್ಷಿಕ ಸಂಬಳ 46 ಲಕ್ಷ ರೂ, ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ

ಕೈತುಂಬಾ ಸಂಬಳ ಸಿಗುವ ಉದ್ಯೋಗ ಸಿಕ್ಕರೆ ಸಾಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಪಡೆದ ಡಿಗ್ರಿಗೆ ಸರಿಹೊಂದುವ ಕೆಲಸ ಸಿಗದೇ ಅನಿವಾರ್ಯ ಕಾರಣಕ್ಕೆ ಬೇರೆ ಉದ್ಯೋಗವನ್ನು ನೆಚ್ಚಿಕೊಂಡವರು ಅನೇಕರಿದ್ದಾರೆ. ಆದರೆ ಇಲ್ಲೊಬ್ಬ ಯುವಕನ ಸಂಬಳ ತಿಂಗಳ ಸಂಬಳ ಐದು ಸಾವಿರ ಮಾತ್ರವಾಗಿತ್ತು. ಆದರೆ ಇದೀಗ ವಾರ್ಷಿಕವಾಗಿ 46 ಲಕ್ಷ ರೂ.ಗಳ ಪ್ಯಾಕೇಜ್ ಪಡೆಯುವಷ್ಟರ ಮಟ್ಟಿಗೆ ಬೆಳೆಸಿದ್ದಾನೆ. ಈ ಕುರಿತಾದ ಪೋಸ್ಟ್‌ವೊಂದು ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral: ನನ್ನ ಮೊದಲ ಸಂಬಳ 5000 ರೂ, ಇದೀಗ ವಾರ್ಷಿಕ ಸಂಬಳ 46 ಲಕ್ಷ ರೂ, ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Jul 30, 2025 | 11:07 AM

Share

ಉದ್ಯೋಗ (job) ಎಲ್ಲರಿಗೂ ಕೂಡ ಅತ್ಯವಶ್ಯಕ. ಆದರೆ, ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯವಾಗಿ ಮಾಡುತ್ತಾರೆ. ಕೆಲವರು ತಾವು ಮಾಡುತ್ತಿರುವ ಕೆಲಸದಲ್ಲಿ ಎಷ್ಟೇ ಒತ್ತಡವಿದ್ದರೂ ಸರಿಯೇ, ಕಡಿಮೆ ಸಂಬಳ ಸಿಕ್ಕರೂ ಸರಿಯೇ, ಕೆಲಸ ಬಿಟ್ಟರೆ ಬೇರೆ ಉದ್ಯೋಗ ಸಿಗೋದು ಕಷ್ಟ ಎನ್ನುವ ಕಾರಣಕ್ಕೆ ಏನೇ ಆದರೂ ಆ ಉದ್ಯೋಗವನ್ನು ಮಾಡಿಕೊಂಡು ಹೋಗುತ್ತಾರೆ. ಆದರೆ ರೈತ ಕುಟುಂಬದಿಂದ ಬಂದು ಸದ್ಯಕ್ಕೆ ಬೆಂಗಳೂರಿನಲ್ಲಿ (Bengaluru) ಇಂಜಿನಿಯರಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಯುವಕನೊಬ್ಬನು ಪ್ರಾರಂಭದಲ್ಲಿ ಪಡೆಯುತ್ತಿದ್ದ ಸಂಬಳ 5000 ರೂ ಮಾತ್ರವಂತೆ. ಆದರೆ ಇದೀಗ 46 ಲಕ್ಷ ರೂ ವಾರ್ಷಿಕ ಸಂಬಳ ಪಡೆಯುತ್ತಿದ್ದಾನೆ. ಇಷ್ಟು ಸಂಬಳ ಪಡೆಯಲು ಆತನು ನಡೆಸಿದ ಹೋರಾಟದ ಹಾದಿ ಹೇಗಿತ್ತು ಎಂದು ವಿವರಿಸಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತನ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ದೃಢ ನಿಶ್ಚಯವನ್ನು ಮೆಚ್ಚಿಕೊಂಡಿದ್ದಾರೆ.

r/indian-flex ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವಕನೊಬ್ಬನು ತನ್ನ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸಿನ ಹಾದಿ ಹೇಗಿತ್ತು ಎಂದು ತಿಳಿಸಿದ್ದಾನೆ. ನನಗೆ ಈಗ 35 ವರ್ಷ. ತಿಂಗಳಿಗೆ 5,000 ರೂ ಸಂಬಳ ಪಡೆಯುತ್ತಿದ್ದೆ. ಈಗ ಅದೇ ಕಂಪನಿಯಲ್ಲಿ ವರ್ಷಕ್ಕೆ 46 ಲಕ್ಷ ರೂ ಸಂಬಳದ ಪ್ಯಾಕೇಜ್ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾನೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

35M | My First Salary Was ₹5,000. 10 Years Later, It’s 46 LPA – Here’s My Story. byu/dineshu07 inIndian_flex

ಇದನ್ನೂ ಓದಿ
Image
ಉತ್ತರ ಕರ್ನಾಟಕದ ರೊಟ್ಟಿ ಸವಿಯಲು ಅಮೆರಿಕದಿಂದ ಬೆಂಗಳೂರಿಗೆ ಬರುವ ಉದ್ಯಮಿ
Image
ಮದ್ವೆ ಆದವರಿಗಿಂತ ಸಿಂಗಲ್‌ ಆಗಿರೋರೆ ಖುಷಿಯಾಗಿರೋದಂತೆ
Image
ಮರಿ ಆನೆಗಳ ಕ್ಯೂಟ್​​​ ಚುಂಬನ
Image
ಯುವತಿಯರನ್ನು ಹಿಂಬಾಲಿಸಿಕೊಂಡು ಬಂದ ಪುಂಡರ ಗುಂಪು

ತಾನು ಬಡ ಕುಟುಂಬದಲ್ಲಿ ಜನಿಸಿದೆ. ಹೀಗಾಗಿ ದಿನಗೂಲಿ ಮಾಡಿ ನಮ್ಮನ್ನು ಸಾಕುತ್ತಿದ್ದರು. ಜೀವನವು ಕಷ್ಟಕರವಾಗಿತ್ತು. ಹೀಗಾಗಿ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದೆವು. ನನಗೆ ಏಳು ವರ್ಷವಿದ್ದಾಗ ನನ್ನ ಹೆತ್ತವರು ನನ್ನ ಹಾಗೂ ಅಣ್ಣನನ್ನು ಹಳ್ಳಿಯಲ್ಲಿ ಬಿಟ್ಟು ಬೆಂಗಳೂರಿಗೆ ಹೋದರು. ಹೀಗಾಗಿ ತಮ್ಮ ನನ್ನ ಬಾಲ್ಯವೆಲ್ಲವೂ ಹಳ್ಳಿಯಲ್ಲಿಯೇ ಕಳೆಯಿತು. ನನ್ನ ತಾಯಿ ಹಗಲಿನಲ್ಲಿ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿಯ ವೇಳೆ ಬಟ್ಟೆ ಹೊಲಿಯುತ್ತಿದ್ದರು. ಅವರ ಕೈಗಳು ಯಾವಾಗಲೂ ನಮ್ಮ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸುತ್ತಿದ್ದವು. ನನ್ನ ಅಜ್ಜಿ ನನ್ನನ್ನು ಹಾಗೂ ಅಣ್ಣನನ್ನು ಶಿಸ್ತಿನಿಂದ ಬೆಳೆಸಿದರು. ನಾವು ನಮ್ಮ ಹತ್ತನೇ ತರಗತಿ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಪೂರ್ಣಗೊಳಿಸಿದೆವು ಎಂದು ಇಲ್ಲಿ ತಿಳಿಸಿದ್ದಾನೆ.

ಉಚಿತ ಹಾಸ್ಟೆಲ್ ಮತ್ತು ಆಹಾರ ಸೌಲಭ್ಯ ಪಡೆಯಲು ಪಾಲಿಟೆಕ್ನಿಕ್‌ಗೆ ಪ್ರವೇಶ ಪಡೆದೆನು. ಬದುಕಿನಲ್ಲಿ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತುಕೊಂಡು ನಾನು ಕಾಲೇಜಿನಲ್ಲಿ ಅಗ್ರ ವಿದ್ಯಾರ್ಥಿಗಳಲ್ಲಿ ಒಬ್ಬನಾದೆ. ಪದವಿ ಪಡೆದ ನಂತರ, ನಾನು ತಿಂಗಳಿಗೆ ಕೇವಲ 5,000 ರೂ ಸಂಬಳದೊಂದಿಗೆ ಜೂನಿಯರ್ ವೆಬ್ ಡೆವಲಪರ್ ಆಗಿ ನನ್ನ ಮೊದಲ ಕೆಲಸವನ್ನು ಪಡೆದುಕೊಂಡೆ. ಆದರೆ ನನಗೆ ವೆಬ್ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇತ್ತು, ಇದು ಕೇವಲ ಆರಂಭ ಎಂದು ನನಗೆ ತಿಳಿದಿತ್ತು. ನಾನು ಗಮನಹರಿಸಿದೆ, ಕಲಿಯುತ್ತಲೇ ಇದ್ದೆ ಮತ್ತು ಪ್ರತಿಯೊಂದು ಸವಾಲನ್ನು ಸ್ವೀಕರಿಸಿದೆ ಎಂದು ಹೇಳಿದ್ದಾನೆ.

ಇಂದು, ನನಗೆ ತಂತ್ರಜ್ಞಾನ ಉದ್ಯಮದಲ್ಲಿ 10 ವರ್ಷಗಳಿಗೂ ಹೆಚ್ಚು ಅನುಭವವಿದೆ. ವರ್ಷಕ್ಕೆ 46 ಲಕ್ಷ ರೂ ಸಂಪಾದಿಸುತ್ತೇನೆ. ಇದರಿಂದ ನಾನು 5 ಎಕರೆ ಭೂಮಿಯನ್ನು ಖರೀದಿಸಲು, ನಮ್ಮ ಸ್ವಂತ ಮನೆಯನ್ನು ನಿರ್ಮಿಸಲು ಹಾಗೂ ಒಂದು ಕಾರನ್ನು ಸಹ ಖರೀದಿಸಲು ಸಾಧ್ಯವಾಯಿತು. ನಾನು ನನ್ನ ಬದುಕಿನ ಹಾದಿಯನ್ನು ಹಿಂತಿರುಗಿ ನೋಡಿದಾಗ, ಈ ಪ್ರಯಾಣ ಸುಲಭವಾಗಿರಲಿಲ್ಲ. ಆದರೆ ಪ್ರತಿಯೊಂದು ಹೋರಾಟವು ನನ್ನನ್ನು ಇಂದಿನ ಸ್ಥಿತಿಗೆ ರೂಪಿಸಿತು. ನಾನು ನನ್ನ ಕುಟುಂಬಕ್ಕೆ – ವಿಶೇಷವಾಗಿ ನನ್ನ ತಾಯಿ, ನನ್ನ ಅಜ್ಜಿ ಮತ್ತು ನನ್ನ ಸಹೋದರನಿಗೆ ಋಣಿಯಾಗಿದ್ದೇನೆ. ನನ್ನ ತಾಯಿಯ ತ್ಯಾಗಗಳು ನಾನು ನಿರ್ಮಿಸಿದ ಎಲ್ಲದಕ್ಕೂ ಅಡಿಪಾಯ. ಅವರು ಯಾವಾಗಲೂ ನನ್ನ ಶ್ರೇಷ್ಠ ನಾಯಕಿ ಎಂದು ತನ್ನ ಯಶಸ್ಸಿನ ಹಾದಿಯನ್ನು ಈ ರೀತಿ ವಿವರಿಸಿದ್ದಾನೆ.

ಇದನ್ನೂ ಓದಿ: Video: ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ವರ್ಷದಲ್ಲಿ 2 ಬಾರಿ ಅಮೆರಿಕದಿಂದ ಬೆಂಗಳೂರಿಗೆ ಬರುವ ವಿದೇಶಿ ಉದ್ಯಮಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಯುವಕನ ಯಶಸ್ಸಿನ ಹಾದಿಯನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ವಾಹ್, ನಿಮ್ಮ ಬದುಕಿನ ಹಾದಿ ಎಲ್ಲರಿಗೂ ಮಾದರಿ, ಅದ್ಭುತವಾಗಿದೆ. ಹೀಗೆ ಮುಂದುವರೆಯಿರಿ ಎಂದಿದ್ದಾರೆ. ಇನ್ನೊಬ್ಬರು, ಸ್ಫೂರ್ತಿದಾಯಕವಾಗಿದೆ. ನಾನು ಮಾಡಿದ ಕಾಮೆಂಟ್ ನೋಡಿ, ಯಶಸ್ಸಿಗಾಗಿ ಸಲಹೆ ನೀಡಿ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಅದ್ಭುತ ವ್ಯಕ್ತಿ, ನಿಮ್ಮ ಕುಟುಂಬಕ್ಕೆ ಈ ಎಲ್ಲವೂ ಸಲ್ಲಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:05 am, Wed, 30 July 25