Viral: ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ವ್ಯಕ್ತಿ, ಈತ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಹೆಚ್ಚಿನವರು ಒಬ್ಬ ವ್ಯಕ್ತಿಯನ್ನು ಆತನು ಧರಿಸುವ ಬಟ್ಟೆ ಹಾಗೂ ಆತನ ಬಳಿಯಿರುವ ಐಷಾರಾಮಿ ವಸ್ತುಗಳಿಂದ ಅಳೆದು ಬಿಡುತ್ತೇವೆ. ಮಾಸಿಕ ವಾಗಿ 60000 ರೂ ಸಂಪಾದಿಸುವ ಈ ವ್ಯಕ್ತಿಯೂ ಯಾವುದೇ ಕಂಪನಿಯಲ್ಲಿ ಉದ್ಯೋಗದಲಿಲ್ಲ. ಭಿಕ್ಷೆ ಬೇಡಿಯೇ ಆಸ್ತಿ ಹಾಗೂ ಕೋಟಿಗಟ್ಟಲೇ ಹಣವನ್ನು ಸಂಪಾದಿಸಿದ್ದಾರೆ. ಹೀಗಾಗಿ ಈ ವ್ಯಕ್ತಿಯನ್ನು ವಿಶ್ವದ ಶ್ರೀಮಂತ ಭಿಕ್ಷುಕ ಎನ್ನಲಾಗಿದೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಸ್ಟೋರಿ ಇಲ್ಲಿದೆ.

ಮುಂಬೈ, ಜುಲೈ 30: ಮಧ್ಯಮ ವರ್ಗ ಹಾಗೂ ಬಡವರ್ಗದ ಜನರಿಗೆ ದುಡಿದರೆ ಮಾತ್ರ ಜೀವನ ನಡೆಸಲು ಸಾಧ್ಯ. ಆದರೆ ಕೆಲವರು ಹಣ ಹಾಗೂ ಜೀವನ ನಿರ್ವಹಣೆಗಾಗಿ ಭಿಕ್ಷಾಟನೆಯತ್ತ ಮುಖ ಮಾಡುತ್ತಾರೆ. ಅಂತಹವರಲ್ಲಿ ಮುಂಬೈನ (Mumbai) ಭರತ್ ಜೈನ್ (Bharath Jain) ಕೂಡ ಒಬ್ಬರು.. ಅನಿವಾರ್ಯ ಕಾರಣಕ್ಕಾಗಿ ಭಿಕ್ಷೆ ಬೇಡಿ ಜೀವನ ಸಾಗಿಸಲು ಮುಂದಾದ ಈ ವ್ಯಕ್ತಿ ಇಂದು ಪ್ರಪಂಚದ ಶ್ರೀಮಂತ ಭಿಕ್ಷುಕ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ವ್ಯಕ್ತಿ ಭಿಕ್ಷೆ ಬೇಡಿ ಸಂಪಾದಿಸಿರುವ ಹಣ ಎಷ್ಟು? ಈತನ ಆಸ್ತಿಯ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
ಮುಂಬೈನ ಸಿಎಸ್‌ಟಿ ಮತ್ತು ಆಜಾದ್ ಮೈದಾನದ ಆಚೆ ಈಚೆಯ ಬೀದಿಗಳಲ್ಲಿ ತಟ್ಟೆ ಹಿಡಿದುಕೊಂಡು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ವ್ಯಕ್ತಿಯೇ ಭರತ್ ಜೈನ್. ಅರಕಲು ಬಟ್ಟೆ ತೊಟ್ಟು ಭಿಕ್ಷೆ ಬೇಡಿ ಶ್ರೀಮಂತ ವ್ಯಕ್ತಿಯಾಗಿರಲು ಸಾಧ್ಯನಾ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಹೌದು, ಕಳೆದ 40 ವರ್ಷಗಳಿಂದ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಭರತ್ ಜೈನ್ ದಿನಕ್ಕೆ 2000 ದಿಂದ 2500 ರೂ ಸಂಪಾದಿಸುತ್ತಾರೆ. ತಿಂಗಳ ಆದಾಯ ಸರಿಸುಮಾರು 60 ಸಾವಿರ ರೂಯಿಂದ 75 ಸಾವಿರ ರೂ ಆಗಿದೆಯಂತೆ.
ಹೌದು, ಭರತ್ ಜೈನ್ ಹುಟ್ಟಿನಿಂದಲೇ ಬಡತನವನ್ನು ಕಂಡವರು. ಹೀಗಾಗಿ ಶಾಲೆಯ ಮುಖವನ್ನು ಕಂಡವರು ಅಲ್ಲ. ಅವರ ಕುಟುಂಬವು ಜೀವನ ನಿರ್ವಹಣೆಗೆ ಹೆಣಗಾಡುತ್ತಿತ್ತು. ಈ ವೇಳೆಯಲ್ಲಿ ಮೂರೊತ್ತು ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಭಿಕ್ಷೆ ಬೇಡಲು ಮುಂದಾದರು. ತದನಂತರದಲ್ಲಿ ಭಿಕ್ಷೆ ಬೇಡುವುದನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral: ನನ್ನ ಮೊದಲ ಸಂಬಳ 5000 ರೂ, ಇದೀಗ ವಾರ್ಷಿಕ ಸಂಬಳ 46 ಲಕ್ಷ ರೂ, ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
ನಲವತ್ತು ವರ್ಷಗಳಿಂದ ಭಿಕ್ಷಾಟನೆಯನ್ನೇ ನಂಬಿಕೊಂಡಿರುವ ಭರತ್ ಜೈನ್ ಗಳಿಸಿರುವ ಆಸ್ತಿಯ ಮೊತ್ತ 7.5 ಕೋಟಿ ರೂ. ಮುಂಬೈನಲ್ಲಿ ಎರಡು ಪ್ಲಾಟ್ ಮಾಲೀಕನಾಗಿದ್ದು, ಈ ವ್ಯಕ್ತಿಯ ಮಕ್ಕಳಿಬ್ಬರೂ ಟಾಪ್ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಾರೆ ಎನ್ನಲಾಗಿದೆ. 1.4 ಕೋಟಿ ಮೌಲ್ಯದ ಪ್ಲಾಟ್‌ಯೊಂದಿಗೆ ಥಾಣೆಯಲ್ಲಿಯಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದು ಅದನ್ನು ಬಾಡಿಗೆ ನೀಡಿದ್ದಾರೆ. ಇದರಿಂದ ಪ್ರತಿ ತಿಂಗಳು 30,000 ರೂ ಗಳಿಸುತ್ತಾರೆ ಎನ್ನಲಾಗಿದೆ. ಚೆನ್ನಾಗಿ ಓದಿ ಒಂದೊಳ್ಳೆ ಉದ್ಯೋಗ ಪಡೆದುಕೊಂಡವರಿಗೆ ಈ ವ್ಯಕ್ತಿಯ ಆದಾಯ ಕಂಡು ಅಚ್ಚರಿಯಾಗೋದರಲ್ಲಿ ಸಂದೇಹವಿಲ್ಲ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








