Video: ಇದು ಕಲಿಯುವ ಹಂಬಲ: ಉದ್ಯಮಿ ರವಿಕಾಂತ್ ಪಾಡ್‌ಕ್ಯಾಸ್ಟ್ ನೋಡಿಕೊಂಡು ಆಟೋ ಓಡಿಸಿದ ಚಾಲಕ
ಬೆಂಗಳೂರಿನ ಆಟೋ ಚಾಲಕರು ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತಾರೆ. ಇದೀಗ ಆಟೋ ಚಾಲಕರೊಬ್ಬರು ಭಾರೀ ಸುದ್ದಿಯಾಗಿದ್ದಾರೆ. ಭಾರತೀಯ ಮೂಲದ ಉದ್ಯಮಿ ಮತ್ತು ಹೂಡಿಕೆದಾರ ನೇವಲ್ ರವಿಕಾಂತ್ ಅವರ ಪಾಡ್‌ಕ್ಯಾಸ್ಟ್‌ನ್ನು ಆಟೋದಲ್ಲಿ ಚಿಕ್ಕ ಪರದೆಯಲ್ಲಿ ನೋಡಿಕೊಂಡು ಚಾಲನೆ ಮಾಡಿರುವುದೇ ಸುದ್ದಿಯಲ್ಲಿರಲು ಮೂಲ ಕಾರಣ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಬೆಂಗಳೂರು ಆಟೋ ಚಾಲಕರು (auto rickshaw driver) ಒಂದಲ್ಲ ಒಂದು ವಿಚಾರವಾಗಿ ಸುದಿಯಲ್ಲಿರುತ್ತಾರೆ. ಒಟ್ಟಿನಲ್ಲಿ ಬೆಂಗಳೂರಿನ ಆಟೋ ಚಾಲಕರು ವೈರಲ್ ಆಗುವುದು ಹೊಸದೇನಲ್ಲ. ಇದೀಗ ಬೆಂಗಳೂರಿನ ಆಟೋ ರಿಕ್ಷಾ ಚಾಲಕನೊಬ್ಬರು ಭಾರತೀಯ ಮೂಲದ ಉದ್ಯಮಿ ಮತ್ತು ಹೂಡಿಕೆದಾರ ನೇವಲ್ ರವಿಕಾಂತ್ (Naval Ravikant) ಅವರ ಪಾಡ್‌ಕ್ಯಾಸ್ಟ್‌ನ್ನು ಸಂಚಾರದ ವೇಳೆ ವೀಕ್ಷಿಸುತ್ತಿರುವ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ನೋಡಿ ಅನೇಕರು ಸಾಮಾಜಿಕ ಜಾಲತಾಣ ಬಳಕೆದಾರರೂ ಇದು ಬೆಂಗಳೂರು ಎಂದು ಹೇಳಿದ್ದಾರೆ. ಈ ಪೋಸ್ಟ್ನ್ನು ಎಕ್ಸ್ ಖಾತೆಯಲ್ಲಿ ಪ್ರಿಯಾಂಶು ತನ್ವರ್ ಎಂಬುವವರು ಹಂಚಿಕೊಂಡಿದ್ದಾರೆ. ನಾನು ಸಂಜೆ ಆಫೀಸ್ನಿಂದ ಮನೆಗೆ ಬರುವಾಗ ತುಂಬಾ ತಡವಾಗಿತ್ತು. ಈ ವೇಳೆ ಒಂದು ಆಟೋ ಬುಕ್ ಮಾಡಿದೆ. ಈ ಆಟೋದಲ್ಲಿ ರವಿಕಾಂತ್ ಅವರ ಪಾಡ್‌ಕ್ಯಾಸ್ಟ್‌ನ್ನು ತಮ್ಮ ಆಟೋದಲ್ಲಿದ್ದ ಚಿಕ್ಕ ಪರದೆಯಲ್ಲಿ ಪ್ಲೇ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.
ಈ ಪೋಸ್ಟ್ ಹಂಚಿಕೊಳ್ಳುವುದರ ಜತೆಗೆ ಹೀಗೆ ಬರೆದುಕೊಂಡಿದ್ದಾರೆ “ಬೆಂಗಳೂರಿನಲ್ಲಿ ಇದಕ್ಕಿಂತ ಹೆಚ್ಚಿನ ಬೆಳವಣಿಗೆ ಏನು ಬೇಕು”. ಈ ಪೋಸ್ಟ್ ಅನೇಕರ ಗಮನ ಸೆಳೆದಿದೆ. ಆಟೋ ಚಾಲಕ ಬ್ಯುಸಿನೆಸ್ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸಕ್ತಿಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಉದ್ಯಮಶೀಲತೆ ಹಾಗೂ ಆಟೋದಲ್ಲಿ ಒಂದು ಕ್ಷಣವೂ ವ್ಯರ್ಥ ಮಾಡದೇ ಇದನ್ನು ತಾಳ್ಮೆಯಿಂದ ಕೇಳುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ನೀವು ಆಟೋ ರಿಕ್ಷಾ ಓಡಿಸುವಾಗ ನನ್ನ GOAT ನೇವಲ್ ಅನ್ನು ಕೇಳುತ್ತೀರಿ ಎಂಬುದು ಸ್ಪಷ್ಟ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಬೆಂಗಳೂರು ಟ್ರಾಫಿಕ್‌ನಲ್ಲಿ ನ್ಯಾವಿಗೇಟ್ ಮಾಡುವಾಗ ಪಾಡ್‌ಕಾಸ್ಟ್‌ಗಳನ್ನು ಆಲಿಸುವುದು, ಗರಿಷ್ಠ ಟ್ರಾಫಿಕ್‌ನಲ್ಲಿ ಗರಿಷ್ಠ ಉತ್ಪಾದಕತೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
It doesn’t get more peak bengaluru than this @peakbengaluru pic.twitter.com/D448sBJeC5
— Priyanshu Tanwar (@0xTanwar) August 3, 2025
ಇದನ್ನೂ ಓದಿ: Video: ಹಲ್ಲಿಯನ್ನು ಸಲೀಸಾಗಿ ಬರಿಗೈಯಲ್ಲಿ ಹಿಡಿದ ಪುಟಾಣಿ ತಂದೆ ಹತ್ರ ಏನ್ ಹೇಳಿದ್ಲು ನೋಡಿ
ಬೌದ್ಧಿಕ ಕುತೂಹಲ ಮತ್ತು ದೈನಂದಿನ ಅವ್ಯವಸ್ಥೆ ನಡುವೆ ತಾನು ಕಲಿಯಬೇಕು ಎಂಬ ಉದ್ದೇಶ ಒಳ್ಳೆಯದು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ನಾನು ಆಟೋದಲ್ಲಿ ಹೋಗುವಾಗ ಇಂತಹ ವಿಚಾರವನ್ನು ಗಮನಿಸಲೇ ಇಲ್ಲ. ಇದು ಒಳ್ಳೆಯ ಅಭ್ಯಾಸ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಈ ವಿಚಾರದಲ್ಲಿ ಆ ಚಾಲಕನ ಕುಟುಂಬ ತುಂಬಾ ಗೌರವವನ್ನು ಅವರಿಗೆ ನೀಡುತ್ತದೆ ಎಂದು ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








