Video: ಅತ್ತೆಯನ್ನು ನನ್ನಿಂದ ದೂರ ಮಾಡ್ತಿಯಾ ಎಂದು ಮಾವನನ್ನು ತರಾಟೆಗೆ ತೆಗೆದುಕೊಂಡ ಪುಟಾಣಿ
ಮಕ್ಕಳೇ ಹಾಗೆ, ತಮ್ಮನ್ನು ಹೆಚ್ಚಾಗಿ ಕಾಳಜಿ ವಹಿಸುವ ವ್ಯಕ್ತಿಗಳು ನಮ್ಮನ್ನು ಬಿಟ್ಟು ಎಲ್ಲದ್ರೂ ಹೊರಗಡೆ ಹೊರಟು ನಿಂತರೆ ತಾನು ಬರುತ್ತೇನೆ ಎಂದು ಹಠ ಹಿಡಿದು ಕುಳಿತುಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಪುಟಾಣಿಯೂ ತನ್ನ ಅತ್ತೆ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿದ್ದಂತೆ ತನ್ನ ಮಾವನಿಗೆ ಏನ್ ಮಾಡಿದ್ದಾನೆ ಗೊತ್ತಾ?. ಪುಟ್ಟ ಬಾಲಕನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಕ್ಕಳೆಂದ (kids) ಮೇಲೆ, ಎಲ್ಲರೂ ಮುದ್ದಿಸುತ್ತಾರೆ. ಅವಿಭಕ್ತ ಕುಟುಂಬವಾಗಿ ಬಿಟ್ಟರೆ ಮನೆಯಲ್ಲಿರುವ ಪುಟಾಣಿ ಮಕ್ಕಳನ್ನು ಎಲ್ಲರೂ ಕೂಡ ಅತಿಯಾಗಿ ಮುದ್ದು ಮಾಡುತ್ತಾರೆ. ಹೀಗಾಗಿ ಮನೆಯವರ ಪ್ರೀತಿ, ಕಾಳಜಿ ಆರೈಕೆಯಲ್ಲಿ ಬೆಳೆದ ಮಗುವು ಯಾರ ಪ್ರೀತಿಯಲ್ಲಿ ಕಡಿಮೆಯಾದರೆ ಸಹಿಸುವುದಿಲ್ಲ. ಬಾಲ್ಯದಿಂದ ಜೊತೆಗೆ ಇದ್ದ ವ್ಯಕ್ತಿಯೊಬ್ಬರು ಬೇರೆ ಊರಿಗೆ ಕೆಲಸಕ್ಕೊ, ಅಥವಾ ಹೆಣ್ಣು ಮಕ್ಕಳಾಗಿದ್ದರೆ ಮದುವೆಯಾಗಿ ಇನ್ನೊಂದು ಮನೆಗೆ ಹೋಗುವ ಸಂದರ್ಭ ಬಂದರೆ ಮಕ್ಕಳು ರಚ್ಚೆ ಹಿಡಿದು ಅಳುತ್ತಾರೆ. ಆದರೆ ಇಲ್ಲೊಂದು ಪುಟಾಣಿಯೂ ತನ್ನ ಮುದ್ದಿನ ಅತ್ತೆಗೆ (mother-in-law) ಮದುವೆಯಾಗಿದ್ದು, ಆಕೆಯ ಗಂಡನು ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಸಿದ್ಧನಾಗಿದ್ದಾನೆ. ಆದರೆ ಈ ಪುಟ್ಟ ಬಾಲಕನು ತನ್ನ ಅತ್ತೆಯನ್ನು ತನ್ನಿಂದ ದೂರ ಮಾಡುತ್ತಿದ್ದಾನೆ ಎಂದು ಭಾವಿಸಿ ಮಾವನಿಗೆ ಕೋಲಿನಿಂದ ಬಾರಿಸಿದ್ದಾನೆ. ನೋಡಲು ತಮಾಷೆಯಾಗಿರುವ ಈ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗು ಮೂಡಿಸಿದೆ.
arvhan6 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ತನ್ನನ್ನು ಮುದ್ದು ಮಾಡುವ ಅತ್ತೆಯನ್ನು ಕರೆದುಕೊಂಡು ಹೋಗುವುದನ್ನು ತಡೆಯಲು ತನ್ನ ಕೈಯಲ್ಲಿ ಆದನ್ನೆಲ್ಲಾ ಮಾಡಿದ್ದಾನೆ. ಈ ಪುಟ್ಟ ಬಾಲಕನಿಗೆ ಮದುವೆ ಅರ್ಥವೇ ತಿಳಿದಿಲ್ಲ. ಹೀಗಾಗಿ ಅತ್ತೆ ಮತ್ತೆ ತಮ್ಮ ಮನೆಗೆ ವಾಪಾಸ್ಸು ಬರಲ್ಲ ಎಂದುಕೊಂಡಿದ್ದಾನೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತನ್ನ ಮುದ್ದಿನ ಅತ್ತೆಗೆ ಮದುವೆಯಾಗಿದೆ. ಹೀಗಾಗಿ ಮಾವನು ಅತ್ತೆಯನ್ನು ತನ್ನ ಮನೆಗೆ ಹೋಗಲು ಸಿದ್ಧನಾಗಿದ್ದಾನೆ. ಆದರೆ ಈ ಪುಟ್ಟ ಬಾಲಕನಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೋಲು ಹಿಡಿದು ಮಾವನಿಗೆ ಹೊಡೆಯಲು ಮುಂದಾಗಿದ್ದಾನೆ. ಆ ಪುಟ್ಟ ಬಾಲಕನನ್ನು ಸಮಾಧಾನ ಪಡಿಸಲು ತಾಯಿಯೂ ಮುಂದಾಗಿದ್ದು, ಈ ಪುಟಾಣಿಯ ವರ್ತನೆಗೆ ಅಲ್ಲಿದ್ದವರೆಲ್ಲರೂ ಜೋರಾಗಿ ನಕ್ಕಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: Video: ಹಲ್ಲಿಯನ್ನು ಸಲೀಸಾಗಿ ಬರಿಗೈಯಲ್ಲಿ ಹಿಡಿದ ಪುಟಾಣಿ ತಂದೆ ಹತ್ರ ಏನ್ ಹೇಳಿದ್ಲು ನೋಡಿ
ಈ ವಿಡಿಯೋ 12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು ಈ ಪುಟಾಣಿಗೆ ತನ್ನ ಅತ್ತೆ ಮೇಲಿರುವ ಪ್ರೀತಿ ಯನ್ನು ವಿವರಿಸಲು ಅಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯವು ಅತ್ತೆ ಎಷ್ಟು ಈ ಬಾಲಕನನ್ನು ಪ್ರೀತಿಸುತ್ತಾಳೆ ಎನ್ನುವುದಕ್ಕೆ ಸಾಕ್ಷಿ ಎಂದು ಕಾಮೆಂಟ್ ಮಾಡಿ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿ ಈ ಪುಟಾಣಿ ತನ್ನ ಕುಟುಂಬವನ್ನು ರಕ್ಷಣೆ ಮಾಡುತ್ತಿದ್ದಾನೆ ಹೀಗೆ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








