AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದಪ್ಪಾ ಮಾನವೀಯತೆ ಅಂದ್ರೆ; ರೆಕ್ಕೆ ಮುರಿದ ಪಾರಿವಾಳಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆತಂದ ಬಾಲಕ

ಇತ್ತೀಚೆಗಿನ ದಿನಗಳಲ್ಲಿ ಮಾನವೀಯತೆಗೆ ಬೆಲೆಯಿಲ್ಲ. ಹೀಗಾಗಿ ಯಾರಿಗಾದ್ರೂ ಕಷ್ಟ ನೋವು ಎಂದರೆ ಅವರನ್ನು ಕಂಡರೂ, ಕಾಣದವರಂತೆ ಹೋಗುವವವರೇ ಹೆಚ್ಚು. ಆದರೆ ಈ ಪುಟಾಣಿ ಬಾಲಕನ ನೋವಿಗೆ ಸ್ಪಂದಿಸುವ ಮನಸ್ಸು ನೋಡಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ. ಗಾಯಗೊಂಡಿದ್ದ ಪಾರಿವಾಳವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಂದಿದ್ದ ಈ ಪುಟ್ಟ ಬಾಲಕ ಏನು ಮಾಡಿದ್ದಾನೆ ಗೊತ್ತಾ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Video: ಇದಪ್ಪಾ ಮಾನವೀಯತೆ ಅಂದ್ರೆ; ರೆಕ್ಕೆ ಮುರಿದ ಪಾರಿವಾಳಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆತಂದ ಬಾಲಕ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Jul 28, 2025 | 10:30 AM

Share

ಅರುಣಾಚಲ ಪ್ರದೇಶ, ಜುಲೈ 28: ಈಗಿನ ಕಾಲದ ಜನರು ಸ್ವಾರ್ಥಿಗಳು, ತನ್ನದು ಎಂದು ಯೋಚನೆ ಮಾಡುತ್ತಾರೆ ಬಿಟ್ಟರೆ ಬೇರೆಯವರ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಹೀಗಾಗಿ ಈಗಿನ ಜನರಲ್ಲಿ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನಸ್ಸಾಗಲಿ, ಮಾನವೀಯತೆ (humanity) ಯಾಗಲಿ ಇಲ್ಲ ಎಂದು ಹೇಳುವುದನ್ನು ನೋಡಿರಬಹುದು. ಇಂತಹ ಜನರ ನಡುವೆ ಒಳ್ಳೆಯ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ. ಅದರಲ್ಲಿಯೂ ಕೆಲವರು ಈ ಮೂಕ ಪ್ರಾಣಿಗಳಿಗೆ ನೋವಾದರೂ ಸಹಿಸಿಕೊಳ್ಳಲಾಗದು. ಇದೀಗ ಈ ಪುಟ್ಟ ಬಾಲಕನದ್ದು ಎಷ್ಟು ಒಳ್ಳೆಯ ಮನಸ್ಸು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ರೆಕ್ಕೆ ಮುರಿದ ಗಾಯಗೊಂಡಿದ್ದ ಪಾರಿವಾಳವನ್ನುಕೈಯಲ್ಲಿ ಹಿಡಿದುಕೊಂಡು, ಅಳುತ್ತಲೇ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾನೆ ಈ ಪುಟಾಣಿ. ಆದರೆ ಚಿಕಿತ್ಸೆ ನೀಡಿದ್ರು ಪಾರಿವಾಳ ಮೃತ ಪಟ್ಟಿದೆ. ಈ ಘಟನೆಯೂ ಅರುಣಾಚಲ ಪ್ರದೇಶದ ಲೋಂಗ್ಡಿಂಗ್ ಜಿಲ್ಲೆಯಲ್ಲಿ (Longding district of Arunachal Pradesh) ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ಬಾಲಕ ಮಾಡಿದ್ದೇನು ಎಂದು ತಿಳಿದ್ರೆ ನಿಮ್ಮ ಕರುಳು ಚುರ್ ಎನ್ನುತ್ತೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

indiatodayne ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆಯಲ್ಲಿ ರೆಕ್ಕೆ ಮುರಿದು ಗಾಯಗೊಂಡಿದ್ದ ಪಾರಿವಾಳವನ್ನು ಅಳುತ್ತಲೇ ಆಸ್ಪತ್ರೆಗೆ ಕರೆತರುವುದನ್ನು ಕಾಣಬಹುದು. ಇದನ್ನು ಕಂಡ ಆಸ್ಪತ್ರೆಯ ಸಿಬ್ಬಂದಿ ಪಾರಿವಾಳವನ್ನು ಮರದ ಸ್ಟೂಲ್ ಮೇಲೆ ಇಡಲು ಹೇಳಿದ್ದು, ಔಷಧಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಆ ಬಾಲಕನು ಮಾತ್ರ ಆತಂಕದಲ್ಲಿಯೇ ಪಾರಿವಾಳದ ಬಳಿಯೇ ನಿಂತಿರುವುದನ್ನು ನೋಡಬಹುದು. ಚಿಕಿತ್ಸೆ ನೀಡಿದರೂ ಕೂಡ ಈ ಪಾರಿವಾಳದ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ಪುಟ್ಟ ಬಾಲಕ ‘ಅದು ಸತ್ತೊಯ್ತಾ?’ ಎಂದು ಕೇಳುತ್ತಾ ಬಾಲಕ ಅಳುವುದನ್ನು ಕಾಣಬಹುದು. ಈ ವೇಳೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಬಾಲಕನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದು ಆತನ ಅಳು ಮಾತ್ರ ನಿಲ್ಲಲಿಲ್ಲ. ಬಿಕ್ಕಳಿಸಿ ಅಳುತ್ತಾ ಸತ್ತ ಪಾರಿವಾಳವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವುದನ್ನು ಕಾಣಬಹುದು.

ಇದನ್ನೂ ಓದಿ
Image
ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ
Image
ಪ್ರವಾಸಿ ತಾಣದಲ್ಲಿ ಬಿದ್ದ ಕಸ ಹೆಕ್ಕಿ ಸ್ವಚ್ಛತೆಯ ಅರಿವು ಮೂಡಿಸಿದ ವಿದೇಶಿಗ
Image
ಏರ್​ಪೋರ್ಟ್ ಇಲ್ಲ, ಕರೆನ್ಸಿ ಇಲ್ಲ, ಆದರೂ ಶ್ರೀಮಂತ ದೇಶ
Image
ಡೆಲಿವರಿ ಬಾಯ್ ಆಗಿ ದಿನನಿತ್ಯ ದಣಿದಿದ್ದೇನೆ, ಈ ಬದುಕಿನ ಆಯ್ಕೆಗೆ ನಾನೇ ಕಾರಣ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ

ಈ ವಿಡಿಯೋ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಈ ಪುಟ್ಟ ಬಾಲಕನ ಹೃದಯಶ್ರೀಮಂತಿಕೆ ನೋಡಿ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಮಕ್ಕಳನ್ನು ಬೆಳೆಸುವುದು ತಂದೆತಾಯಿಯರ ಕೈಯಲ್ಲಿ ಇರುತ್ತದೆ. ಪ್ರತಿಯೊಂದುಯೊಂದು ಜನರೇಷನ್ ನಲ್ಲಿ ಇಂತಹ ಮಕ್ಕಳು ಬೇಕೆ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಆತನ ಮುಗ್ಧತೆ ಹಾಗೂ ಶುದ್ಧ ಪ್ರೀತಿಯನ್ನು ಕಂಡಾಗ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಬೇರೆಯವರ ನೋವಿಗೆ ಸ್ಪಂದಿಸುವ ಗುಣ ಕಾಣಸಿಗುವುದೇ ಅಪರೂಪ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ