Video: ಪ್ರವಾಸಿ ತಾಣದಲ್ಲಿ ಬಿದ್ದ ಕಸ ಹೆಕ್ಕಿ ಸ್ವಚ್ಛತೆಯ ಅರಿವು ಮೂಡಿಸಿದ ವಿದೇಶಿಗ
ಸ್ವಚ್ಛತೆಯ ಬಗ್ಗೆ ಎಷ್ಟೇ ಹೇಳಿದರೂ ಕೂಡ ಕೂಡ ನಮ್ಮಲ್ಲಿ ಕೆಲವರು ಪ್ರವಾಸಿ ತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಕಸ ಎಸೆಯ ಬೇಡಿ, ಸ್ವಚ್ಛತೆಯ ಬಗ್ಗೆ ಗಮನ ಕೊಡಿ ಎಂದು ದೊಡ್ಡ ಅಕ್ಷರಗಳಲ್ಲಿ ಬೋರ್ಡ್ ಗಳಿದ್ದರೂ ಅದನ್ನು ಕಣ್ಣೆತ್ತಿ ನೋಡುವುದಕ್ಕೂ ಹೋಗುವುದಿಲ್ಲ. ಇದೀಗ ವಿದೇಶಿ ಪ್ರವಾಸಿಗರೊಬ್ಬರು ಭಾರತೀಯ ಪ್ರವಾಸಿಗರಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ. ಇನ್ಯಾರೋ ಪ್ರವಾಸಿಗರು ಎಸೆದು ಹೋದ ಕಸವನ್ನು ನೋಡಿದ ತಕ್ಷಣ ಈ ವಿದೇಶಿಗ ಏನ್ ಮಾಡಿದ ಗೊತ್ತಾ? ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ

ಹಿಮಾಚಲ ಪ್ರದೇಶ, ಜುಲೈ 27: ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಕೆಲವು ಘಟನೆಗಳಿಂದಲೇ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ವಿಷಯಗಳು ಹಲವಾರಿದೆ. ಆದರೆ ಭಾರತಕ್ಕೆ ಬಂದ ವಿದೇಶಿಗರು (foreigner) ಕೂಡ ನಮ್ಮ ಭಾರತೀಯರಿಗೆ ಬದುಕಿಗೆ ಬೇಕಾದ ಅಗತ್ಯ ವಿಚಾರಗಳನ್ನು ತಮ್ಮ ನಡೆ ನುಡಿಯಲ್ಲಿ ತಿಳಿಸುವ ಸನ್ನಿವೇಶಗಳು ಎದುರಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಹೌದು, ಇಲ್ಲೊಬ್ಬ ವಿದೇಶಿಗ ಪ್ರವಾಸಿತಾಣದಲ್ಲಿ ಬಿದ್ದ ಕಸ ಹೆಕ್ಕಿ ಕಸದ ಬುಟ್ಟಿಗೆ ಹಾಕುವ ಮೂಲಕ ಸ್ವಚ್ಛತೆಯ ಕಡೆಗೆ ಗಮನ ಕೊಡಿ ಎನ್ನುವುದನ್ನು ತಿಳಿಸಿದ್ದಾನೆ. ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ (Kangra of Himachal Pradesh) ಜಲಪಾತದ ನೋಡಲು ಬಂದಿದ್ದ ವೇಳೆ ವಿದೇಶಿಗನು ತನ್ನ ಒಳ್ಳೆಯ ನಡೆಯಿಂದ ಗಮನ ಸೆಳೆದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
@Nikhilsaini ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಸ್ಥಳೀಯ ಪ್ರವಾಸಿಗರು ನಾಚಿಕೆಯಿಲ್ಲದೆ ಇಂತಹ ಅದ್ಭುತ ಸ್ಥಳಗಳಲ್ಲಿ ಕಸ ಹಾಕುತ್ತಿದ್ದರೆ, ವಿದೇಶಿ ಪ್ರವಾಸಿಗರು ಪ್ರಕೃತಿಯ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಯಾವುದೇ ಸರ್ಕಾರ ಅಥವಾ ಆಡಳಿತವನ್ನು ದೂಷಿಸಬಾರದು – ನಮಗೆ ಎಂದಾದರೂ ಸ್ವಚ್ಛ ದೇಶ ಬೇಕಾದರೆ ಜನರು ಬದಲಾಗಬೇಕು. ಹಿಮಾಚಲ ಪ್ರದೇಶದ ಕಾಂಗ್ರಾದಿಂದ ವೀಡಿಯೊ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Shameful a foreign tourist is more concerned about nature’s beauty while local tourists keep shamelessly littering such stunning places. No govt or administration is to be blamed — it’s the people who need to change if we ever want a clean country. Video from Kangra, Himachal. pic.twitter.com/AbZfcG28G8
— Nikhil saini (@iNikhilsaini) July 24, 2025
ವಿದೇಶಿಗನೊಬ್ಬ ಸ್ವಚ್ಛಂದವಾಗಿ ಹರಿಯುತ್ತಿರುವ ಜಲಪಾತವಿರುವ ತಾಣಕ್ಕೆ ಭೇಟಿ ನೀಡಿದ್ದಾನೆ. ಈ ವೇಳೆಯಲ್ಲಿ ಇಲ್ಲಿಗೆ ಬಂದ ಯಾರೋ ಪ್ರವಾಸಿಗರು ಎಸೆದು ಹೋದ ಕಸವನ್ನು ಹೆಕ್ಕಿ ತಂದು ಕಸದ ಬುಟ್ಟಿಗೆ ಹಾಕುತ್ತಿರುವುದನ್ನು ನೀವಿಲ್ಲಿ ಕಾಣಬಹುದು. ನಾನು ಒಂದು ದಿನ ಬಿಡುವು ಸಿಕ್ಕಿದ್ದರೆ ಇಲ್ಲಿಯೇ ಕುಳಿತು ಜನರಿಗೆ ಇದನ್ನು ಇಲ್ಲಿಂದ ತೆಗೆಯಿರಿ ಎಂದು ಹೇಳುತ್ತಿದ್ದೆ. ಅದನ್ನು ಹೇಳುವುದಕ್ಕೆ ನನಗೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿರುವುದನ್ನು ನೀವಿಲ್ಲಿ ನೋಡಬಹುದು.
ಜುಲೈ 24 ರಂದು ಶೇರ್ ಮಾಡಲಾದ ಈ ವಿಡಿಯೋ 5.4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ವಿದೇಶಿಗ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. ಇಂತಹ ಮನಸ್ಥಿತಿಯಲ್ಲಿ ಬದಲಾವಣೆ ಬೇಕು. ಅದು ಕೆಟ್ಟದು ಎಂದು ನಿಮ್ಮ ಮಕ್ಕಳಿಗೆ ಕಲಿಸಿ. ಹೆತ್ತವರು ತಮ್ಮ ಮಕ್ಕಳಿಗೆ ಕಾರಿನಲ್ಲಿ ಕುಳಿತು ರಸ್ತೆಗೆ ಕಸ ಎಸೆಯುವುದನ್ನು ನಾನು ನೋಡಿದ್ದೇನೆ. ನಮ್ಮಲ್ಲಿ ನಾಗರಿಕ ಪ್ರಜ್ಞೆ ಶೂನ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಜನಸಂಖ್ಯೆಗಿಂತ ಕಂಪನಿಗಳ ಸಂಖ್ಯೆಯೇ ಹೆಚ್ಚು; ಏರ್ಪೋರ್ಟ್ ಇಲ್ಲ; ಜನರು ಭಾರೀ ಶ್ರೀಮಂತರು; ಇದು ಲಿಕ್ಟನ್ಸ್ಟೈನ್ ದೇಶದ ಕಥೆ
ಇನ್ನೊಬ್ಬ ಬಳಕೆದಾರರು, ಹೆಚ್ಚಿನ ಭಾರತೀಯರು ಭೂಮಿ ಮೇಲಿನ ಅತ್ಯಂತ ಕೊಳಕಿನ ಜನರು. ಅಂತಹ ಬಳಿ ಈ ವಿಚಾರ ಹೇಳಿದಾಗ ಅವರು ಸಂಸ್ಕೃತಿ, ಧರ್ಮ, ರಾಷ್ಟ್ರೀಯತೆಯ ಬಗ್ಗೆ ಜ್ಞಾನ ನೀಡಲು ಮುಂದಾಗುತ್ತಾರೆ. ಆದರೆ ಅವರುಗಳು ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಬಯಸುವುದಿಲ್ಲ. ನಮ್ಮಲ್ಲಿ ಅನೇಕರಿಗೆ ನಾಗರಿಕ ಪ್ರಜ್ಞೆಯ ಕೊರತೆಯಿದೆ ಎಂದು ಹೇಳಿದ್ದಾರೆ. ಎಷ್ಟು ಮುಜುಗರದ ಸಂಗತಿ, ಜನರು ತಮ್ಮನ್ನು ತಾವು ಮೊದಲು ನೋಡಿಕೊಳ್ಳಬೇಕು. ಸ್ವಚ್ಛತೆಯ ಮೂಲಭೂತ ನಿಯಮವನ್ನು ಅನುಸರಿಸಲು ಇತರರು ನೆನಪಿಸಬೇಕೆನ್ನುವುದು ನಂಬಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Sun, 27 July 25








