AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಓದು ಅರ್ಧಕ್ಕೆ ಬಿಟ್ಟೆ, ಈಗ ಡೆಲಿವರಿ ಬಾಯ್ ಆಗಿ ಕೆಲಸ, ನನ್ನ ಬದುಕು ದಿನನಿತ್ಯ ಹೋರಾಟ: ಕಷ್ಟ ನೆನೆದು ಕಣ್ಣೀರಿಟ್ಟ ಯುವಕ

ಇತ್ತೀಚೆಗಿನ ದಿನಗಳಲ್ಲಿ ಕುಳಿತಲ್ಲಿಯೇ ಆನ್ಲೈನ್‌ನಲ್ಲಿ ಫುಡ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಆರ್ಡರ್ ಮಾಡುವವರೇ ಹೆಚ್ಚು. ಕೆಲವೇ ಕೆಲವು ನಿಮಿಷಗಳಲ್ಲೇ ನೀವು ಆರ್ಡರ್ ಮಾಡಿದ ಫುಡ್ ನಿಮ್ಮ ಕೈ ಸೇರುತ್ತದೆ. ಈ ವಿಚಾರದಲ್ಲಿ ಡೆಲಿವರಿ ಬಾಯ್‌ಗಳ ಶ್ರಮ ಖಂಡಿತವಿರುತ್ತದೆ. ಕೆಲವೊಮ್ಮೆ ಹತ್ತು ಹದಿನೈದು ಲೇಟ್ ಆದರೆ ಡೆಲಿವರಿ ಬಾಯ್ ಗಳ ಮೇಲೆ ಗ್ರಾಹಕರು ರೇಗಾಡುತ್ತಾರೆ. ಅದೆಷ್ಟೋ ಜನರಿಗೆ ತಮ್ಮ ಬದುಕಿಗಾಗಿ ಈ ಕೆಲಸವನ್ನು ಅವಲಂಬಿಸಿಕೊಳ್ಳುವುದು ಅನಿವಾರ್ಯ. ಆದರೆ ಇಲ್ಲೊಬ್ಬ ಡೆಲಿವರಿ ಬಾಯ್ ತನ್ನ ಕಷ್ಟವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ತಾನು ಇಲ್ಲಿ ನಾಯಿಯಂತೆ ದುಡಿಯುತ್ತಿದ್ದೇನೆ ಹಾಗೂ ದಣಿದಿದ್ದೇನೆ ಎಂದು ತನ್ನ ಬದುಕು ಹೀಗಾಗಲು ಕಾರಣವೇನು ಎನ್ನುವುದನ್ನು ಇಲ್ಲಿ ವಿವರಿಸಿದ್ದಾನೆ.

Video: ಓದು ಅರ್ಧಕ್ಕೆ ಬಿಟ್ಟೆ, ಈಗ ಡೆಲಿವರಿ ಬಾಯ್ ಆಗಿ ಕೆಲಸ, ನನ್ನ ಬದುಕು ದಿನನಿತ್ಯ ಹೋರಾಟ: ಕಷ್ಟ ನೆನೆದು ಕಣ್ಣೀರಿಟ್ಟ ಯುವಕ
ವೈರಲ್ ವಿಡಿಯೋ Image Credit source: Instagram
ಸಾಯಿನಂದಾ
|

Updated on: Jul 27, 2025 | 12:21 PM

Share

ಎಲ್ಲರಂತೆ ನಾವು ಕೂಡ ಬದುಕಬೇಕು, ಅಂದುಕೊಂಡದ್ದು ಖರೀದಿಸಬೇಕು, ಹೀಗೆ ನೂರಾರು ಆಸೆಗಳಿರುತ್ತದೆ. ಈ ಎಲ್ಲಾ ಆಸೆ ಕನಸುಗಳನ್ನು ಪೂರೈಸಿಕೊಳ್ಳಲು ಉದ್ಯೋಗವೊಂದು (education) ಕೈಯಲ್ಲಿದ್ದರೆ ಚಂದ. ಆದರೆ ಕೆಲವರು ತಾವು ಉದ್ಯೋಗ ಮಾಡುತ್ತಿರುವ ಕ್ಷೇತ್ರದಲ್ಲಿ ಎಷ್ಟೇ ಅನಿವಾರ್ಯವಾದರೂ ದುಡಿಯುತ್ತಾರೆ. ಅಧಿಕ ಒತ್ತಡವೆಂದಾಗ ಆ ಉದ್ಯೋಗ ತೊರೆದು ಬೇರೆ ಉದ್ಯೋಗ ಹುಡುಕುತ್ತಾರೆ. ಆದರೆ ಚೆನ್ನಾಗಿ ಓದಿಕೊಂಡಿದ್ದರೆ ಉದ್ಯೋಗ ಹುಡುಕಬಹುದು, ಓದಿಲ್ಲವೆಂದಾದರೆ ಉದ್ಯೋಗ ಸಿಗುವುದೇ ಕಷ್ಟ. ಹೌದು, ಚೀನಾದ (China) ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುತ್ತಿರುವ ಯುವಕನ ಪರಿಸ್ಥಿತಿಯು ಹೀಗೆಯೇ ಆಗಿದೆ. ಓದುವ ವಯಸ್ಸಿನಲ್ಲಿ ಓದದೇ, ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದರೆ ಇದೀಗ ತಾನು ಡೆಲಿವರಿ ಬಾಯ್ ಆಗಿ ಎಷ್ಟು ಕಷ್ಟಪಡುತ್ತಿದ್ದೇನೆ ಎನ್ನುವುದನ್ನು ತಿಳಿಸಿದ್ದಾರೆ.

chinaminutes ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಯುವಕನು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಹೋರಾಟದ ಬದುಕನ್ನು ನೆನೆದು ಕಣ್ಣೀರು ಹಾಕಿದ್ದಾನೆ. ನನಗೆ ಓದಲು ಇಷ್ಟವಿರಲಿಲ್ಲ. ಹೀಗಾಗಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಿಲ್ಲ. ಶಿಕ್ಷಕರು ತನ್ನನ್ನು ಚೆನ್ನಾಗಿ ಓದು, ಅರ್ಧಕ್ಕೆ ಶಿಕ್ಷಣವನ್ನು ಬಿಡಬೇಡ ಎಂದು ಎಷ್ಟು ಹೇಳಿದರೂ ನಾನು ಕೇಳಲಿಲ್ಲ. ಸಣ್ಣ ವಯಸ್ಸಿನಲ್ಲಿ ಉದ್ಯೋಗ ಪಡೆದು ಬದುಕಿನಲ್ಲಿ ಗೆಲ್ಲುವೆ ಎನ್ನುವ ಭರವಸೆಯಿಂದ ಓದು ತ್ಯಜಿಸಿದೆ. ಆದರೆ ತಾನು ಈ ಬದುಕಿನಲ್ಲಿ ಸೋತಿದ್ದೇನೆ. ಈಗ ಎಷ್ಟು ಶಿಕ್ಷಣ ಎಷ್ಟು ಮುಖ್ಯ ಎನ್ನುವುದು ನನಗೆ ಈಗ ತಿಳಿಯುತ್ತಿದೆ ಎಂದಿದ್ದಾನೆ.

ಇದನ್ನೂ ಓದಿ
Image
CISF ಸಿಬ್ಬಂದಿಯ ಮುಖದಲ್ಲಿ ನಿಶ್ಕಲ್ಮಶ ನಗು ತಂದ ಯುವಕ
Image
ಮಾಲೀಕರ ಮೇಲೆ ಈ ಮೂಕ ಪ್ರಾಣಿಗಳಿಗೆ ಅದೆಷ್ಟು ಪ್ರೀತಿ ನೋಡಿ
Image
ಡಾಲರ್‌ಗಿಂದ ಭಾರತೀಯ ರೂಪಾಯಿ ಉತ್ತಮವೇ?
Image
ಪ್ರತಿದಿನ ಅನ್ನ ನೀರು ಬಿಟ್ಟು ಬಿಯರ್​​​ ಕುಡಿದು ವ್ಯಕ್ತಿ ಸಾವು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೂ ಈ ಕ್ಷೇತ್ರದಲ್ಲಿ ತಾನು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಬದುಕು ದಿನನಿತ್ಯ ಹೋರಾಟ. ನಾನು ಹತ್ತು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನಾಯಿಯಂತೆ ದಣಿದಿದ್ದೇನೆ. ನಾನು ಒಂದು ಕ್ಷಣವು ಸುಮ್ಮನೆ ಕೂರುವ ಪ್ರಯತ್ನ ಮಾಡಿಲ್ಲ. ನಾನು ಹಾಗೆ ಕುಳಿತುಕೊಂಡರೆ ತನ್ನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಇದುವೇ ನನ್ನ ಜೀವನದ ದೊಡ್ಡ ಚಿಂತೆಯಾಗಿದೆ. ನನ್ನನ್ನು ಹೆತ್ತು ಬೆಳೆಸಿದ ನನ್ನ ಹೆತ್ತವರಿಗೆ ಒಳ್ಳೆಯ ಮಗನಾಗಲಿಲ್ಲ. ಅವರಿಗೆ ಒಳ್ಳೆಯ ಜೀವನ ನೀಡಲು ಸಾಧ್ಯವಾಗಿಲ್ಲ ಎನ್ನುವ ಬೇಜಾರು ನನಗೆ ಇದೆ ಎಂದು ಹೇಳಿ ಕಣ್ಣೀರು ಹಾಕಿದ್ದಾನೆ.

ಇದನ್ನೂ ಓದಿ: Viral: 7.3 ಕಿ.ಮೀ ಕ್ರಮಿಸಲು ನನಗೆ 73 ನಿಮಿಷಗಳು ಬೇಕೇ ಬೇಕು; ಇದು ನನ್ನ ದಿನನಿತ್ಯದ ಪಾಡು

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೂ ಈ ಯುವಕನ ಕಷ್ಟ ನೋಡಿ ಮರುಗಿದ್ದಾರೆ. ಬಳಕೆದಾರರೊಬ್ಬರು, ದಯವಿಟ್ಟು ಕಣ್ಣೀರು ಹಾಕಬೇಡಿ, ಡಿಗ್ರಿ ಪಡೆದುಕೊಂಡಿವರು ಕೂಡ ದಿನನಿತ್ಯ ಹೋರಾಟ ನಡೆಸುತ್ತಲೇ ಇದ್ದಾರೆ, ಹೆಚ್ಚು ಚಿಂತಿಸಬೇಡಿ ಎಂದು ಧೈರ್ಯ ತುಂಬಿದ್ದಾರೆ. ಮತ್ತೊಬ್ಬರು, ನಾನು ಒಳ್ಳೆಯ ಶಿಕ್ಷಣ ಪಡೆದುಕೊಂಡಿದ್ದೇನೆ. ಆದರೆ ನನ್ನ ಪರಿಸ್ಥಿತಿ ಕೂಡ ನಿಮ್ಮಂತೆಯೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಬದುಕಿನಲ್ಲಿ ಯಾವುದೇ ಚಿಂತೆ ಬೇಡ. ನಿಮ್ಮಿಂದ ಎಲ್ಲವೂ ಸಾಧ್ಯ. ಯಾವುದರ ಬಗ್ಗೆ ಯೋಚನೆ ಮಾಡದೇ ಮುನ್ನುಗ್ಗಿ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ