AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: CISF ಸಿಬ್ಬಂದಿಯ ಮುಖದಲ್ಲಿ ನಿಶ್ಕಲ್ಮಶ ನಗು ತಂದ ಯುವಕ, ಹೇಗೆ ಗೊತ್ತಾ?

ದೇಶದ ಸೇನೆಗಳು ನಮ್ಮ ರಕ್ಷಣೆಯನ್ನು ಮಾಡಲು 24 ಗಂಟೆ ಕೆಲಸ ಮಾಡುತ್ತಾರೆ. ಆದರೆ ಅವರ ಮುಖದಲ್ಲಿರುವ ನಗುವನ್ನು ನೋಡುವುದು ಅಪರೂಪ, ಆದರೆ ಇಲ್ಲೊಬ್ಬ ಯುವಕ CISF ಸಿಬ್ಬಂದಿ ಚಿತ್ರ ಬರೆದು ಅವರ ಮುಖದಲ್ಲಿ ನಿಶ್ಕಲ್ಮಶ ನಗು ತರಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ನೋಡುಗರ ಮನ ಗೆದ್ದಿದೆ.

Viral: CISF ಸಿಬ್ಬಂದಿಯ ಮುಖದಲ್ಲಿ ನಿಶ್ಕಲ್ಮಶ ನಗು ತಂದ ಯುವಕ, ಹೇಗೆ ಗೊತ್ತಾ?
ವೈರಲ್​ ವಿಡಿಯೋ
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on: Jul 26, 2025 | 5:53 PM

Share

ಮೆಟ್ರೋ, ಬಸ್​ಗಳಲ್ಲಿ ಚಿತ್ರ ಬಹರಗಾರರು ಕ್ಯೂಟ್​​ ಆಗಿರುವ ಅಥವಾ ಮುಗ್ದತೆಯ ಮುಖ ಇರುವ ವ್ಯಕ್ತಿಗಳ ಚಿತ್ರವನ್ನು ಬರೆದು ಅವರಿಗೆ ಖುಷಿಪಡಿಸುವ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗುವುದನ್ನು ಆಗ್ಗಾಗೆ ನೋಡುತ್ತಿರುತ್ತೇವೆ. ಇದೀಗ ಇಲ್ಲೊಂದು ಅಂತಹದೇ  ವಿಡಿಯೋ ವೈರಲ್​​ ಆಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನ ಅಧಿಕೃತ ಹ್ಯಾಂಡಲ್ ಒಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ಪಡೆದಿದೆ ಹಾಗೂ ವೈರಲ್​​​ ಆಗಿದೆ. ಕರ್ತವ್ಯದಲ್ಲಿರುವ CISF ಸಿಬ್ಬಂದಿ (Delhi Metro) ಮುಖದ ಚಿತ್ರವನ್ನು ಕಲಾವಿದ ಬಿಡಿಸಿದ್ದಾರೆ. ಈ ಚಿತ್ರವನ್ನು ನೋಡಿ CISF ಸಿಬ್ಬಂದಿ ಮುಖದಲ್ಲಿ ಮೂಡಿದ ಮುಗ್ದ ನಗುವಿಗೆ ಸೋಶಿಯಲ್​​ ಮೀಡಿಯಾ ಬಳಕೆದಾರರೂ ಫುಲ್​​ ಫಿದಾ ಆಗಿದ್ದಾರೆ.

ದೆಹಲಿ ಮೊಟ್ರೋದಲ್ಲಿ ದಿನನಿತ್ಯದ ಗದ್ದಲದ ನಡುವೆ ಅಪರೂಪದ ಮತ್ತು ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ ಎಂದು ಬಳಕೆದಾರರು ಹೇಳಿದ್ದಾರೆ. ಈ ವಿಡಿಯೋದಲ್ಲಿ ದೃಶ್ಯದಲ್ಲಿ ಹೇಳುವ ಪ್ರಕಾರ, ದೆಹಲಿ ಮೆಟ್ರೋ ಬೋಗಿಯೊಳಗೆ ಕುಳಿತಿರುವ ಸಿಐಎಸ್ಎಫ್ ಅಧಿಕಾರಿಯೊಬ್ಬರ ವಿಡಿಯೋವನ್ನು ತೋರಿಸಿರುವುದನ್ನು ಕಾಣಬಹುದು. ಅವರ ಮುಂದೆಯೇ ಕುಳಿತಿದ್ದ ಕಲಾವಿದ, ಒಂದು ಬಿಳಿ ಶಿಟ್​​ನಲ್ಲಿ CISF ಸಿಬ್ಬಂದಿಯ ಮುಖವನ್ನು ಚಿತ್ರಿಸುತ್ತಾರೆ. ಈ ಚಿತ್ರ ಮಾಡಿದ ಮೇಲೆ ಈ ಚಿತ್ರವನ್ನು CISF ಸಿಬ್ಬಂದಿ ಮುಂದೆ ತೋರಿಸುತ್ತಾರೆ. ಈ ಚಿತ್ರವನ್ನು ನೋಡಿ CISF ಸಿಬ್ಬಂದಿ ಮುಖದಲ್ಲಿ ಬಂದು ಆ ನಗು ನೋಡಿ ಅಲ್ಲಿನ ಜನ ಒಂದು ಬಾರಿ ಖುಷಿಯಾಗಿದ್ದಾರೆ.

ಇದನ್ನೂ ಓದಿ
Image
ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ
Image
ಹುಲಿಯಣ್ಣನ ಮೈ ಮೇಲೆ ಒರಗಿ ವಿಶ್ರಾಂತಿ ಪಡೆದ ಸಿಂಹ
Image
ಅಯ್ಯೋ ಅಮ್ಮ ನನಗೆ ಕುರ್ಚಿಯಲ್ಲಿ ಕೂರೋಕೆ ಆಗ್ತಿಲ್ಲ, ಈ ಮರಿಯಾನೆಯ ಕಷ್ಟ ನೋಡಿ
Image
ವಿಕೆಟ್‌ ಕೀಪರ್‌ ಆಗಿ ಅದ್ಭುತ ಪ್ರದರ್ಶನ ನೀಡಿದ ಶ್ವಾನ

ಇದನ್ನೂ ಓದಿ: ಡಾಲರ್‌ಗಿಂತ ರೂಪಾಯಿ ಬೆಟರ್‌ ಆಗಿದೆ ಎಂದ ಅಮೆರಿಕನ್‌ ಮಹಿಳೆ; ಅದು ಹೇಗಂತೀರಾ?

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ನಂತರ CISF ಸಿಬ್ಬಂದಿ ಕಲಾವಿದನ್ನು ಕೈ ಕೈಕುಲುಕುತ್ತಾ ಧನ್ಯವಾದ ಹೇಳಿದ್ರು, ಜತೆಗೆ ತುಂಬಾ ಬಾವುಕರಾದರು. ಅನೇಕರು ಈ ವಿಡಿಯೋಗೆ ಕಾಮೆಂಟ್​​ ಮಾಡಿದ್ದಾರೆ. ಈ ವೀಡಿಯೊವನ್ನು 67 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕಲಾವಿದನ ಭಾವನಾತ್ಮಕ ಪ್ರಯತ್ನಕ್ಕೆ ಧನ್ಯವಾದಗಳು ಎಂದು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ ಮಾಡಿದ್ದಾರೆ. CISF ಸಿಬ್ಬಂದಿ ನೀಡಿದ ಉತ್ತಮ ಗೌರವ, ಸಮವಸ್ತ್ರದ ಹಿಂದಿನ ಮಾನವ ಚೈತನ್ಯವನ್ನು ನಿಜವಾಗಿಯೂ ಒಳ್ಳೆಯದು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ನೀವು ಇನ್ನೂ ಹೆಚ್ಚಿನ ಪ್ರೀತಿ ಮತ್ತು ಗೌರವಕ್ಕೆ ಅರ್ಹರು! ನಿಮ್ಮ ತ್ಯಾಗಗಳಿಗೆ ಧನ್ಯವಾದಗಳು! ಎಂದು ಮತ್ತೊಬ್ಬ ಬಳಕೆದಾರ ಹಾರೈಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ